1003618848

 

 

ಅವೀನ್ ಟಿವಿ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಅವಿನ್ ಸ್ವರಸಂಗಮ ರಾಜ್ಯಮಟ್ಟದ ಸಂಗೀತ ಮಹಾಸಂಗಮ ಕಾರ್ಯಕ್ರಮ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮವನ್ನು ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಉದ್ಘಾಟಿಸಿದರು, ಅವಿನ್ ಟಿವಿ ಸಂಸ್ಥಾಪಕರಾದ ಮನೋಜ್ ಕೆಂಬತ್ತಮಕ್ಕಿ  ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಸ್ಥಾಪಕ ರವಿಕೃಷ್ಣ ರೆಡ್ಡಿ ಪ್ರಸ್ತುತ ಪತ್ರಿಕೋದ್ಯಮದ ವಿಚಾರವಾಗಿ ವಿಚಾರ ಮಂಡನೆ ಮಾಡಿದರು ; ಪ್ರಸ್ತುತ ದಿನಮಾನದಲ್ಲಿ ಪ್ರಜಾಪ್ರಭುತ್ವದ ಉಳಿವಿಗೆ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯವಾಗಿದೆ. ಬದಲಾದ ಕಾಲಮಾನದಲ್ಲಿ ಮಾಧ್ಯಮಗಳ ಸ್ವರೂಪವು ಬದಲಾಗಿದ್ದು, ಮುಖ್ಯವಾಹಿನಿ ಮಾಧ್ಯಮಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳು ಸಹ ಹೆಚ್ಚಿನ ಪ್ರಭಾವ ಬೀರುತ್ತಿವೆ. ಎಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗವಾಗುವುದಿಲ್ಲವೋ ಆಗ ಮಾಧ್ಯಮಗಳ ತಮ್ಮ ಘನತೆ ಉಳಿಸಿಕೊಳ್ಳಲು ಸಾಧ್ಯ. ಇಂದು ಪತ್ರಿಕೆ ಅಥವಾ ಟಿವಿ ಯೊಂದನ್ನು ನಡೆಸಬೇಕೆಂದರೆ ಸಾಕಷ್ಟು ಬಂಡವಾಳದ ಅವಶ್ಯಕತೆ ಇದೆ. ಹಣವಂತರು ಸಾಮಾಜಿಕ ಕಳಕಳಿಯಿಂದ ಮಾಧ್ಯಮಕ್ಕೆ ರಂಗಕ್ಕೆ ಬಂದರೆ ಬದ್ಧತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಭ್ರಷ್ಟಾಚಾರದ ವಿರುದ್ಧ ಕೆ ಆರ್ ಎಸ್ ಪಕ್ಷ ನಿರಂತರ ಹೋರಾಟ ಮಾಡುತ್ತಾ ಬರುತ್ತಿದೆ. ಯುವಜನರು ಭ್ರಷ್ಟಾಚಾರ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿಎತ್ತಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಅಶ್ವಿನಿ ಸಂತೋಷ್ ಸಾರಗೋಡು, ಸಿಪ್ರಿಯನ್ ಲೋಬೋ ಕೃಷ್ಣಾಪುರ, ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ಎಂ ಹೆಚ್ ಅಮರನಾಥ್, ಹಿರಿಯ ಸಹಕಾರಿ ಮಗ್ಗಲ ಮಕ್ಕಿ ಲಕ್ಷ್ಮಣಗೌಡ ಇವರನ್ನು ಗೌರವಿಸಲಾಯಿತು

ವೇದಿಕೆಯಲ್ಲಿ ಅವಿನ್ ಟಿವಿ ಸ್ಥಾನಿಕ ಸಂಪಾದಕರಾದ ಮಗ್ಗಲಮಕ್ಕಿ ಗಣೇಶ್, ಮೂಡಿಗೆರೆ ಜೇಸಿಐ ಅಧ್ಯಕ್ಷ ಸುನಿಲ್ ಉಪಸ್ಥಿತರಿದ್ದರು

ಬಕ್ಕಿ ಮಂಜುನಾಥ್ ಸ್ವಾಗತಿಸಿ, ವಸಂತ ಹಾರ್ಗೋಡ್ ಕಾರ್ಯಕ್ರಮ ನಿರೂಪಿಸಿದರು, ಮಗ್ಗಲಮಕ್ಕಿ ಗಣೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು

ಕಾರ್ಯಕ್ರಮದ ನಂತರ ಅವಿನ್ ಸುರಸಂಗಮ ರಾಜ್ಯಮಟ್ಟದ ಸಂಗೀತ ಸ್ಪರ್ಧೆಗೆ ಚಾಲನೆ ನೀಡಲಾಯಿತು..

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ