mahile 1

 

 

ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘ ಮೂಡಿಗೆರೆ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಮಂಚೇಗೌಡ ಅಧಿಕಾರ ವಹಿಸಿಕೊಂಡಿದ್ದಾರೆ.

ಶನಿವಾರ ಪಟ್ಟಣದ ರೈತ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.

ನೂತನ ಪದಾಧಿಕಾರಿಗಳಿಗೆ ಸಂಘದ ಸಂಸ್ಥಾಪಕ ಅಧ್ಯಕ್ಷ್ಯೆ ಶ್ರೀಮತಿ ಪೂರ್ಣೇಶ್ವರಿ ಲಕ್ಷ್ಮಣಗೌಡ ಪ್ರಮಾಣ ವಚನ ಬೋದಿಸಿದರು. ನಿರ್ಗಮಿತ ಅಧ್ಯಕ್ಷೆ ಶ್ರೀಮತಿ ಕಲಾವತಿ ರಾಜಣ್ಣ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಲಾವತಿ ರಾಜಣ‍್ಣ ; ಕಾಫಿನಾಡು ಮಹಿಳಾ ಒಕ್ಕಲಗರ ಸಂಘದ ಮೂಲಕ ತಾಲ್ಲೂಕಿನ ಒಕ್ಕಲಿಗ ಮಹಿಳೆಯರು ಸಂಘಟಿತರಾಗಲು ಅವಕಾಶವಾಗಿದೆ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೇ ಸಂಘಸಂಸ್ಥೆಗಳ ಮೂಲಕ ಸಮಾಜದಲ್ಲಿ ತೊಡಗಿಸಿಕೊಳ್ಳಬೇಕು. ಅನೇಕ ಮಹಿಳೆಯರಲ್ಲಿ ವಿಶೇಷ ಪ್ರತಿಭೆಗಳು ಇದ್ದು ಅವುಗಳನ್ನು ಪ್ರಸ್ತುತಪಡಿಸಿಲು ಸಂಘ ಸಂಸ್ಥೆಗಳು ಉತ್ತಮ ವೇದಿಕೆಯಾಗಿವೆ. ಸಂಕೋಚ ಮತ್ತು ಕೀಳರಿಮೆ ಬಿಟ್ಟು ಮಹಿಳೆಯರು ಮುಂದೆ ಬರಬೇಕು. ಆರ್ಥಿಕ ಚಟುವಟಿಕೆಗಳಲ್ಲಿ, ವ್ಯವಹಾರ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ನಿರ್ಮಾಲಾ ಮಂಚೇಗೌಡ ಅವರು ಕಳೆದ 45 ವರ್ಷಗಳಿಂದ ನಮ್ಮ ಕುಟುಂಬ ಮೂಡಿಗೆರೆ ಭಾಗದ ಜನರೊಂದಿಗೆ ಬೆರೆತು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘದಲ್ಲಿ ನಾನು ಆರಂಭದಿಂದಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದೇನೆ. ಇದೀಗ ನನಗೆ ದೊರಕಿರುವ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಸಂಘದ ನೂತನ ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲಾ ಮಂಚೇಗೌಡ, ಕಾರ್ಯದರ್ಶಿಯಾಗಿ ಶ್ರೀಮತಿ ರಮ್ಯಾ ಸಂದೇಶ್, ಉಪಾಧ್ಯಕ್ಷರಾಗಿ ಶ್ರೀಮತಿ ರೇಖಾ ಮೋಹನ್,  ಸಹಕಾರ್ಯದರ್ಶಿಯಾಗಿ ಶ್ರೀಮತಿ ರಜಿತಾ ರತ್ನಾಕರ್, ನಿರ್ದೇಶಕರುಗಳಾಗಿ ಶ್ರೀಮತಿ ಸಾಧನಾ ಮಣೀಶ್, ಶ್ರೀಮತಿ ದೇವಕಿ ರಾಜರಾಮ್, ಶ್ರೀಮತಿ ಭಾರತಿ ರವೀಂದ್ರ, ಶ್ರೀಮತಿ ಸುಚಿತ್ರ ಪ್ರಸನ್ನ, ಶ್ರೀಮತಿ ಸುಜಾತ ಪ್ರಸನ್ನ, ಶ್ರೀಮತಿ ಸೌಮ್ಯ ವಿನೂತ್, ಶ್ರೀಮತಿ ಕವಿತಾ ಸಂತೋಷ್, ಶ್ರೀಮತಿ ಕವಿತಾ ಪೂರ್ಣೇಶ್, ಶ್ರೀಮತಿ ರಶ್ಮಿ ಸುಧೀರ್ ಜವಾಬ್ದಾರಿ ವಹಿಸಿಕೊಂಡರು.

ಇದೇ ಸಂದರ್ಭದಲ್ಲಿ ನಿರ್ಗಮಿತ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳು ಗೌರವ ಸಮರ್ಪಣೆ ಮಾಡಿದರು.

ಶ್ರೀಮತಿ ವಿದ್ಯಾ ರಾಜು ಹಾಗೂ ಶ್ರೀಮತಿ ರಮ್ಯಾ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ರಜಿತಾ ರತ್ನಾಕರ ವಂದಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ