suddi-5 (2)

 

 

ಚಿಕ್ಕಮಗಳೂರು  ನಗರದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಯ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶುಕ್ರವಾರ ಸ್ವಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ವಾಗಿ ಶಾಲಾ ಬ್ಯಾಗ್‍ಗಳನ್ನು ವಿತರಿಸಲಾಯಿತು.

ಈ ವೇಳೆ ಸ್ವಚ್ಚ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಡಾ|| ಶುಭ ವಿಜಯ್ ಮಾತನಾಡಿ ಎಳೆ ವಯ ಸ್ಸಿನಿಂದ ಮಕ್ಕಳು ವಿದ್ಯಾಭ್ಯಾಸ ಹಾಗೂ ಪರಿಸರ ಬಗ್ಗೆ ಕಾಳಜಿ ಹೊಂದಬೇಕು. ಶಾಲಾವರಣದಲ್ಲಿ ಸಸಿ ನೆಡು ವುದು ಹಾಗೂ ಸ್ವಚ್ಚತೆ ಕಾಪಾಡುವುದು ಪ್ರತಿ ವಿದ್ಯಾರ್ಥಿಗಳ ಕರ್ತವ್ಯ ಎಂದು ತಿಳಿಸಿದರು.

ವಿದ್ಯಾರ್ಥಿದೆಸೆಯಿಂದಲೇ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಶಿಸ್ತು, ಸಮ ಯಪಾಲನೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸುತ್ತಮುತ್ತಲಿನ ಪರಿಸರ ವಾತಾವರಣವನ್ನು ಸ್ವಚ್ಚಂಧವಾಗಿ ಕಾಪಾಡಿಕೊಳ್ಳಬೇಕು. ಕರಿದ ಪದಾರ್ಥಗಳನ್ನು ಕಡಿಮೆಗೊಳಿಸಿ, ಪೌಷ್ಠಿಕಾಂಶ ಆಹಾರ ಸೇವಿ ಸಬೇಕು ಎಂದು ಕಿವಿಮಾತು ಹೇಳಿದರು.

ದೈನಂದಿನ ಬದುಕಿನಲ್ಲಿ ವಿದ್ಯಾರ್ಥಿಗಳು ಹಗಲು ಮತ್ತು ರಾತ್ರಿ ಎರಡು ಸಮಯದಲ್ಲಿ ಪ್ರೆಶ್ ಮಾಡ ಬೇಕು. ಈ ಅಭ್ಯಾಸಗಳು ಶರೀರವನ್ನು ಅನಾರೋಗ್ಯಕ್ಕೆ ತುತ್ತಾಗದಂತೆ ಕಾಪಾಡುತ್ತದೆ. ತರಕಾರಿ, ಮೊಟ್ಟೆ, ಕಾಳು ಹಾಗೂ ಡ್ರೈಪೂಟ್‍ಗಳ ಸೇವನೆಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿದರು.

ಸ್ವಚ್ಚ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಉಮಾ ನಾಗೇಶ್ ಮಾತನಾಡಿ ಶಾಲೆ ಅಥವಾ ಮನೆಯಂಗಳದಿ ಕಸ ಹೆಚ್ಚಳಗೊಂಡಿದ್ದರೆ ಸಂಗ್ರಹಿಸಿ ಒಂದೆಡೆ ಶೇಖರಿಸಬೇಕು. ಹೊಟ್ಟೆ ಹುಳುಗಳಿಗೆ ಕನಿಷ್ಟ 6 ತಿಂಗಳಿಗೊಮ್ಮೆ ಮಾ ತ್ರೆಗಳನ್ನು ತೆಗೆದುಕೊಳ್ಳುವ ಮೂಲಕ ಜೀವನದಲ್ಲಿ ಶಿಸ್ತು, ಸನ್ನಡತೆ ಹಾಗೂ ಶೈಕ್ಷಣಿಕ ಬೆಳವಣಿಗೆ ಶಿಕ್ಷಕರು, ಪಾಲಕರು ಗಮನಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಚ್ಚ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅನುಪಮ, ಸಹ ಕಾರ್ಯದರ್ಶಿ ಕೃಷ್ಣವೇ ಣೀ, ಸದಸ್ಯರಾದ ಶುಭರಾಮೇಗೌಡ, ರಾಜಶ್ರೀ, ವಸಂತಾ, ಶಾಲೆಯ ಮುಖ್ಯ ಶಿಕ್ಷಕ ರಾಜನಾಯ್ಕ್ ಹಾಗೂ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ