IMG-20260628-WA0007_copy_696x406

 

 

ಆಲ್ದೂರು ದೊಡ್ಡ ಮಾಗರವಳ್ಳಿ ಪಂಚಾಯಿತಿ ವ್ಯಾಪ್ತಿಯ ಬನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಕಾಮಾಕ್ಷಿ ಎಂ ಸಿ, ರವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆ ಶನಿವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ರಾದ ಬಿಬಿ ನಿಂಗಯ್ಯ, ಶಿಕ್ಷಕ ವೃತ್ತಿಯ ಜವಾಬ್ದಾರಿ ಹೊಣೆಗಾರಿಕೆ ಒತ್ತಡಗಳ ಕುರಿತು ಮಾತನಾಡಿದ ಅವರು ಶಿಕ್ಷಕರಿಲ್ಲದೆ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ, 31 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ನೀಡಿದ ಮುಖ್ಯ ಶಿಕ್ಷಕಿ ಕಾಮಾಕ್ಷಿಯವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವಾ ನಿವೃತ್ತಿ ಹೊಂದುತ್ತಿರುವುದು ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ಹಂಚಿಕೊಂಡರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಸಿ ಎಸ್, ಅಭಿನಂದನ ನುಡಿಗಳನ್ನು ಹಂಚಿಕೊಂಡರು.

ಸಿಆರ್‌ಪಿ ಕಮಲ, ಮುಖ್ಯ ಶಿಕ್ಷಕರಾದ ಕಾಮಾಕ್ಷಿಯವರು ಎಲ್ಲರಿಗೂ ಮಾದರಿಯಾಗಿದ್ದು ಹಿರಿಯರಾಗಿದ್ದರಿಂದ ಸಾಕಷ್ಟು ಸಲಹೆ ಸೂಚನೆಗಳನ್ನು ಮಾರ್ಗದರ್ಶನದ ಮೂಲಕ ಒದಗಿಸುತ್ತಿದ್ದರು ಎಂದರು.
ವಲಯ ಒಕ್ಕಲಿಗ ಸಂಘದ ಅಧ್ಯಕ್ಷರಾದ ಅಶೋಕ್ ಡಿಬಿ, ಶಿಕ್ಷಕರ ಜೀವನ ಕುಟುಂಬಕ್ಕೆ ಒಂದೆಡೆ ಸೀಮಿತವಾಗದೆ ಇನ್ನೊಂದೆಡೆ ಮಕ್ಕಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾರೆ ಎಂದು ತಿಳಿಸಿದರು.
ನಿವೃತ್ತಿ ಹೊಂದಿದ ಶಿಕ್ಷಕಿ ಕಾಮಾಕ್ಷಿ ರವರನ್ನು ಎಸ್ ಡಿ ಎಂ ಸಿ, ಹಳೆ ವಿದ್ಯಾರ್ಥಿಗಳ ಸಂಘ, ಗ್ರಾಮಸ್ಥರುಗಳು, ಸಹೋದ್ಯೋಗಿ ಶಿಕ್ಷಕರುಗಳು, ಸಾವಿತ್ರಿ ಬಾಪುಲೆ ಶಿಕ್ಷಕರ ಸಂಘದಿಂದಲೂ ಅಭಿನಂದಿಸಿ ಗೌರವಿಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷೆ ಪ್ರೇಮ, ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಶಿವಪ್ರಕಾಶ್,
ಮಾಜಿ ಹೌಸಿಂಗ್ ಬೋರ್ಡ್ ಅಧ್ಯಕ್ಷರಾದ ಹೆಚ್ ಜಿ ಹಾಲಪ್ಪ ಗೌಡ, ಜಿಲ್ಲಾ ಗ್ಯಾರೆಂಟಿ ಉಪಾಧ್ಯಕ್ಷರಾದ ಎಚ್ಎಸ್ ಕೃಷ್ಣೆಗೌಡ, ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಪುಷ್ಪಾವತಿ, ಶಿಕ್ಷಕ ಜಯರಾಮೇಗೌಡ,
ಎನ್ ರಾಜು, ಮೈಲಿಮನೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರೇಗೌಡ, ಪಂಚಾಯಿತಿ ಬಿಲ್ ಕಲೆಕ್ಚರ್ ಸಂಘದ ರಾಜ್ಯಾಧ್ಯಕ್ಷ ನಾರಾಯಣ್,
ಹಳಿಯೂರು ರುದ್ರೇಗೌಡ, ಆಲ್ದೂರು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಕರ ಸಂಘದ ಅಧ್ಯಕ್ಷರಾದ ದಿನೇಶ್, ಮೋಹಿದೀನ್ ಸೇಟ್, ಸಂದೇಶ್ ಎಚ್ಆರ್, ಸಂತೋಷ್ ಬೆಟ್ಟಗೆರೆ, ಪೋಷಕರು, ಗ್ರಾಮಸ್ಥರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ