ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ರಾಘವ ಹೆಚ್.ಎಸ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಕಲ್ಲಾನೆ ಅಧಿಕಾರ ಸ್ವೀಕರಿಸಿದ್ದಾರೆ.
ರೋಟರಿ ಸಭಾಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಹಾಯಕ ಗವರ್ನರ್ ಮೋಹನ್ ಹೆಚ್.ಎಸ್ ರಾಘವ ಮತ್ತು ಸತೀಶ್ ಅವರಿಗೆ ಅಧಿಕಾರಿ ಹಸ್ತಾಂತರದ ವಿಧಿ ನೆರವೇರಿಸಿದರು. ಜೋನಲ್ ಲೆಫ್ಟಿನೆಂಟ್ ರಮೇಶ್ ಸಿ.ಪಿ ಇದ್ದರು.ಆನಂತರ ಮಾತನಾಡಿದ ನೂತನ ಅಧ್ಯಕ್ಷ ರಾಘವ ನೂತನ ವರ್ಷದಲ್ಲಿ ಆರೋಗ್ಯ, ಶಿಕ್ಷಣ ಸೇರಿದಂತೆ ಈ ಸಾಲಿನಲ್ಲಿ ಮಾದರಿ ಚಟುವಟಿಕೆ ಮೂಲಕ ಸಮಾಜಮುಖಿ ಕೆಲಸ ಮಾಡುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ರೋಟರಿ ನಿರ್ಗಮಿತ ಅಧ್ಯಕ್ಷ ಮಹೇಂದ್ರ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಅನೇಕ ಸಮಾಜಮುಖಿ ಕೆಲಸದ ಜೊತೆ ಕಳಸ ಕೆಇಎಸ್ ಶಾಲೆ ಮುಂಬಾಗ ಶುದ್ದ ನೀರಿನ ಘಟಕ ಮಾಡಿರುವುದು ಸಂತಸ ತಂದಿದೆ ಎಂದರು.
ನಿರ್ಗಮಿತ ಕಾರ್ಯದರ್ಶಿ ವಿಶಾಲ್ ಕಳೆದ ಒಂದು ವರ್ಷದ ಅವಧಿಯ ಸಂಸ್ಥೆಯ ಕಾರ್ಯಚಟುವಟಿಕೆ ವರದಿ ಓದಿದರು. ಹೊರನಾಡಿನ ಜಿ.ಭೀಮೇಶ್ವರ ಜೋಷಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಕಳಸ ರೋಟರಿ ಸಂಸ್ಥೆ ಕಳೆದ 26 ವರ್ಷಗಳಲ್ಲಿ ಮಾಡಿರುವ ಸಾಮಾಜಿಕ ಚಟುವಟಿಕೆಯ ವಿಸ್ತಾರ ದೊಡ್ಡದು. ಸಮಾಜಮುಖಿಯಾಗಿ ಈ ಸಂಸ್ಥೆ ಕಳಸದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.
ಪಣೀಶ್, ದತ್ತಾತ್ರಿ, ಮನು, ರೋಹನ್ ಭಟ್, ಶೈವಿಕ್, ಸುಗಮ್, ಸಂದೀಪ್, ಕೆ.ಕೆ.ಬಾಲಕೃಷ್ಣ, ಪ್ರಸನ್ನ, ಬ್ರಹ್ಮದೇವ, ರಿತೇಶ್, ಗಿರಿಜಾ ಶಂಕರ್ ಜೋಷಿ, ಅಬ್ಸೋನ್ ಬಿನು ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ಇನ್ನರ್ ವೀಲ್ ಅಧ್ಯಕ್ಷರಾಗಿ ಮಾಲಾ ಭಟ್, ಕಾರ್ಯದರ್ಶಿ ಶೃತಿ ಪಣೀಶ್, ಖಜಾಂಚಿ ಶಮಿತಾ ಶೆಟ್ಟಿ, ಪದಾಧಿಕಾರಿಗಳಾಗಿ ದೀಪಾ ಕಾಶಿನಾಥ್, ಸಾವಿತ್ರಿ ಜೋಷಿ, ವೈಶಾಲಿ ಜೋಯಿಸ್, ಸಂಧ್ಯಾ ರಿತೇಶ್, ಉಷಾ ಕುಮಾರ್, ಮಾಲಿನಿ ಶತೀಶ್ ಅಧಿಕಾರ ಸ್ವೀಕರಿಸಿದರು.
ಪ್ರತೀಬಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನೀರು ಗಂಟಿ, ಅಂಬ್ಯಲೆನ್ಸ್ ಚಾಲಕ ಸುನೀಲ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


