sunti

 

 

ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಸುತ್ತಾಮುತ್ತಾ ಕಾಡಾನೆಗಳ ಹಾವಳಿ ಮಿತಿಮೀರಿದೆ. ಹತ್ತಾರು ಕಾಡಾನೆಗಳ ಗುಂಪು ಸುತ್ತಲ ಗ್ರಾಮಗಳ ರೈತರ ಜಮೀನಿಗೆ ಲಗ್ಗೆ ಇಡುತ್ತಿದ್ದು, ಅಪಾರ ಬೆಳೆನಷ್ಟ ಉಂಟುಮಾಡುತ್ತಿವೆ. ಚೀಕನಹಳ್ಳಿ ಸಮೀಪ ಸುಮಾರು 8 ಎಕರೆ ತೋಟವನ್ನು ನಾಶಮಾಡಿದ್ದ ಕಾಡಾನೆಗಳ ಗುಂಪು ಇದೀಗ ಗೋಣಿಬೀಡು ಸಮೀಪದ ಜಿ ಹೊಸಹಳ್ಳಿಯಲ್ಲಿ ಗುರುವಾರ ರಾತ್ರಿ ಶುಂಠಿ ಗದ್ದೆಗಳಿಗೆ ಲಗ್ಗೆ ಇಟ್ಟು ಅಪಾರ ನಷ್ಟ ಉಂಟುಮಾಡಿವೆ.

ಬೀಟಮ್ಮ  ಗುಂಪಿನ ಕಾಡಾನೆಗಳು ರಾತ್ರಿ ವೇಳೆ ಜಿ ಹೊಸಹಳ್ಳಿಯ ತೋಟ. ಶುಂಠಿ ಬೆಳೆಗಳನ್ನು ನಾಶಮಾಡಿರುತ್ತವೆ. ಗ್ರಾಮದ ಹೆಚ್.ಸಿ. ಗೋಪಾಲ್ ಎಂಬುವವರು ತಮ್ಮ ಗದ್ದೆಯಲ್ಲಿ ಬೆಳೆದಿದ್ದ ಸುಮಾರು 2 ಎಕರೆ ಶುಂಠಿ ಬೆಳೆಯನ್ನು ನಾಶಪಡಿಸಿವೆ.

ಕಾಡಾನೆಗಳ ಹಾವಳಿಯಿಂದ ರೈತರು ಕಾಫಿ, ಅಡಿಕೆ, ಶುಂಠಿ, ಭತ್ತದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ರೈತರು ಮನೆಯಿಂದ ಹೊರಬರಲು ಭಯಪಡುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ