24Mudigere1A

 

 

ಮೂಡಿಗೆರೆ ತಾಲ್ಲೂಕು ಮಣ್ಣಿಕೆರೆ ಗ್ರಾಮದಲ್ಲಿ ನಿವೇಶನಕ್ಕಾಗಿ ಮತ್ತೆ ಧರಣಿ ಪ್ರಾರಂಭಿಸಿರುವ ನಿವೇಶನ ರಹಿತರಿಗೆ ಬೆದರಿಕೆ ಹಾಕಿದ ತಾ.ಪಂ. ಇಒ ಮತ್ತು ಸ್ಥಳೀಯ ಗ್ರಾ.ಪಂ. ಪಿಡಿಓ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಕೆ.ಭರತ್ ಒತ್ತಾಯಿಸಿದರು.

ಅವರು ಬುಧವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿ ಎದುರು ಮಣ್ಣಿಕೆರೆ ಗ್ರಾಮದ ನಿವೇಶನರಹಿತರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. 1995ರಲ್ಲಿ ಮಣ್ಣಿಕೆರೆ ಸರ್ವೆನಂ 144 ರಲ್ಲಿ ನಿವೇಶನಕ್ಕಾಗಿ 5.5 ಎಕರೆ ಜಮೀನು ಮೀಸಲಿರಿಸಲಾಗಿತ್ತು. ಇದೀಗ ಒತ್ತುವರಿಗಾಗಿ 3 ಎಕರೆ ಪ್ರದೇಶ ಉಳಿದುಕೊಂಡಿದೆ. ಈ ಭೂಮಿಯನ್ನಾದರೂ ಉಳಿಸಿಕೊಂಡು ನಿವೇಶನ ಪಡೆಯಲು ಅಲ್ಲಿನ ಮಣ್ಣಿಕೆರೆ ನಿವೇಶನ ರಹಿತರು ಅಹೋರಾತ್ರಿ ಧರಣಿ ಪ್ರಾರಂಭಿಸಿದರು.  ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜಾಗವನ್ನು ಸಮತಟ್ಟು ಮಾಡಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿ ಇದೀಗ ನಾಟಕವಾಡಲು ಪ್ರಾರಂಭಿಸಿದ್ದಾರೆಂದು ದೂರಿದರು.

ಒಂದೆಡೆ ತಹಸೀಲ್ದಾರರು ವಸತಿ ರಹಿತರಿಗೆ ನಿವೇಶನ ನೀಡುತ್ತೇವೆಂದು ಹೇಳುತ್ತಿದ್ದರೆ, ತಾ.ಪಂ. ಇಒ ಮಾತ್ರ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ.  ಪಿಡಿಒ ಮೂಲಕ ಸ್ಥಳಕ್ಕೆ  ಪ್ಲಕ್ಸ್ ಹಾಕಿ ಅನಧಿಕೃತ ಪ್ರವೇಶ ಮಾಡಿದವರಿಗೆ ಕೇಸು ಹಾಕುವ ಬಗ್ಗೆ ಸೂಚಿಸುತ್ತಿದ್ದಾರೆ. ಈ ಜಾಗವನ್ನು ಉಳ್ಳವರಿಗೆ ಮಾರುವ ಷಡ್ಯಂತ್ರ ನಡೆದಿರುವುದು ಕಾಣುತ್ತಿದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ತಾ.ಪಂ. ಇಒ ಮತ್ತು ಪಿಡಿಓ ಒಂದು ವಾರದೊಳಗೆ ಬಹಿರಂಗ ಕ್ಷಮೆಯಾಚಿಸದಿದ್ದರೆ ಅವರ ಮೇಲೂ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಶಿರಸ್ತೆದಾರ್ ಸುರೇಂದ್ರಬಾಬು ಅವರಿಗೆ ಮನವಿ ಸಲ್ಲಿಸಿದರು.

ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ, ರಮೇಶ್ ಕೆಳಗೂರು, ಜಯಕುಮಾರ್ ಹಾದಿಗೆ, ಶೇಖರ್ ಹೊಸಳ್ಳಿ, ಸವಿತ, ಮೇರಿ, ರೋಜ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ