5Mudigere3A

 

 

ದಿನಾಂಕ 22/05/2026 ರಂದು ವಿಶ್ವ ಹಿಂದೂ ಪರಿಷದ್, ಭಜರಂಗದಳ ಮೂಡಿಗೆರೆ ಪ್ರಖಂಡದಿಂದ   ಮೂಡಿಗೆರೆ ತಹಶಿಲ್ದಾರ್   ಅಶ್ವಿನಿ. ಎಸ್. ರವರಿಗೆ ನಗರದ ಹೊರಭಾಗದ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಸುರಿದಿರುವ ಕಸದ ರಾಶಿಯನ್ನು ವಿಲೇವಾರಿ ಮಾಡಿಸುವಂತೆ ಮನವಿ ಸಲ್ಲಿಸಲಾಗಿತ್ತು.

ಈ ಮನವಿಗೆ ಶೀಘ್ರವಾಗಿ ಸ್ಪಂದಿಸಿದ ತಹಶಿಲ್ದಾರ್ ರವರು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿ ಕಸವನ್ನು ವಿಲೇವಾರಿ ಮಾಡಿಸಿ ವಿಶ್ವ ಪರಿಸರ ದಿನಕ್ಕೆ ಒಂದು ಉತ್ತಮ ಜಾಗೃತಿ ಅಭಿಯಾನ ಮಾಡಿಸಿದ್ದಾರೆ.  ಮೂಡಿಗೆರೆ ಎಲ್ಲಾ ನಾಗರೀಕರು ಹಾಗೂ ವಿಶ್ವ ಹಿಂದೂ ಪರಿಷದ್, ಭಜರಂಗದಳದ ವತಿಯಿಂದ ತಹಸೀಲ್ದಾರ್ ಅವರಿಗೆ ವಂದನೆಗಳನ್ನು ಸಲ್ಲಿಸಲಾಯಿತು.

ಮೂಡಿಗೆರೆ ಪಟ್ಟಣ ಪಂಚಾಯಿತಿ ವಾಪ್ತಿಯಲ್ಲಿ ಬಹುತೇಕ ರಸ್ತೆಗಳಲ್ಲಿ ಕುಡಿಯುವ ನೀರಿನ ಪೈಪ್‍ಲೈನ್ ಅಳವಡಿಸಲು ತೆಗೆದಿರುವ ಗುಂಡಿಯನ್ನು ಶೀಘ್ರವಾಗಿ ಮುಚ್ಚಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಮುಖಂಡರು ಶುಕ್ರವಾರ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.
 ಅನೇಕ ತಿಂಗಳಿಂದ ಪಟ್ಟಣದೊಳಗೆ ಹಲವಾರು ಕಡೆ  ಕುಡಿಯುವ ನೀರಿಗಾಗಿ ಪೈಪ್‍ಲೈನ್ ಅಳವಡಿಸುವ ಸಲುವಾಗಿ ಕಾಂಕ್ರೀಟ್ ರಸ್ತೆಯನ್ನು ಕಿತ್ತು ಗುಂಡಿಗಳನ್ನು ಮಾಡಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕುಂಟಾಗಿದೆ. ಅಲ್ಲದೇ ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ. ಈ ಗುಂಡಿಗಳಿಂದಾಗಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ಪದೆ ಪದೆ ಆಯಾ ತಪ್ಪಿ ಬಿಳುವಂತಾಗಿದೆ. ಈ ಕಾಮಗಾರಿ ನಡೆಸುವ ಗುತ್ತಿಗೆದಾರರು  ಆಮೆ ನಡುಗೆಯಂತೆ ಸಾಗಿಸುತ್ತಿದ್ದಾರೆ.
ಅಲ್ಲದೇ ಕಳೆದ ವರ್ಷ ನಡೆಸಿದ್ದ ರಸ್ತೆ ಕಾಮಗಾರಿ ಗುಂಡಿ ತೆಗೆದು ಒಂದೇ ವರ್ಷಕ್ಕೆ ಹಾಳು ಮಾಡಲಾಗಿದೆ. ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು, ವಿದ್ಯಾರ್ಥಗಳು ನಡೆದುಕೊಂಡು ಹಾಗುವಾಗ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಒಂದು ವಾರದಲ್ಲಿ  ಗುಂಡಿಗಳನ್ನು ಮುಚ್ಚಿಸಿ ಪಾದಾಚಾರಿಗಳಿಗೆ ಹಾಗೂ ವಾಹನ ಸಂಚಾರಕ್ಕೆ  ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಪ.ಪಂ. ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುದೇವ್ ಗುತ್ತಿ, ಉಪಾಧ್ಯಕ್ಷ ಅಭಿಲಾಶ್ ಉಗ್ಗೇಹಳ್ಳಿ, ಸಂಯೋಜಕ ಸಂತೋಷ್ ಶುಭನಗರ, ಕಾರ್ಯದರ್ಶಿ  ಪ್ರಶಾಂತ್ ಹಂಡುಗುಳಿ, ಶಶಿ, ಧನುಷ್, ಆದಿತ್ಯ, ಸಾಗರ್, ಕಾರ್ತಿಕ್, ರಾಜು, ಅವಿನಾಶ್, ಯತೀಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ