ದೆಹಲಿಯಲ್ಲಿ ವಿದ್ಯಾರ್ಥಿಗಳು ತಮ್ಮ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸಿಪಿಐ ಪಕ್ಷ ಬೆಂಬಲಿಸುವ ಜತೆಗೆ ಪಕ್ಷದ ವತಿಯಿಂದ ಜು.27ರಂದು ಮೂಡಿಗೆರೆ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಲಾಗುವುದು ಎಂದು ಸಿಪಿಐ ಮುಖಂಡ ಬಿ.ಕೆ.ಲಕ್ಷ್ಮಣ್‍ಕುಮಾರ್ ಹೇಳಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೂರಿಕೆಯಿಂದ ವಿದ್ಯಾರ್ಥಿಗಳು ಅನ್ಯಾಯವಾಗಿದೆ. ಅಲ್ಲದೇ 20ಕ್ಕೂ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಗಂಭೀರ ವಿಚಾರವನ್ನು ಕೇಂದ್ರ ಸರಕಾರ ಪರಿಗಣನೆಗೆ ತೆಗೆದುಕೊಳ್ಳದೇ ಕಾಲ ಹರಣ ಮಾಡಿದ್ದು ಸರಿಯಲ್ಲ. ಅಲ್ಲದೇ ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡದೇ ಪ್ರಧಾನಿ ನರೇಂದ್ರ ಮೋದಿ ಅವರು ಸೆಲ್ಫಿ ವೀಡಿಯೋ ಮಾಡಿ ಕ್ರಮ ವಹಿಸಿರುವ ಬಗ್ಗೆ ಮಾಹಿತಿ ನೀಡಿರುವುದು ಪ್ರಧಾನಿ ಹುದ್ದೆಗೆ ಶೋಭೆ ತರುವ ವಿಚಾರವಲ್ಲ. ಇದನ್ನು ಮೊದಲೇ ಹೇಳಿದ್ದರೆ ಚಳುವಳಿ ನಡೆಯುತ್ತಲೇ ಇರಲಿಲ್ಲವೆಂದು ಹೇಳಿದರು.
ಮುಖಂಡ ಜಗದೀಶ್ ಚರ್ಕವರ್ತಿ ಮಾತನಾಡಿ, ದೆಹಲಿಯಲ್ಲಿ ವಿದ್ಯಾರ್ಥಿಗಳು ನ್ಯಾಯಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಗೆ ವಿರೋಧ ಪಕ್ಷಗಳು ಸುಮ್ಮನೆ ಕೂರಲು ಬೆಂಬಲವಾಗಿ ನಿಲ್ಲುವುದು ಅನಿವಾರ್ಯ. ಅದನ್ನೇ ತಪ್ಪೆನ್ನುವ ರೀತಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿಲ್ಲವೆಂದು ಜನರ ದಾರಿ ತಪ್ಪಿಸುವುದನ್ನು ಮೊದಲು ಬಿಡಬೇಕು. ಯಾವುದೇ ರಾಜಕೀಯ ಪಕ್ಷವನ್ನಾದರೂ ಕಡೆಗಣಿಸಬಹುದು. ಆದರೆ ವಿದ್ಯಾರ್ಥಿಗಳನ್ನು ಕಡೆಗಣಿಸಿದರೆ ಯಾವ ಮಟ್ಟದಲ್ಲಿ ಹೋರಾಟ ನಡೆಯುತ್ತದೆ ಎಂಬುದನ್ನು ಕೇಂದ್ರ ಸರಕಾರ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.
ಮುಖಂಡರಾದ ನಾಗೇಶ್ ಮಡ್ಡಿಕೆರೆ, ರಮೇಶ್ ಕೆಳಗೂರು, ಗುಂಡಣ್ಣ, ರಘು, ಸುರೇಶ್, ಇಬ್ರಾಹಿಂ ಉಪಸ್ಥಿತರಿದ್ದರು.


