22Mudigere1A Manjappa

 

 

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಿಗೆರೆ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಎಚ್.ಮಂಜಪ್ಪ ಗುರುವಾರ ಆಯ್ಕೆಯಾಗಿದ್ದಾರೆ.

ಸಂಘದ 7 ನಿರ್ದೇಶಕರ ಸ್ಥಾನಕ್ಕೆ ಕಳೆದ ತಿಂಗಳು ಚುನಾವಣೆ ನಡೆದಿದ್ದು. ಶಿಕ್ಷಕರ ಸಂಘದ  ಅಧ್ಯಕ್ಷ ಸ್ಥಾನಕ್ಕೆ ಎಚ್‍ಪಿಎಸ್ ದಾದಹಳ್ಳಿ ಶಾಲೆಯ ಎಚ್.ಮಂಜಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್‍ಪಿಎಸ್ ಹಳಿಕೆ ಶಾಲೆಯ ಎಚ್.ಆರ್.ಮಂಜನಾಯ್ಕ ಹಾಗೂ ಎಚ್‍ಪಿಎಸ್ ಅಂಗಡಿ ಶಾಲೆಯ ಎಚ್.ಎಂ.ನಿರಂಜನ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಎಲ್‍ಪಿಎಸ್ ಮರೇಬೈಲ್ ಶಾಲೆಯ ಜಿ.ಎಲ್.ಗಂಗಾಧರಪ್ಪ, ಖಜಾಂಚಿ ಸ್ಥಾನಕ್ಕೆ ಎಲ್‍ಪಿಎಸ್ ಬಣಕಲ್ ವಿಲೇಜ್ ಶಾಲೆಯ ಎಂ.ಪೂರ್ಣೇಶ್ ನಾಮಪತ್ರ ಸಲ್ಲಿಸಿದ್ದರು.

ಎದುರಾಳಿಯಾಗಿ ಯಾವುದೇ ನಾಮಪತ್ರ ಸಲ್ಲಿಸದ ಕಾರಣ ಎಲ್ಲರೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಚುನಾವಣಾಧಿಕಾರಿ ರಮೇಶ್ ಘೋಷಿಸಿದ್ದಾರೆ.

ನೂತನ ಅಧ್ಯಕ್ಷ ಮಂಜಪ್ಪ ಅವರು ಹಿರಿಯ ಶಿಕ್ಷಕರಾಗಿದ್ದು, ಮೂಡಿಗೆರೆ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕ ವರ್ಷಗಳ ಕಾಲದಿಂದ ಶಿಕ್ಷಕರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ