4Mudigere1A (1)

 

 

ರೈತ ಉತ್ಪಾದಕ ಸಂಸ್ಥೆಗಳು ದೇಶದ ಕೃಷಿ ಚಿತ್ರಣವನ್ನೇ ಬದಲಿಸಲಿದೆ ಎಂದು ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಸಂಸ್ಥೆ ಅಧ್ಯಕ್ಷೆ ಶೋಭಾ ನಾರಾಯಣ್ ಹೇಳಿದರು.

ಅವರು ಬುಧವಾರ ಮೂಡಿಗೆರೆ ಎಪಿಎಂಸಿ ಸಭಾಂಗಣದಲ್ಲಿ ಮಹಿಳಾ ಫಾರ್ಮರ್ ಪ್ರೊಡ್ಯೂಸರ್ ಸಂಸ್ಥೆ ಮತ್ತು ಟೆರ್ರಾ ಈಕೊ ಪ್ರೇನೇರ್ಸ್ ಎಲ್‍ಪಿಪಿ ವತಿಯಿಂದ ಏರ್ಪಡಿಸಿದ್ದ ರೈತ ಉತ್ಪಾದಕ ಸಂಸ್ಥೆಯ ನಿರ್ವಹಣೆ ಮತ್ತು ಬೆಳವಣಿಗೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.

ಮಹಿಳಾ ಉತ್ಪಾದಕ ಸಂಸ್ಥೆಗಳು ದೇಶದಲ್ಲೇ ಸಂಘಟಿತವಾಗುತ್ತಿದೆ. ಇವರಿಗೆ ನಮ್ಮ ಸಂಸ್ಥೆಯು ಕೃಷಿಯಲ್ಲಿ ಸಮಗ್ರ ಆಧುನಿಕ ಮತ್ತು ತಾಂತ್ರಿಕ ಕೌಶಲ್ಯವನ್ನು ತಿಳಿಸಿ ಕೊಡುತ್ತಿದೆ. ಅಲ್ಲದೇ ಹಲವು ರೈತರು ಒಗ್ಗೂಡಿ ಬೆಳೆ ಪ್ರಾರಂಭದಿಂದ ಕಟಾವುಗೊಳಿಸಿ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುವ ಬಗ್ಗೆ ಅರಿವು ಮೂಡಿಸುತ್ತಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು.

ಕಾಫಿ ಬೋರ್ಡ್‍ನ ಸಂಪರ್ಕ ಅಧಿಕಾರಿ ಮಂಜುನಾಥ್ ಮಾತನಾಡಿ, ಕಾಫಿ ತೋಟ ಅಭಿವೃದ್ಧಿ ಸಹಾಯಧನ, ನೀರಾವರಿ ಸೌಲಭ್ಯ, ಯಾಂತ್ರೀಕರಣ ಯೋಜನೆ, ಗುಣಮಟ್ಟ ಸುಧಾರಣೆ, ತರಬೇತಿ ಮತ್ತು ತಾಂತ್ರಿಕ ಮಾರ್ಗದರ್ಶನ, ಸಂಸೋಧನಾ ವಿಸ್ತರಣಾ ಸೇವೆ, ಕಾಫಿ ಮಾರುಕಟ್ಟೆ ಹಾಗೂ ರಫ್ತು ಮಾಡುವ ಬಗ್ಗೆ ಮಾಹಿತಿ ನೀಡಿದರು.

ರಾಂಪುರದ ರೈತ ಸಂಸ್ಥೆಯ ಶಿವರುದ್ರಪ್ಪ ಟೆರ್ರಾ ಈಕೋ ಪ್ರೇನೇರ್ಸ್‍ನ ಅವಿನಾಶ್, ಉಪಾಧ್ಯಕ್ಷೆ ಸರೋಜ ಸುರೇಂದ್ರ, ಕಾರ್ಯದರ್ಶಿ ಕೀರ್ತಿ ಕಿರಣ್, ಸುಚಿತ ಗಣೇಶ್, ಸುಜಾತಪ್ರಸನ್ನ, ಮಧುರ ಜಯಂತ್, ಕೌಶಲ್ಯ ಆಶೋಕ್, ಸ್ವರೂಪ ಪ್ರಶಾಂತ್, ದೀಪ್ತಿ ಸುಬ್ರಾಯ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ