ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 94ನೇ ಜನ್ಮದಿನದ ಪ್ರಯು ಕ್ತ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ನಗರದ ಬಸವನಹಳ್ಳಿ ಸಮೀಪದ ಶ್ರೀ ಗಣಪತಿ ಓಂಕಾರೇಶ್ವರ ಸ್ವಾಮಿ ದೇವಾಲ ಯದಲ್ಲಿ ಸೋಮವಾರ ಸಂಜೆ ವಿಶೇಷಪೂಜೆ ನೆರವೇರಿಸಿ, ಸಿಹಿಹಂಚುವ ಮೂಲಕ ದೀರ್ಘಾಯುಷ್ಯ ಲಭಿಸಲು ಎಂದು ಪ್ರಾರ್ಥಿಸಿದರು.
ಈ ವೇಳೆ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣಗೌಡ ಮಾತನಾಡಿ ಎಚ್.ಡಿ. ದೇವೇಗೌಡರು ಭಾರತದ 11ನೇ ಪ್ರಧಾನಮಂತ್ರಿಯಾಗಿ ಹಾಗೂ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದೇಶದ ರಾಜಕೀಯ ಇತಿಹಾಸದಲ್ಲಿ ಪ್ರಾದೇಶಿಕ ಪಕ್ಷದ ಮೂಲಕ ರಾಷ್ಟ್ರಮಟ್ಟದ ಉನ್ನತ ಹುದ್ದೆಗೇರಿದ ಪ್ರಮುಖ ನಾಯಕ ರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೀರಾವರಿ ಯೋಜನೆಗಳು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದ ದೇವೇಗೌಡರು, ಪ್ರಧಾನಮಂತ್ರಿಯಾಗಿದ್ದ ಸಮಯದಲ್ಲೂ ದೇಶದ ಆರ್ಥಿಕತೆ ಬಲಪಡಿಸಲು ಕೈಗಾರಿಕಾ ಮತ್ತು ನೀರಾವರಿ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನಪ್ರಿಯತೆ ಗಳಿಸಿದ್ದರು ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಮಾತನಾಡಿ ದೇವೇಗೌಡ ಇದೀಗ 94 ವರ್ಷ ಪೂರೈಸಿದ್ದಾರೆ. ತಮ್ಮ ಇಳಿಯವಸ್ಸಿನಲ್ಲೂ ಸಕ್ರಿಯ ರಾಜಕೀಯ ಚಟುವಟಿಕೆ, ಹೋರಾಟ, ಸುತ್ತಾಟ ದಲ್ಲಿ ನಿರತರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಎಸ್ಸಿ ಮೋರ್ಚಾ ಅಧ್ಯಕ್ಷ ದೇವಿಪ್ರಸಾದ್, ಮುಖಂಡರುಗಳಾದ ದೇವ ರಾಜ್ ಅರಸ್, ಮಾನುಮಿರಾಂಡ, ಜಯಂತಿ, ಚಿದಾನಂದ್ ಉಪಸ್ಥಿತರಿದ್ದರು.



