ದೈನಂದಿನ ವೃತ್ತಿ ಚಟುವಟಿಕೆಗಳಲ್ಲಿ ವರದಿಗಾರರು ಒತ್ತಡದಿಂದ ಬಳ ಲುವ ಸ್ಥಿತಿಯಿದೆ. ಈ ನಡುವೆ ಮಾನಸಿಕ ಕ್ಷಮತೆ ಕಡಿಮೆಗೊಳಿಸಲು ಹಾಗೂ ದೈಹಿಕ ವ್ಯಾಯಾಮ ವೃದ್ದಿಗೊ ಳಿಸಲು ಕ್ರೀಡಾಕೂಟ ಸಹಕಾರಿ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜೇಗೌಡ ಹೇಳಿದರು.
ಜಿಲ್ಲಾ ಸುಭಾಶ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸೋಮವಾರ ಚಿಕ್ಕಮಗಳೂರು ಪ್ರೆಸ್ ಕ್ಲಬ್‍ನಿಂದ ಆಯೋಜಿಸಿದ್ಧ ಕ್ರಿಕೇಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕತ ಜಗತ್ತಿನಲ್ಲಿ ಪತ್ರಿಕೋದ್ಯಮ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ವರದಿಗಾರರು, ಛಾಯಾಗ್ರಾಹಕರು ಪ್ರತಿನಿತ್ಯವು ಒತ್ತಡಕ್ಕೆ ಒಳಗಾಗುವುದು ಸಹಜವಾಗಿದೆ. ಸುದ್ದಿಪ್ರಸಾರದ ಜೊತೆಗೆ ಆನ್‍ಲೈನ್ ವೇದಿಕೆಗೂ ವರದಿಯನ್ನು ದಾಖಲಿಸುವ ಮೂಲಕ ಅತಿಹೆಚ್ಚು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದರು.
ಸಮಾಜದ ಆಗು-ಹೋಗು ಸೇರಿದಂತೆ ಸಾತ್ವಿಕ ಸಮಾಜದ ಉದ್ದಾರಕ್ಕೆ ಅನೇಕ ಗಂಟೆಗಳ ಕಾಲ ಸೇವೆ ಸಲ್ಲಿಸುವ ಪತ್ರಿಕೋದ್ಯಮ ಕೆಲಸಗಾರರಿಗೆ ವೃತ್ತಿ ಬದುಕಿನ ಒತ್ತಡ ಬದಿಗಿರಿಸಿ ಇಂದು ಒಂದು ದಿನದ ಮಟ್ಟಿಗೆ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಿ ಉತ್ಸಾಹದ ಕ್ರೀಡೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರೆಸ್‍ಕ್ಲಬ್ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ ಸಮಾಜವನ್ನು ತಿದ್ದುವ ಪತ್ರಕರ್ತರ ಸೇವೆ ಅವಿಸ್ಮರಣೀ ಯ. ಅಲ್ಲದೇ ರಾಜಕೀಯ ಸೇರಿದಂತೆ ಸಾರ್ವಜನಿಕ ನೈಜ ಸಮಸ್ಯೆಗಳನ್ನು ತಿಳಿಸುವಂಥ ವೃತ್ತಿಗೆ ಮಾನಸಿಕ ವಾಗಿ ಸದೃಢಗೊಳಿಸಲು ಪತ್ರಿಕಾ ದಿನಾಚರಣೆ ಪ್ರಯುಕ್ತ ಕ್ರೀಡಾಕೂಟ ಆಯೋಜಿಸುವ ಮೂಲಕ ಮನೋ ಸ್ಥೈರ್ಯ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಕೆಯುಡ್ಲ್ಯೂಜೆ ಜಿಲ್ಲಾಧ್ಯಕ್ಷ ಅನಿಲ್‍ಆನಂದ್ ಮಾತನಾಡಿ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯ ನಿಗೂ ಕ್ರೀಡೆ ಎಂಬುದು ಅತ್ಯವಶ್ಯಕ. ಮನರಂಜನೆ ಹೊರತಾಗಿ ವರದಿಗಾರರು ಮಾನಸಿಕವಾಗಿ ಹೆಚ್ಚು ಕರ್ತ ವ್ಯ ನಿರ್ವಹಿಸುವ ಪತ್ರಕರ್ತರಿಗೆ ಕೆಲವು ಗಂಟೆಗಳನ್ನು ದೈಹಿಕ, ಮಾನಸಿಕ ಹಾಗೂ ಶಾರೀರಿಕವಾಗಿಡಲು ಕ್ರೀ ಡೆ ಚಟುವಟಿಕೆ ಪೂರಕವಾಗಿದೆ ಎಂದರು.
ಪ್ರೆಸ್ ಕ್ಲಬ್ ಉಪಾಧ್ಯಕ್ಷ ಎ.ಎನ್.ಮೂರ್ತಿ ಮಾತನಾಡಿ ಕ್ರಿಕೇಟ್ ಪಂದ್ಯಾವಳಿ ಸ್ನೇಹಪೂರ್ವಕವಾಗಿ ಇರತಕ್ಕದ್ದು. ಯಾವುದೇ ಮನಸ್ಥಾಪಕ್ಕೆ ಆಸ್ಪದ ಕೊಡಬಾರದು. ಅಂಪೈರ್ ತೀರ್ಮಾನಕ್ಕೆ ಎಲ್ಲಾ ಆಟಗಾರರು ತಲೆಬಾಗಿ ನಡೆದುಕೊಳ್ಳಬೇಕು. ಗೆದ್ದವರು ಬೀಗದೇ, ಸೋತವರು ಕುಗ್ಗದೇ ಆಟವನ್ನು ಸರಿಸಮಾನಾಗಿ ಸ್ವೀಕ ರಿಸಬೇಕು ಎಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಗೋಪಿ, ಖಜಾಂಚಿ ಪುನೀತ್ ಹಾಗೂ ಸರ್ವ ಸದಸ್ಥರು ಉಪಸ್ಥಿತರಿದ್ದರು.


