suddi-2 (2)

 

 

ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ದೇಶದ ಬೇರೆ ರಾಜ್ಯಗಳಿಗೆ ಮಾದರಿ ಎಂದು ಚಿಕ್ಕಮಗಳೂರು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ.
ಬಡವರಿಗೆ ಅನುಕೂಲ ಆಗಬೇಕು ಎಂಬ ಉದ್ದೇಶದಿಂದ 5 ಗ್ಯಾರಂಟಿ ಘೋಷಣೆ ಮಾಡಿ, ಅವುಗಳನ್ನು ಐದೇ ತಿಂಗಳಲ್ಲಿ ಜಾರಿಗೆ ತರಲಾಗಿದೆ. 290 ಭರವಸೆಗಳನ್ನು ಈಡೇರಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸಕ್ತ ವರ್ಷ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ಹಣ ಮಂಜೂರಾಗಿದ್ದು ಅದರಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆಗಳಿಗೆ 17 ಕೋಟಿ, ಚಿಕ್ಕಮಗಳೂರು ರಸ್ತೆಗಳಿಗೆ 10.50 ಕೋಟಿ, ಹಿಂದುಳಿದ ವರ್ಗಗಳ ಸಮುದಾಯ ಭವನ ನಿರ್ಮಾಣಕ್ಕೆ 7.50 ಕೋಟಿ, ದೇವಸ್ಥಾನಗಳ ಅಭಿವೃದ್ಧಿಗೆ 4 ಕೋಟಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ, ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ನೀಡಲಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ
2025-26 ನೇ ಸಾಲಿನ ಲೆಕ್ಕಶೀರ್ಷಿಕೆ 50-54 ರಡಿ ಕಾಲುಸಂಕ ನಿರ್ಮಾಣಕ್ಕೆ 2.20 ಕೋಟಿ ಅನುದಾನ ಮಂಜೂರಾಗಿದೆ. ಲೆಕ್ಕಶೀರ್ಷಿಕೆ 50-54 ರಡಿ ಸೇತುವೆಗಳ ನಿರ್ಮಾಣಕ್ಕೆ (ಕಬ್ಬಳ್ಳಿ, ಕ್ಯಾತನಬೀಡು, ಹಾಗೂ ಜೋಡಿಲಿಂಗದಹಳ್ಳಿ) 10 ಕೋಟಿ ಅನುದಾನ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಗೆ 9.99 ಕೋಟಿ, ತಡೆಗೋಡೆ ಕಾಮಗಾರಿಗಳಿಗೆ 4.45 ಕೋಟಿ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 17 ಕೋಟಿ, ಮಳೆ ಹಾನಿ ಕಾಮಗಾರಿಗಳಿಗೆ 5 ಕೋಟಿ ಹಣ ಮಂಜೂರು ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಹೆಚ್ಚುವರಿ ಕಾಮಗಾರಿಗಳಿಗೆ 6.27 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 2025-26 ನೇ ಸಾಲಿನ ಎಸ್.ಸಿ.ಪಿ. ಯೋಜನೆಯಡಿ ಪರಿಶಿಷ್ಟ ಜಾತಿ ಕಾಲೋನಿಗಳಿಗೆ ಒಂದು ಕೋಟಿ ಮಂಜೂರು ಮಾಡಲಾಗಿದೆ.
ನಗರದಲ್ಲಿ ಕ.ರಾ.ರ.ಸಾ. ನಿಗಮದ ಬಸ್ಸು ನಿಲ್ದಾಣದ ಉನ್ನತೀಕರಣಕ್ಕೆ 19.87 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದ್ದು ಮುಂದಿನ ವರ್ಷದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ 2025-26 ನೇ ಸಾಲಿನ ಲೆಕ್ಕ ಶಿರ್ಷೀಕೆ 5054 ರಡಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳಿಗೆ 10 ಕೋಟಿ ರು., ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳಿಗೆ 5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. 2025-26 ನೇ ಸಾಲಿನ ಪ.ಜಾ ಮತ್ತು ಪ.ಪಂಗಡ ಕಾರ್ಯಕ್ರಮದಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಹಂಚಿಕೆಯಾಗಿರುವ ಅನುದಾನ 1.25 ಕೋಟಿ, ಪ್ರಗತಿ ಪಥ ಯೋಜನೆಯಡಿ 22 ಕೋಟಿ ವೆಚ್ಚದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ 30 ಕಿ.ಮೀ ಸರ್ವಋತು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು 2025-26 ನೇ ಸಾಲಿನಲ್ಲಿ 9 ಕೋಟಿ ವೆಚ್ಚದಲ್ಲಿ 15 ಕಿ.ಮೀ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆ
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ನಗರದ ರಸ್ತೆಗಳಿಗೆ 10.50 ಕೋಟಿ ಹಣ ಮಂಜೂರು ಮಾಡಲಾಗಿದೆ. ಜಲ ಸಂಪನ್ಮೂಲ ನಿಗಮದಡಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಜಲ ಮೂಲಗಳಾದ ಕೆರೆ ಹಾಗೂ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ 25 ಕೋಟಿ ರು.ಗೆ ಅನುಮೋದನೆ ನೀಡಿದ್ದು ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು.
ಕಾವೇರಿ ನೀರಾವರಿ ನಿಗಮದಡಿ ಭದ್ರ ಉಪ ಕಣಿವೆ ಯೋಜನೆಯಡಿ ಚಿಕ್ಕಮಗಳೂರು ಹಾಗೂ ಕಡೂರು ಭಾಗದ ಕೆರೆ ತುಂಬಿಸುವ ಯೋಜನೆಯ 3ನೇ ಹಂತದ ಕಾಮಗಾರಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವತಿಯಿಂದ ಟೆಂಡರ್ ಕರೆದು ಕಾರ್ಯಾದೇಶ ನೀಡಿದ್ದು ಸದ್ಯದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು. ವಿ.ಜೆ.ಎನ್.ಎಲ್ ವತಿಯಿಂದ ಬೂಚೇನಹಳ್ಳಿ ಹಾಗೂ ಗೆದ್ಲೇಹಳ್ಳಿ ಗ್ರಾಮದ ಹತ್ತಿರ ಸೇತುವೆ ನಿರ್ಮಾಣಕ್ಕೆ 1.50 ಕೋಟಿ ಹಣ ಬಿಡುಗಡೆ ಆಗಿದೆ.

ಕ್ರೀಡಾ ಇಲಾಖೆ
ನಗರದ ಶತಮಾನೋತ್ಸವ ಕ್ರೀಡಾಂಗಣ ಈ ಹಿಂದೆ ಟೆಂಡರ್ ಕರೆದು ಕ್ರೀಡಾಂಗಣವನ್ನು ಬಗೆದು ಹಾಳು ಮಾಡಲಾಗಿತ್ತು. ಪ್ರಸ್ತುತ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆಯಡಿಯಲ್ಲಿ ನೀಡಿರುವ 2.92 ಕೋಟಿ ಅನುದಾನದೊಂದಿಗೆ ರಾಜ್ಯ ಸರ್ಕಾರದ ಅನುದಾನ 1.19 ಕೋಟಿ ರು. ಉಸ್ತುವಾರಿ ಸಚಿವರು ಸಿ.ಎಸ್.ಆರ್ ಫಂಡ್ ನಲ್ಲಿ ಬಿಡುಗಡೆ ಮಾಡಿರುವ ಅನುದಾನ 2 ಕೋಟಿ ಶಾಸಕರು ನೀಡಿರುವ ವಿಶೇಷ ಅನುದಾನ ಒಂದು ಕೋಟಿ ಖೇಲೋ ಇಂಡಿಯಾ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದ ಬಡ್ಡಿ 28 ಲಕ್ಷ, ಸೇರಿ ಒಟ್ಟು ಅನುದಾನ 7.39 ಕೋಟಿ ಅನುದಾನದೊಂದಿಗೆ ಸಿಂಥೆಟಿಕ್ ಟ್ರಾಕ್ ಹಾಗೂ ಇತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಹಣ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ 9 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು, ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು. ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಮಲ್ಲೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗೆ 22 ಕೋಟಿ ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ.

ಜಿಲ್ಲಾ ಆಡಳಿತ ಕೇಂದ್ರ ಕಟ್ಟಡ ನಿರ್ಮಿಸಲು ಈ ಹಿಂದೆ 30 ಕೋಟಿ ರು.ಗಳಿಗೆ ಅನುಮೋದನೆ ಯಾಗಿದ್ದು, ಪ್ರಸ್ತುತ ನಮ್ಮ ಸರ್ಕಾರ ಬಂದ ಮೇಲೆ 30 ಕೋಟಿ ಹಣ ಬಿಡುಗಡೆ ಮಾಡುವುದರೊಂದಿಗೆ ಕಟ್ಟಡ ಪೂರ್ಣಗೊಳಿಸಲು ಅಗತ್ಯವಿರುವ 26.48 ಕೋಟಿ ಹೆಚ್ಚುವರಿ ಅನುದಾನಕ್ಕೆ ಮಂಜೂರಾತಿ ನೀಡಿ 15.35 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

21 ಗ್ರಾಮಗಳ 1015 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರೊಂದಿಗೆ 46 ಗ್ರಾಮಗಳ ಅಂತಿಮ ಅಧಿಸೂಚನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಸದ್ಯದಲ್ಲೇ 1800ಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದ ಅವರು, ಕ್ಷೇತ್ರದ ಬಹು ದಿನಗಳ ಕನಸಾಗಿದ್ದ, ಚಿಕ್ಕಮಗಳೂರಿನ ಸುಮಾರು 5000 ನಿರುದ್ಯೋಗಿಗಳಿಗೆ ಹಾಗೂ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಲಕ್ಯಾ ಹೋಬಳಿಯ ಹಿರೇಗೌಜ ಗ್ರಾಮದಲ್ಲಿ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲು ಅನುಮೋದನೆ ನೀಡಲಾಗಿದ್ದು ಶೀಘ್ರದಲ್ಲೆ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ.

ದೇವಾಲಯಗಳಿಗೆ 4 ಕೋಟಿ 
ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕ್ಷೇತ್ರದ 54 ದೇವಾಲಯಗಳ ಅಭಿವೃದ್ದಿಗೆ 4 ಕೋಟಿ ಹಣ ಮಂಜೂರು ಮಾಡಲಾಗಿದೆ.
ಚಿಕ್ಕಮಗಳೂರು ನಗರದ ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿ ನಿಲಯದ ಕಟ್ಟಡ ನಿರ್ಮಾಣಕ್ಕೆ 5 ಕೋಟಿ ಮಂಜೂರು ಮಾಡಲಾಗಿದೆ. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಿಂದುಳಿದ ವರ್ಗಗಳ 47 ಸಮುದಾಯ ಭವನಗಳ ಅಭಿವೃದ್ಧಿಗೆ 7.50 ಕೋಟಿ ಹಣ ಮಂಜೂರು ಮಾಡಲಾಗಿದೆ. ಅರಣ್ಯ ಭವನ ನಿರ್ಮಾಣ ಕಾಮಗಾರಿಗೆ 7.50 ಕೋಟಿ ರು. ಒದಗಿಸಿ ಕೊಡಲಾಗಿದೆ.

ಚೆಕ್ ಡ್ಯಾಂ ನಿರ್ಮಾಣ
ಚಿಕ್ಕಮಗಳೂರು ತಾಲ್ಲೂಕು ಲಕ್ಯಾ ಹೋಬಳಿ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿ ಮತ್ತು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ 8 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ತಾಲ್ಲೂಕು ಕರಗಡ ಏತ ನೀರಾವರಿ ಯೋಜನೆಗೆ ದೇವಿಕೆರೆಗೆ ನೀರು ಪೂರೈಸುವ ಮುಗುಳುವಳ್ಳಿ ಫೀಡರ್ ನಾಲೆ ಅಭಿವೃದ್ಧಿಗೆ 9.90 ಕೋಟಿ ರು. ಅನುದಾನ ಮಂಜೂರು ಮಾಡಲಾಗಿದೆ. ಬೆಳವಾಡಿ ದೊಡ್ಡಕೆರೆಯ ಕಾಲುವೆಗಳ ಅಭಿವೃದ್ಧಿ ಕಾಮಗಾರಿಗೆ 41.50 ಲಕ್ಷ ರು.ಗಳಿಗೆ ಅನುಮೋದನೆ ನೀಡಲಾಗಿದೆ.

ನರ್ಸಿಂಗ್ ಕಾಲೇಜು ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಯೋಗದೊಂದಿಗೆ (60*40) 10 ಕೋಟಿ ರು. ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ವೈದ್ಯಕೀಯ ಕಾಲೇಜಿಗೆ 2026-27ನೇ ಸಾಲಿನಲ್ಲಿ 75 ಕೋಟಿ ರೂ. ವೆಚ್ಚದಲ್ಲಿ 50 ಯು.ಜಿ. ಸೀಟ್ ಹಾಗೂ 51 ಕೋಟಿ ರೂ. ವೆಚ್ಚದಲ್ಲಿ 34 ಪಿ.ಜಿ ಸೀಟ್‍ಗಳನ್ನು ಕೇಂದ್ರ ಪುರಸ್ಕೃತ ಯೋಜನೆಯೊಂದಿಗೆ ಹೆಚ್ಚಳ ಮಾಡಲಾಗಿದೆ. ತೇಗೂರು ಮೆಡಿಕಲ್ ಕಾಲೇಜು ಆವರಣ, ಬೆಳವಾಡಿ ಗೋವಿಂದಪುರ, ಹಾಗೂ ಟಿ.ಬಿ ಕಾವಲು ಗ್ರಾಮಗಳಲ್ಲಿ ಹೊಸದಾಗಿ ಎಂ.ಯು.ಎಸ್.ಆರ್ ಸ್ಟೇಷನ್ ಸ್ಥಾಪಿಸಲು ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದು ಶೀಘ್ರ ಮಂಜೂರಾತಿ ದೊರಕಲಿದೆ.

2023 ಕ್ಕೂ ಹಿಂದೆ ಮಂಜೂರಾಗಿ ಅನುಷ್ಠಾನಗೊಳ್ಳದೆ ರದ್ದಾದ ಕಾಮಗಾರಿಗಳ ಪೈಕಿ 5 ಕಾಮಗಾರಿಗಳಿಗೆ 1.93 ಕೋಟಿ ರು. ಮರು ಮಂಜೂರಾತಿ ನೀಡಲಾಗಿದೆ ಮೂರು ಶಾಲೆಗಳಾದ ಬೇಲೂರು ರಸ್ತೆ ಜ್ಯೂನಿಯರ್ ಕಾಲೇಜು, ಬಸವನಹಳ್ಳಿ ಶಾಲೆ, ಸಖರಾಯಪಟ್ಟಣ ಕೆ.ಪಿ.ಎಸ್ ಶಾಲೆ ಮಂಜೂರಾಗಿದ್ದು ತಲಾ 5 ಕೋಟಿ ಅನುದಾನದೊಂದಿಗೆ ಎ.ಡಿ.ಬಿ ಬ್ಯಾಂಕ್ ನೆರವಿನೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಸಿ.ಎಸ್.ಆರ್ ನಿಧಿಯಡಿ ದಾನಿಗಳ ಸಹಕಾರದೊಂದಿಗೆ ಹಿರೇಮಗಳೂರು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸಲಾಗಿದೆ. ರಾಜ್ಯ ಸಭಾ ಸದಸ್ಯರ ಅನುದಾನದಿಂದ ದೇವನೂರು ಹಾಗೂ ಕೆ.ಬಿ. ಹಾಳ್ ಶಾಲೆಗಳನ್ನು ಪ್ರತಿ ಶಾಲೆಗೆ 50 ಲಕ್ಷ ವೆಚ್ಚದೊಂದಿಗೆ ಸರ್ವಾಂಗೀಣ ಅಭಿವೃದ್ಧಿಪಡಿಸಿ ಮಾದರಿ ಶಾಲೆಯಾಗಿ ರೂಪಿಸಲಾಗುತ್ತಿದೆ.

6 ಶಾಲೆಗಳ ಕೊಠಡಿ ನಿರ್ಮಾಣಕ್ಕೆ 1.92 ಕೋಟಿ ರು. ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು.

2025-26ನೇ ಸಾಲಿನ ಆಯವ್ಯಯದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಘೋಷಣೆ ಮಾಡಿರುವುಂತೆ ಮಹಿಳಾ ಪಿಯು ಕಾಲೇಜು ಮಂಜೂರು ಮಾಡಲಾಗಿದೆ. (ಕಲಾ ಮತ್ತು ವಿಜ್ಞಾನ) ಲಕ್ಯಾದಲ್ಲಿ ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣಕ್ಕೆ 60 ಲಕ್ಷ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕಳಸಾಪುರ ಐಟಿಐ ಕಾಲೇಜು ನಿರ್ಮಾಣಕ್ಕೆ 3.65 ಕೋಟಿ ಮಂಜೂರು ಮಾಡಲಾಗಿದೆ. ಮಲ್ನಾಡ್ ಅಭಿವೃದ್ಧಿ ಮಂಡಳಿ ವತಿಯಿಂದ 35 ಲಕ್ಷ, 2025-26 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 2 ಕೋಟಿ ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ಪಂಚ ಗ್ಯಾರಂಟಿ

ಗೃಹ ಲಕ್ಷ್ಮಿ ಯೋಜನೆಯಡಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 82,219 ಮಹಿಳೆಯರಿಗೆ 180 ಕೋಟಿ ಹಣ ಪಾವತಿಯಾಗಿದೆ. ಗೃಹ ಜ್ಯೋತಿ ಯೋಜನೆಯಡಿ 2,62,398 ಫಲಾನುಭವಿಗಳು ನೊಂದಣಿಯಾಗಿದ್ದು ಇದುವರೆಗೆ 34 ಕೋಟಿ ಹಣದಷ್ಟು ಪ್ರಯೋಜನ ಪಡೆದಿದ್ದಾರೆ. ಶಕ್ತಿ ಯೋಜನೆಯಡಿ ರಾಜ್ಯದಲ್ಲಿಯೆ ಅತಿ ಹೆಚ್ಚು ಮಹಿಳೆಯರು ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಪ್ರವಾಸ ಮಾಡಿದ್ದು ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ 1,16,71,753 ಮಹಿಳೆಯರು ಪ್ರಯಾಣ ಮಾಡಿದ್ದು ಸುಮಾರು 44 ಕೋಟಿ ರೂ. ಹಣ ಸರ್ಕಾರ ಭರಿಸಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಶಿವಾನಂದಸ್ವಾಮಿ, ಸಿಡಿಎ ಅಧ್ಯಕ್ಷ ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್ ಅಹಮದ್, ಮಲ್ಲೇಶ್, ಶಿವಕುಮಾರ್, ರೂಬಿನ್ ಮೋಸಸ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ