suddi-9 (7)

 

 

ಮೂಡಿಗೆರೆ ತಾಲ್ಲೂಕು ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದ ಯುವಕ ಬಿ.ಎಸ್. ಸಜಿತ್ ಅವರು ಭಾರತೀಯ ಸೇನೆಯ ಅಗ್ನಿವೀರ್ ಹುದ್ದೆಗೆ ಆಯ್ಕೆಯಾಗಿದ್ದು, ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

ದೇಶದ ಸುರಕ್ಷತೆ ಹಾಗೂ ರಾಷ್ಟ್ರಸೇವೆಯ ಉದ್ದೇಶದಿಂದ ಅಗ್ನಿವೀರ್ ಹುದ್ದೆಗೆ ಸೇರಿರುವುದಾಗಿ ಸಜಿತ್ ತಿಳಿಸಿದ್ದಾರೆ. ಅವರು ಬಿನ್ನಡಿ ಗ್ರಾಮದ ಸಂದೇಶ್ ಜಯಶೀಲ ಅವರ ಪುತ್ರರಾಗಿದ್ದಾರೆ.

ದೇಶಸೇವೆಗೆ ಹೊರಟ ಯೋಧ ಸಜಿತ್  ಅವರನ್ನು ಗ್ರಾಮಸ್ಥರು ಹಾಗೂ ಹಿರಿಯರು ಸನ್ಮಾನಿಸಿ ಶುಭ ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಕೃಷ್ಣಪ್ಪ, ಮಲ್ಲೇಶ್, ಪ್ರದೀಪ್ ಗೌಡ, ಪ್ರಭಾಕರ್ ಬಿನ್ನಡಿ, ಸುರೇಶ್, ರಮೇಶ್, ಗಿರೀಶ್, ಮಂಜುನಾಥ್, ಸಂದೇಶ್, ಶರತ್ ಬಿನ್ನಡಿ ಪ್ರದೀಪ್ ಪ್ರದೀಪ್ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗ್ರಾಮದ ಯುವಕ ರಾಷ್ಟ್ರಸೇವೆಯ ಪಥವನ್ನು ಆಯ್ಕೆ ಮಾಡಿಕೊಂಡಿರುವುದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ