suddi-1 (2)

 

 

ಸಮಾಜಸೇವೆಯೇ ಸಂಘ-ಸಂಸ್ಥೆಗಳ ಮುಖ್ಯ ಧ್ಯೇಯವಾಗಿರಬೇಕು, ಸಮಾಜದ ಒಳಿತಿಗಾಗಿಯೇ ಅವು ಕಾರ್ಯನಿರ್ವಹಿಸಬೇಕು ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಕೆ.ಪಾಲಾಕ್ಷ ಹೇಳಿದರು.

ಚಿಕ್ಕಮಗಳೂರು ನಗರದ ಅಲ್ಲಂಪುರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ರೋಟರಿ ಕಾಫಿ ಲ್ಯಾಂಡ್ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಣ, ಆಸ್ತಿ, ಅಂತಸ್ತು, ಅಧಿಕಾರ ಶಾಶ್ವತವಲ್ಲ, ಅವು ನೀರಿನ ಮೇಲಿನ ಗುಳ್ಳೆ ಇದ್ದಂತೆ, ಬರುತ್ತವೆ ಹೋಗುತ್ತವೆ, ಆದರೆ ನಾವು ಮಾಡುವ ಪರೋಪಕಾರ, ಸೇವೆ, ಸಹಾಯ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತವೆ, ಸಮಾಜ ಸೇವೆಯಿಂದ ಮಾತ್ರ ಸಂಘ ಸಂಸ್ಥೆಗಳ ಸ್ಥಾಪನೆ ಸಾರ್ಥಕವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಚಿಕ್ಕಮಗಳೂರು ರೋಟರಿ ಕಾಫಿ ಲ್ಯಾಂಡ್ ಕಳೆದ 25 ವರ್ಷಗಳಲ್ಲಿ ಸಾರ್ಥಕ ಸೇವೆ ಮೂಲಕ ಜನಮನ್ನಣೆ ಗಳಿಸಿದೆ, ಒಂದೇ ವರ್ಷದ ಅವಧಿಯಲ್ಲಿ 813 ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿರುವ ಸಂಸ್ಥೆಯ ಅಧ್ಯಕ್ಷ ನಾಗೇಶ್ ಕೆಂಜಿಗೆ ಅವರ ಕಾರ್ಯ ಶ್ಲಾಘನೀಯ, ಅವರಂತಹ ಅಧ್ಯಕ್ಷರಿದ್ದರೆ ಯಾವುದೇ ಸಂಘ ಸಂಸ್ಥೆಗಳಾದರೂ ಬೆಳೆಯುತ್ತವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಮಾಜಿ ರಾಜ್ಯಪಾಲ ಅಭಿನಂದನ್ ಎ ಶೆಟ್ಟಿ ರೋಟರಿ ಕಾಫಿ ಲ್ಯಾಂಡ್ ಪದಾಧಿಕಾರಿಗಳು ಮತ್ತು ಸದಸ್ಯರು ಸೇವೆಗಾಗಿ ಬಾಳಬೇಕು, ಬಡವರು, ಅಸಹಾಯಕರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಸಲಹೆ ಮಾಡಿದರು.

ರಜತ ಮಹೋತ್ಸವ ಸಮಿತಿಯ ಅಧ್ಯಕ್ಷ ಬಿ.ಕೆ.ಗುರುಮೂರ್ತಿ ಮಾತನಾಡಿ ಕೇವಲ 15 ಸದಸ್ಯರಿಂದ ಆರಂಭಗೊಂಡ ರೋಟರಿ ಕಾಫಿ ಲ್ಯಾಂಡ್ ಇಂದು ನೂರಾರು ಸದಸ್ಯರನ್ನು ಹೊಂದಿದೆ, ಕಳೆದ 25 ವರ್ಷಗಳಲ್ಲಿ 23 ಅಧ್ಯಕ್ಷರನ್ನು ಕಂಡಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರೋಟರಿ ಕಾಫಿ ಲ್ಯಾಂಡ್ ಅಧ್ಯಕ್ಷ ನಾಗೇಶ್ ಕೆಂಜಿಗೆ ರಜತ ಮಹೋತ್ಸವ ಕಾರ್ಯಕ್ರಮ ತಮ್ಮ ಅವಧಿಯಲ್ಲಿ ನಡೆಯುತ್ತಿರುವುದು ತಮಗೆ ಅತ್ಯಂತ ಸಂತಸ ಮತ್ತು ಹೆಮ್ಮೆ ತಂದಿದೆ, ಸಂಸ್ಥೆ 25 ವರ್ಷಗಳ ಅವಧಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾಮಾಜಿಕ ಸೇವಾ ಕಾರ್ಯಗಳನ್ನು ನಡೆಸಿದೆ ಎಂದು ತಿಳಿಸಿದರು.

ಪ್ರಸ್ತುತ ವರ್ಷದಲ್ಲಿ ಈಗಾಗಲೇ 813 ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಾಗಿದೆ, ಈ ವರ್ಷದ ಕೊನೆಯೊಳಗೆ ಒಂದು ಸಾವಿರ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ ಎಂದ ಅವರು ಕಳೆದ 25 ವರ್ಷಗಳ ಅವಧಿಯಲ್ಲಿ ಸಂಸ್ಥೆಯ ಬೆಳವಣಿಗೆಗಾಗಿ ದುಡಿದವರಿಗೆ, ಹಾಗೂ ತಮ್ಮ ಅವಧಿಯಲ್ಲಿನ ಕಾರ್ಯ ಚಟುವಟಿಕೆಗಳಿಗೆ ಸಹಕರಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಿದರು.

ರೋಟರಿ ಕಾಫಿ ಲ್ಯಾಂಡ್ ಸಂಸ್ಥಾಪಕ ಡಿ. ಎಚ್. ನಟರಾಜ್ ಸೇರಿದಂತೆ ಕಳೆದ 25 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಸಮಾರಂಭದಲ್ಲಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು, ಬೆಳ್ಳಿ ಹಬ್ಬದ ಅಂಗವಾಗಿ ಹಿರೇಕೊಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಲವು ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಯಿತು,

ನಗರದ ಶೃಂಗಾರ್ ವೃತ್ತದಲ್ಲಿ ನಿರ್ಮಿಸಲಾದ ಕ್ಲಾಕ್ ಟವರ್ ನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು, ಪಾಲಿಟೆಕ್ನಿಕ್ ಹಿಂಭಾಗದ ಹಿಂದೂ ರುದ್ರ ಭೂಮಿಯನ್ನು ಹತ್ತು ಲಕ್ಷ ರೂ ವೆಚ್ಚದಲ್ಲಿ ನವೀಕರಿಸಿ ನಗರಸಭೆಗೆ ಹಸ್ತಾಂತರಿಸಲಾಯಿತು.

ರೋಟರಿ ಜಿಲ್ಲಾ ಉಪ ರಾಜ್ಯಪಾಲ ಪ್ರವೀಣ್ ನಾಹರ್, ವಲಯ ಸೇನಾನಿ ಮಂಜುನಾಥ್, ಯೋಜನಾ ನಿರ್ದೇಶಕ ಬಿ.ಎನ್. ಸುರೇಶ್, ಕ್ಲಬ್ ಸರ್ವೀಸ್ ನಿರ್ದೇಶಕ ರವೀಂದ್ರನಾಥ್ ನಾಯ್ಡು, ಮಾಜಿ ಉಪರಾಜ್ಯಪಾಲ ನಾಸೀರ್ ಹುಸೇನ್, ಕಾರ್ಯದರ್ಶಿ ಎಚ್.ಡಿ. ಸುಧಾ, ಆರ್.ನಾಗೇಂದ್ರ, ಗುರುಪ್ರಸಾದ್, ಡಿಜಿಇ ಬಿ.ಎಂ. ಭಟ್, ಡಿಜಿಎನ್ ವಸಂತ್ ಹೋಬಳಿದಾರ್, ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸಿ.ಜಿ. ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ