ನಾಗರೀಕ ಸಮಾಜ ನಿರ್ಮಾಣ ಮಾಡುವಲ್ಲಿ ಪೂರ್ವಿಕರ ಕೊಡುಗೆ ಅಪಾರ-ಅನನ್ಯ ಎಂದು ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಅಭಿಪ್ರಾಯಿಸಿದರು.
ಅವರು ಕಾಫಿನಾಡಿನ ಹೃದಯ ಭಾಗವಾದ ಚಿಕ್ಕಮಗಳೂರು ನಗರದಲ್ಲಿ ಡಾ. ಜೆಪಿಕೆ ಇಂಡಸ್ಟ್ರೀಸ್ ನಿಂದ ಹೊರತರಲಾದ ನವನವೀನ ವಿನ್ಯಾಸದ ಬಟ್ಟೆ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಮಾತನಾಡಿದರು.
ಋಷಿ ಮುನಿಗಳು ಮತ್ತು ಗುರು-ಹಿರಿಯರ ಶ್ರಮದ ಫಲವಾಗಿ ಸಂತೋಷದ ಬದುಕಿಗೆ ಪೂರಕವಾಗಿ ಉಡುಗೆತೊಡುಗೆಗಳ ಮೂಲಕ ಸುಂದರವಾಗಿ ಕಾಣುತ್ತಿದ್ದೇವೆ ಎಂದರು.
ಸುಂದರ ಮನೆ, ಜೀವನ ಶುಚಿ-ರುಚಿಯಾದ ಆಹಾರ ಸೇವನೆಗೆ ಸಾದ್ಯವಾಗಿರುವುದು ಈ ಭೂಮಿಯ ಸೃಷ್ಠಿಯಿಂದ ಬಾಲಗಂಗಾಧರನಾಥ ಮಹಾ ಸ್ವಾಮಿಗಳು 25 ವರ್ಷಗಳ ಹಿಂದೆ ಕೋಟಿ ಸಸಿ ನೆಡುವ ಮೂಲಕ ಮನೆಗೊಂದು, ವ್ಯಕ್ತಿಗೊಂದು ಮರ ಎಂಬ ಘೋಷಣೆಯೊಂದಿಗೆ ವನಸಂವರ್ಧನ ಟ್ರಸ್ಟ್ ರಚಿಸಿ ಭೂಮು ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದ್ದರು ಎಂದು ಸ್ಮರಿಸಿದರು.
ವ್ಯಕ್ತಿ ಸ್ವಾರ್ಥಕ್ಕಾಗಿ ಜೀವಿಸದೆ ಸಮಾಜಸೇವೆಗಾಗಿ ಬದುಕಬೇಕು, ಜೊತೆಗೆ ಭೂಮಿಗೆ, ಪ್ರಕೃತಿಗೆ, ಪರಿಸರಕ್ಕೆ ನೆರೆವಾಗಬೇಕೆಂಬುದು ಶ್ರೀಗಳು ಕೈಗೊಂಡ ಈ ಕಾರ್ಯಕ್ರಮದ ಉದ್ದೇಶವಾಗಿತ್ತು ಎಂದರು.
ವೈದ್ಯ ಸೇವೆಯನ್ನು ತಾಯಿ ನಾಡಿನಲ್ಲೆ ಮಾಡಬೇಕೆಂಬುದು ಡಾ. ಜೆಪಿಕೆ ಕನಸಾಗಿತ್ತು ಅದೇ ಮಾದರಿಯಲ್ಲಿ ಅವರ ಸುಪುತ್ರಿ ಡಾ. ವರ್ಷಾ ಕೂಡ ಬಟ್ಟೆ ತಯಾರಿಕಾ ಕಂಪೆನಿ ತೆರೆಯಬೇಕೆಂಬ ಚಿಂತನೆ ಬಹಳ ದೊಡ್ಡದಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಬಟ್ಟೆ ಮಾನ-ಮರ್ಯಾದೆ ಮುಚ್ಚುವ ವಿಶಿಷ್ಟವಾದ ಉಡುಗೆ-ತೊಡುಗೆಯಾಗಿದೆ ಇಂಡಸ್ಟ್ರೀನಲ್ಲಿ ಈಗಾಗಲೇ 30 ಜನರಿಗೆ ಉದ್ಯೋಗ ನೀಡುವ ಮೂಲಕ ಅವರ ಬದುಕಿನಲ್ಲಿ ಭರವಸೆ ತುಂಬಿದ್ದಾರೆ, ಇದು ಮುಂದೆ ದೊಡ್ಡ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.
ಡಾ. ಜೆಪಿಕೆ ಇಂಡಸ್ಟ್ರೀಸ್ ಸಂಸ್ಥಾಪಕಿ ವರ್ಷಾ ಮಾತನಾಡಿ 50 ವರ್ಷಗಳ ಹಿಂದೆ ನಮ್ಮ ತಂದೆಯವರಾದ ಡಾ. ಜೆ.ಪಿ ಕೃಷ್ಣೇಗೌಡ ರವರು ಜೋಳದಾಳ್ ನರ್ಸಿಂಗ್ ಹೋಂ ಪ್ರಾರಂಭಿಸಿದ್ದರು ಅವರ ಪ್ರೇರಣೆಯಿಂದ ಇಂದು ಇಂಡಸ್ಟ್ರಿಯನ್ನು ಪ್ರಾರಂಭಿಸಿ ಅವರ ಹೆಸರನ್ನೆ ಇಡಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಡಾ. ಜೆ.ಪಿ ಕೃಷ್ಣೇಗೌಡ, ಡಾ. ಜ್ಯೋತಿಕೃಷ್ಣ, ನಿವೇದಿತ, ಬಿಜೆಪಿ ಮುಖಂಡರಾದ ತುರುವೇಕೆರೆ ಲಕ್ಷ್ಮೀನಾರಾಯಣ್, ಸಮಾಜ ಸೇವಕಿ ಭಾಗ್ಯಮ್ಮ ಬೆಂಗಳೂರು, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್‍ದೇವವೃಂದ, ಎಐಟಿ ಕಾಲೇಜು ಮಾಜಿ ಪ್ರಾಂಶುಪಾಲರಾದ ಜಯದೇವ್ ಉಪಸ್ಥಿತರಿದ್ದರು.


