ಮೂಡಿಗೆರೆ ಶಾಸಕರ ಕಛೇರಿಯಲ್ಲಿ, ರಾಯಭಾರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕರ್ನಾಟಕ (ರಿ.) ವತಿಯಿಂದ ಸಂಸ್ಥೆಯ ಅಧಿಕೃತ ಟೀ-ಶರ್ಟ್ ಹಾಗೂ ಅಧಿಕೃತ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕರಾದ ಶ್ರೀಮತಿ ನಯನ ಮೋಟಮ್ಮನವರು ಸಂಸ್ಥೆಯ ಅಧಿಕೃತ ಟೀ-ಶರ್ಟ್ ಹಾಗೂ ವೆಬ್‌ಸೈಟ್ ಅನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ರಾಯಭಾರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕರ್ನಾಟಕ ದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಯ್ ಕುಮಾರ್ ಸಂಸ್ಥೆಯ ಟೀ-ಶರ್ಟ್‌ನ ಉದ್ದೇಶವನ್ನು ವಿವರಿಸಿದರು.. ಟೀ-ಶರ್ಟ್‌ನ ಮುಂಭಾಗದಲ್ಲಿರುವ ಲೋಗೋದಲ್ಲಿ ಶಾಲೆ, ಶಾಲೆಗೆ ಹೋಗುವ ಮಕ್ಕಳು, ಕನ್ನಡ ಧ್ವಜ, ರಸ್ತೆ ಸುರಕ್ಷತಾ ಜಾಗೃತಿ, ಪರಿಸರ ಸಂರಕ್ಷಣೆ, ಪಕ್ಷಿಗಳು ಹಾಗೂ ಸಮಾಜಮುಖಿ ಸೇವೆಯ ಸಂದೇಶಗಳನ್ನು ಪ್ರತಿಬಿಂಬಿಸಲಾಗಿದೆ. ಲೋಗೋ ಸುತ್ತಲಿನ ನೀಲಿ ಬಣ್ಣದ ವೃತ್ತ ಏಕತೆ, ವಿಶ್ವಾಸ ಮತ್ತು ಅಭಿವೃದ್ಧಿಯ ಸಂಕೇತವಾಗಿದೆ ಎಂದರು.
ರಾಜ್ಯ ಉಪಾಧ್ಯಕ್ಷರಾದ ಮಹೇಶ್ ಮಾತನಾಡುತ್ತಾ.ಟೀ-ಶರ್ಟ್‌ನ ಹಿಂಭಾಗದಲ್ಲಿ “ಸರ್ಕಾರಿ ಶಾಲೆ ಉಳಿಸಿ ಅಭಿಯಾನ” ಎಂಬ ಘೋಷವಾಕ್ಯವನ್ನು ಅಳವಡಿಸಲಾಗಿದ್ದು, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಶಾಲೆಗಳ ಪೇಂಟಿಂಗ್, ಸ್ವಚ್ಛತೆ, ಪರಿಸರ ಸುಂದರೀಕರಣ, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಹಾಗೂ ಶಿಕ್ಷಣದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರಾದ ಪ್ರಭು ಮತ್ತುಮೂಡಿಗೆರೆ ಯುವ ಘಟಕದ ಅಧ್ಯಕ್ಷರಾದ ಕಿರಣ್, ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಅನ್ನು ಸಹ ಅನಾವರಣಗೊಳಿಸುವ ಮೂಲಕ ಸಂಸ್ಥೆಯ ಸಮಾಜಮುಖಿ ಕಾರ್ಯಗಳು, ಸೇವಾ ಚಟುವಟಿಕೆಗಳು ಹಾಗೂ ಮುಂಬರುವ ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ಹೇಳಿದರು
ಕಾರ್ಯಕ್ರಮದಲ್ಲಿ . ಮೂಡಿಗೆರೆ ತಾಲ್ಲೂಕು ಉಪಾಧ್ಯಕ್ಷರಾದ ರವಿ ಸೇರಿದಂತೆ ಸಂಸ್ಥೆಯ ವಿವಿಧ ಪದಾಧಿಕಾರಿಗಳು, ರಾಯಭಾರಿ ಸದಸ್ಯರು, ಸಮಾಜಸೇವಕರು ಹಾಗೂ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



