ಚಾರ್ಮಾಡಿ ಘಾಟ್‌ನ 10ನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ.
ಕಾಡಾನೆ ರಸ್ತೆಮಧ್ಯೆ ನಿಂತು ರಸ್ತೆ ತಡೆದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮರವೊಂದನ್ನು ರಸ್ತೆಗೆ ಕೆಡವಿಕೊಂಡು ರಾಜ ಗಾಂಭೀರ್ಯದಿಂದ ರಸ್ತೆಯಲ್ಲಿಯೇ ಅದನ್ನು ತಿನ್ನುತ್ತಾ ಆನೆ ಗಂಟೆಗಟ್ಟಲೆ ನಿಂತಿತ್ತು. ಇದರಿಂದ ರಸ್ತೆಯ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಾಹನ ಸವಾರರು ಆತಂಕದಿಂದ ಕಾದು ಕುಳಿತರೆ, ಸ್ಥಳದಲ್ಲಿ ಅಸ್ತವ್ಯಸ್ತ ಸಂಚಾರ ಕಂಡುಬಂತು. ಇಂತಹ ಘಟನೆ ಚಾರ್ಮಾಡಿ ಘಾಟ್ ನಲ್ಲಿ ಪದೇ ಪದೇ ಸಂಭವಿಸುತ್ತಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅಂಬುಲೆನ್ಸ್ ಸಂಚಾರಕ್ಕೆ, ಆರೋಗ್ಯ ಸಮಸ್ಯೆ, ತುರ್ತು ಕಾರ್ಯನಿಮಿತ್ತ ಸಾಗುವವರಿಗೆ ಬಹಳ ಸಮಸ್ಯೆ ಆಗುತ್ತಿದೆ. ಕಾಡಾನೆ ವಾರಕ್ಕೆ ಎರಡು ಮೂರು ಬಾರಿ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದರು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ.



