5Mudigere1A

 

 

ತಾಲೂಕಿನ ಮಣ್ಣಿಕೆರೆ ಗ್ರಾಮದಲ್ಲಿ ನಿವೇಶನಕ್ಕಾಗಿ ಒತ್ತಾಯಿಸಿ ಟಿಯುಸಿಐ ನೇತೃತ್ವದಲ್ಲಿ ವಸತಿ ರಹಿತರು ಗುಡಿಸಲು ನಿರ್ಮಿಸಿ ನಡೆಸುತ್ತಿದ್ದ ಧರಣೆ  8ನೇ ದಿನ ಶುಕ್ರವಾರವೂ  ಮುಂದುವರೆದಿದೆ.

ಅನೇಕ ಸಂಘ ಸಂಸ್ಥೆಗಳು ಧರಣಿನಿರತರ ಬೆಂಬಲಕ್ಕೆ ನಿಂತಿದ್ದ ಹಿನ್ನಲೆಯಲ್ಲಿ ತಮ್ಮ ಬೇಡಿಕೆ ಈಡೇರಿಸುವವರೆಗೂ ಮಳೆ, ಗಾಳಿ ಎನ್ನದೇ ವಸತಿ ರಹಿತರು ಪಟ್ಟು ಹಿಡಿದು ಗುಡಿಸಲಿನಲ್ಲೇ ನೆಲೆಸಲು ಮುಂದಾಗಿದ್ದಾರೆ. ಗುರುವಾರ ಧರಣಿ ಸ್ಥಳಕ್ಕೆ  ಕಾಂಗ್ರೇಸ್ ಮುಖಂಡ ಕೆ.ಭರತ್ ಭೇಟಿ ನೀಡಿ, ಧರಣಿಗೆ ಬೆಂಬಲ ಸೂಚಿಸಿದರು.

ತಹಸೀಲ್ದಾರ್ ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಭರತ್ ಆಗ್ರಹಿಸಿದರು.  ಬಳಿಕ  ತಹಸಿಲ್ದಾರ್ ಎಸ್.ಅಶ್ವಿನಿ, ತಾ.ಪಂ. ಇಒ ದಯಾವತಿ  ಸ್ಥಳಕ್ಕೆ ಆಗಮಿಸಿ ಧರಣಿ ನಿರತರ ಅಹವಾಲು ಆಲಿಸಿ, 1 ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುವ ಮೂಲಕ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಧರಣಿ ನಿರತರು, 1 ವಾರದ ವರೆಗೂ ಇಲ್ಲಿಯೇ ಇರುತ್ತೇವೆ. ಯಾವುದೇ ಕಾರಣಕ್ಕೂ ತೆರವುಗೊಳಿಸುವುದಿಲ್ಲವೆಂದು ಪಟ್ಟು ಹಿಡಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಅಧಿಕಾರಿಗಳು ಭರವಸೆ ಕೊಟ್ಟು ಮತ್ತೆ ತೆರವಿಗೆ ಮುಂದಾದರೆ ಇಲ್ಲಿ ಆಗುವ ಅನಾಹುತಗಳಿಗೆ ನೇರವಾಗಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಹೊಣೆಯಾಗುತ್ತದೆ ಎಂದು ಹೇಳಿದರು.

ಸಿಪಿಐಎಂಎಲ್  ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಸಾಮಾಜಿಕ  ಹೋರಾಟಗಾರg  ಅಲ್ತಾಫ್ ಬಿಳುಗುಳ, ಶೇಖರ್, ಜಯಕುಮಾರ್ ಹಾದಿಗೆ, ಆಶಾ ಸಂತೋಷ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ