ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ಸಂಜೆ ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ನೆರವೇರಿತು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೆ. ಎಂ. ಯೋಗೇಶ್ ಗೌಡ ಮತ್ತು ಅವರ ತಂಡ ಅಧಿಕಾರ ವಹಿಸಿಕೊಂಡಿತು.
ಈ ಸಂದರ್ಭದಲ್ಲಿ ಬಾಳೆಹೊನ್ನೂರು.ಪಟ್ಟಣದ ಬಸ್ ಸ್ಟ್ಯಾಂಡ್ ನಲ್ಲಿ ಲಯನ್ಸ್ ಸಂಸ್ಥೆಯವರು ದೇಶಕ್ಕೆ ಅನ್ನ ನೀಡುವ ರೈತ ಹಾಗೂ ಜೋಡೆತ್ತಿನ ಕಲಾಕೃತಿಯನ್ನು ಲೋಕಾರ್ಪಣೆ ಮಾಡಿ ಜನಮಾನಸದಲ್ಲಿ ಉಳಿಯುವ ಸಾಧನೆ ಮಾಡಿದ್ದಾರೆಂದು ಲಯನ್ಸ್ ಜಿಲ್ಲೆ 317 ಡಿ ರಾಜ್ಯಪಾಲ ಹೆಚ್ ಎಂ ತಾರಾನಾಥ್ ತಿಳಿಸಿದರು.
ರೈತನ ಕಲಾಕೃತಿಯು ಲಯನ್ಸ್ 8 ಜಿಲ್ಲೆಯ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನಗೊಂಡಿದೆ ಹಾಗೂ ಕೊಪ್ಪದಲ್ಲಿ ಪ್ರಾರಂಭಿಸಿರುವ ಡಯಾಲಿಸಿಸ್ ಸೆಂಟರ್ ಗೆ ಬಾಳೆಹೊನ್ನೂರಿನ ಕ್ಲಬ್ ನವರು ಹೆಚ್ಚಿನ ದೇಣಿಗೆ ನೀಡಿದ್ದಾರೆ. ಎಲ್ಲಾ ಸದಸ್ಯರು ಒಗ್ಗೂಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿದ್ದಾರೆಂದು ತಿಳಿಸಿದರು.
ಪದವಿ ಪ್ರದಾನ ಮಾಡಿದ ಮಾಜಿ ಜಿಲ್ಲಾ ಗವರ್ನರ್ ಹೆಚ್.ಜಿ ವೆಂಕಟೇಶ್ ಮಾತನಾಡಿ ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯೂ ತನ್ನದೇ ಆದ ನಿಯಮಗಳನ್ನು ಅಳವಡಿಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದೆ.ಎಲ್ಲಾ ಸದಸ್ಯರು ಶಿಸ್ತನ್ನು ಅಳವಡಿಸಿಕೊಂಡು ಸೇವೆ ಸಲ್ಲಿಸಿ ಸಮಾಜಕ್ಕೆ ಮಾದರಿಯಾಗಬೇಕೆಂದು ತಿಳಿಸಿದರು.
ನಾಗರೀಕ ಸನ್ಮಾನ ಸ್ವೀಕರಿಸಿದ ಠಾಣಾಧಿಕಾರಿ ಅಂಬರೀಶ್ ಮಾತನಾಡಿ ಸಂಸ್ಥೆಯೂ ಜನಪರ ಸೇವೆಗಳನ್ನು ಮಾಡಿದೆ. ಪೆÇೀಲೀಸ್ ಇಲಾಖೆಗೆ ಬೇಕಾದ ಕೆಲವೊಂದು ವಸ್ತುಗಳನ್ನು ಕೊಡುಗೆ ನೀಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿದ್ದರೆಂದು ತಿಳಿಸಿದರು.
ಹಿರಿಯರಾದ ಹೆಚ್ ಬಿ ರಾಜಗೋಪಾಲ್ ಮಾತನಾಡಿ ಬಾಳೆಹೊನ್ನೂರು ಸಂಸ್ಥೆಯೂ ಅತೀ ಹೆಚ್ಚು ಸದಸ್ಯರನ್ನು ಹೊಂದಿದ್ದು, ಸಮಾಜಮುಖಿ ಸೇವೆಗೆ ಸಹಕಾರ ನೀಡಿದ್ದಾರೆಂದು ತಿಳಿಸಿದರು. ನಿರ್ಗಮಿತ ಅಧ್ಯಕ್ಷ ಹೆಚ್. ಜೆ ವಿಕ್ರಮ್ ಮಾತನಾಡಿ ಬಿ. ಕಣಬೂರು ಗ್ರಾ.ಪಂ ನವರು ಬಸ್ ಸ್ಟ್ಯಾಂಡ್ ಆವರಣದಲ್ಲಿ ರೈತ ಹಾಗೂ ಜೋಡೆತ್ತಿನ ಕಲಾಕೃತಿ ಸ್ಥಾಪಿಸಲು ನಿವೇಶನ ನೀಡಿ ಸಹಕರಿಸಿದ್ದಾರೆ. ಅಧಿಕಾರ ಅವಧಿಯಲ್ಲಿ ತಂಗುದಾಣ, ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಸೇರಿದಂತೆ ಹಲವಾರು ಸಮಾಜಮುಖಿ ಸೇವೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಕೆ.ಎಂ ಯೋಗೀಶ್ ಗೌಡ ಮಾತನಾಡಿ ಹಲವಾರು ಸಮಾಜಮುಖಿ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಪ್ರಾಂತೀಯ ಅಧ್ಯಕ್ಷ ಎಂ.ಡಿ ಶಿವರಾಮ್,ಸ್ಥಾಪಕ ಅಧ್ಯಕ್ಷ.ಎಂ.ಆರ. ಮಂಜುನಾಥ ವಲಯಾಧ್ಯಕ್ಷ ಎಂ. ವಿ ಶ್ರೀನಿವಾಸ್ ಗೌಡ, ಸೀಜು, ನಿರ್ಗಮಿತ ಕಾರ್ಯದರ್ಶಿ ಸುಧಾಕರ್, ಖಜಾಂಚಿ ರವೀಂದ್ರ, ನಾರಾಯಣ ಮೇಲ್ಪಾಲ್, ಗುರುಮೂರ್ತಿ, ನೂತನ ಖಜಾಂಚಿ ಮಧುಕುಮಾರ್, ಬಿ.ಎಸ್ ಶ್ರೀನಿವಾಸ್ ಗೌಡ, ಹೆಚ್ ಉಮೇಶ್, ಸನ್ನಿ, ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.
ಸಾಧನೆ ಮಾಡಿದ ಎ.ಆರ್ ವೆಂಕಟೇಶ್, ನಟ ಮಂಜುನಾಥ್ ತುಪ್ಪೂರು, ಕೆ.ವಿ ಶಿವರಾಮ್, ಜಯಪ್ರಕಾಶ್, ತಾಜ್ ಸಾಹೇಬ್, ಎಂ.ಆರ್ ಜಯೇಶ್, ರುಕ್ಮಿಣಿ, ಜಗನ್ನಾಥ್ ಗೌಡರಿಗೆ ಸನ್ಮಾನಿಸಲಾಯಿತು, ಸಾಕ್ಷಿ ಪ್ರಾರ್ಥಿಸಿ, ವಿಕ್ರಮ್ ಸ್ವಾಗತಿಸಿ, ಸುರೇಂದ್ರ ಮತ್ತು ಮಂಜುನಾಥ್ ನಿರೂಪಿಸಿ, ನೂತನ ಕಾರ್ಯದರ್ಷಿ ಕೃಷ್ಣ ಮೂರ್ತಿ ವಂದಿಸಿದರು.


