August 24, 2026
;
suddi-4

 

 

ಆಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಬಳಿ ಹಾದು ಹೋಗುವ ಮೂಡಿಗೆರೆ ಆಲ್ದೂರು ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಯಿಂದಾಗಿ ಗುಂಡಿಗಳಿಂದ ದಿಣ್ಣೆಗಳಾಗಿ ಮಾರ್ಪಾಡಾಗಿದ್ದು, ಗುಂಡಿಗಳಲ್ಲಿ ಮಳೆನೀರು ನಿಂತಿರುವುದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದ್ದು, ಆಟೋಗಳು, ನಾಲ್ಕು ಚಕ್ರ ದ್ವಿಚಕ್ರ ಸೇರಿ ಲಘು ವಾಹನಗಳನ್ನು ಚಾಲನೆ ಮಾಡುವಾಗ ಅಪಘಾತಗಳು ನಿರಂತರವಾಗಿ ಆಗುತ್ತಿರುವುದರಿಂದ ಬೇಸತ್ತ ಗ್ರಾಮಸ್ಥರು ತಾವೇ ಸ್ವತಃ ಮುಚ್ಚಿದ್ದಾರೆ.

ಶಾಸಕರಾದಿಯಾಗಿ ಅಧಿಕಾರಿಗಳಗಮನಕ್ಕೆ ತಂದರೂ ಗುಂಡಿ ಮುಚ್ಚಲು ಮೀನಾ ಮೇಷ ಎಣಿಸುತ್ತಿದ್ದು, ಈ ಗುಂಡಿಯಲ್ಲಿ ದ್ವಿಚಕ್ರ ವಾಹನ ಚಾಲಕರು ಬಿದ್ದು ಆಸ್ಪತ್ರೆಗೆ ದಾಖಲಾದರೂ ಸಹಾ ನಿದ್ರಿಸುತ್ತಿರುವ ಅಧಿಕಾರಿಗಳ ವರ್ತನೆ ಯಿಂದ ಬೇಸತ್ತ ಗ್ರಾಮಸ್ಥರೆ ತಮ್ಮ ದೈನಂದಿನ ಕೆಲಸಕ್ಕೆ ರಜೆ ಹಾಕಿ ಗುಂಡಿ ಮುಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಈ ರಸ್ತೆಯಲ್ಲಿ ಓಡಾಡುವ ವಾಹನ ಮಾಲೀಕರು ಗ್ರಾಮಸ್ಥರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

ಸತ್ತಿಹಳ್ಳಿ ಗ್ರಾಮಸ್ಥರುಗಳಾದ ಶಿವಪ್ಪ, ದಿನೇಶ,ರಾಜು,ಗಣೇಶ್, ಇಂದ್ರೇಶ, ಪುಟ್ಟ ,ದೇವರಾಜು, ಸುರೇಶ್,ಸೇರಿದಂತೆ ಇನ್ಮ್ನ ಅನೇಕರು ತಂಡವಾಗಿ ಆಳವಾದ ರಸ್ತೆ ಗುಂಡಿಗಳನ್ನು ಮುಚ್ಚಿ ಶನಿವಾರ ಸಮತಟ್ಟು ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;