suddi-4 (1)

 

 

ಮೂಡಿಗೆರೆ ತಾಲ್ಲೂಕು ಪರಿಸರ ಸ್ನೇಹಿ ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿಯನ್ನು ಪ್ರೋತ್ಸಾಹಿಸಲು ಸಸ್ಟೇನಬಲ್ ಸಿಪ್ಪಿಂಗ್ ಎಂಬ ಜೆಸಿಐ ರಾಷ್ಟ್ರೀಯ ಅಧ್ಯಕ್ಷರ ಕನಸಿನ ಯೋಜನೆಯ ಕಾರ್ಯಕ್ರಮವನ್ನು ಜೆಸಿಐ ಜನ್ನಾಪುರ ಸಮೃದ್ಧಿ ವತಿಯಿಂದ ಚಿನ್ನಿಗ ಮತ್ತು ಜನ್ನಾಪುರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜೆಸಿಐ ಅಧ್ಯಕ್ಷ ಪ್ರದೀಪ್ ಹೊಸಪುರ ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಮರುಬಳಕೆ ಮಾಡಬಹುದಾದ ಫೇಮಸ್ ಸ್ಟೇನ್ಲೆಸ್ ಸ್ಟೀಲ್ ವಾಟರ್ ಬಾಟಲ್ ಗಳನ್ನು ಹೂವಿನ ಅಂಗಡಿ ವ್ಯಾಪಾರಿಗಳಿಗೆ, ಪ್ಲಂಬರ್ ಗಳಿಗೆ, ಸಮಾಜದ ಯುವಕರಿಗೆ, ಹಾಲು ಡೈರಿ ಸಿಬ್ಬಂದಿ, ಮೆಡಿಕಲ್ ಕ್ಷೇತ್ರದ ಮಹಿಳೆಯರು, ಬೇಕರಿ ಉದ್ಯೋಗಿಗಳು, ಪಾನಿಪುರಿ ಮಾಡುವ ಮಹಿಳೆಯರು ಮತ್ತು ಆರಕ್ಷಕ ಠಾಣಾ ಮಹಿಳಾ ಸಿಬ್ಬಂದಿಗಳಿಗೆ, ಹಾಗೂ ಬಡ ಕಾರ್ಮಿಕರಿಗೆ ಸಸ್ಟೇನಬಲ್ ಸಿಪ್ಪಿಂಗ್ ಕಾರ್ಯಕ್ರಮದಲ್ಲಿ ವಾಟರ್ ಬಾಟಲ್ ಗಳನ್ನೂ ನಿಡಿ ಪ್ಲಾಸ್ಟಿಕ್ ಮುಕ್ತ ಸಮಾಜದ ಪ್ರತಿಜ್ಞೆ ಮಾಡುವ ಮೂಲಕ ಗಮನ ಸೆಳೆದರು.

ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸುವದು ಹಾಗೂ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾಜದ ವಿವಿಧ ವರ್ಗಗಳ ಜನರಿಗೆ ತಲುಪಿ, ಉತ್ತಮ ಸಂದೇಶವನ್ನು ನೀಡಿದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸೇವೆಯನ್ನು ಮುಂದುವೆರೆಸುವ ಸಂಕಲ್ಪವನ್ನು ನಾವು ಹೊಂದಿದ್ದೇವೆ ಎಂದು ಪ್ರದೀಪ್ ಹೇಳಿದರು.

ಕಾರ್ಯಕ್ರಮದಲ್ಲಿ ಜೆಸಿಐ ಜನ್ನಾಪುರ ಸಮೃದ್ಧಿಯ ಕಾರ್ಯದರ್ಶಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ