ಸರ್ಕಾರ ಎಲ್ಲವನ್ನು ಕೊಟ್ಟಿದೆ ಆದರೇ ವಿಧ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಹತ್ತು ಹಲವುಯೋಜನೆಗಳನ್ನು ಹಮ್ಮಿಕೊಂಡಿದ್ದರು. ಮುಖ್ಯ ರಸ್ತೆಯಲ್ಲಿ ರುವ ಗ್ರಾಮಗಳ ವಿಧ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದ ಪರಿಸ್ಥಿತಿ ಒದಗಿ ಬಂದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ.ಭರತ್ ತಿಳಿಸಿದರು.
ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಗ್ರಾಮಪಂಚಾಯತಿ ವ್ಯಾಪ್ತಿಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಕೆಳಗೂರು ಗ್ರಾಮದಲ್ಲಿ 100 ಕ್ಕೂ ಅಧಿಕ ವಿಧ್ಯಾರ್ಥಿಗಳು ತಮ್ಮ ವ್ಯಾಸಾಂಗಕ್ಕಾಗಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿದೆ. ಮತ್ತು ಹೆಚ್ಚಾಗಿ ಕೂಲಿ ಕಾರ್ಮಿಕರ ಮಕ್ಕಳೆ ಅಧಿಕವಾಗಿದ್ದು. ಬೆಳಿಗ್ಗೆ 9 ರಿಂದ 10.30 ರ ತನಕ ಚಿಕ್ಕಮಗಳೂರಿಗೆ ತೆರಳಲು ಸಾರಿಗೆ ಬಸ್ಸುಗಳು ಇಲ್ಲದೆ ಪರೆದಾಡುವಂತಾಗಿದೆ. 9 ರಿಂದ 10.30 ರೊಳಗೆ 40 ಅಧಿಕ ಎಕ್ಸ್‍ಪ್ರಸ್ ಬಸ್ಸುಗಳು ಓಡಾಡುತ್ತಿದ್ದು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಿಲುಗಡೆ ಮಾಡುವಂತೆ ಕಳೆದ 6 ವರ್ಷಗಳಿಂದ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಪತ್ರಗಳನ್ಮ್ನ ಅರ್ಪಿಸಿದ್ದರು ಮನವಿ ಸ್ವಿಕರಿಸಿದ ಅಧಿಕಾರಿಗಳು ನಾಳೆಯಿಂದ ವೇಗದೂತ ಬಸ್ಸುಗಳುನಿಲ್ಲುತ್ತವೆ ಎಂದು ಭರವಸೆ ನೀಡಿ ಎರಡು ದಿನ ನಿಲ್ಲಿಸಿ ಮತ್ತೆ ಯಥಾ ಪ್ರಕಾರ ವಿಧ್ಯಾರ್ಥಿಗಳು ಕೈತೋರಿಸಿದರು ಬಸ್ ನಿಲ್ಲಿಸದೆ ಹೋಗುತ್ತಿದ್ದಾರೆ . ಎರಡು ಬಾರಿ ಶಾಸಕರು ಅಧಿಕಾರಿಗಳಿಗೆ ತಿಳಿಸಿದರೂ ಸಹ ನಿಲ್ಲಿಸುತ್ತೇವೆ ಎಂಬ ಭರವಸೆ ನೀಡಿದರೆ ಹೊರತು ವಿಧ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಿಲ್ಲಾ.
ವಿಷಯ ಅರಿತ ಕಾಂಗ್ರೆಸ್ ಮುಖಂಡ ಉಪ್ಪಳ್ಳಿ ಕೆ ಭರತ್ ಬಸ್ ಘಟಕದ ಅಧಿಕಾರಿಗಳಿಗೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಅವರಿಗೆ ಭರವಸೆ ದೊರೆಯಿತೆ ಹೊರತು ಕಾರ್ಯ ರೂಪಕ್ಕೆ ಬರಲಿಲ್ಲಾ. ಸೋಮವಾರ ದಿನವಾದ ಇಂದು ವಿದ್ರ್ಯಾರ್ಥಿಗಳು ಕೆಳಗೂರು ಬಸ್ ತಂಗುದಾಣದ ಬಳಿ ಬಸ್ ಕಾಯುತ್ತಾ ಹೈರಾಣಾಗಿದ್ದರು. ಅಲ್ಲಿಗೆ ಆಗಮಿಸಿದ ಭರತ್, ಗ್ರಾಮದ ಮುಖಂಡರುಗಳಾದ ಮಂಜಯ್ಯ ವಿಧ್ಯಾರ್ಥಿಗಳ ಪೋಷಕರು 10 ಗಂಟೆ ಸಮಯಕ್ಕೆ ಮೂಡಿಗೆರೆಯಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ಎಕ್ಸ್‍ಪ್ರಸ್ ಬಸ್ಸನ್ಮ್ನ ಅಡ್ಡಹಾಕಿ ನಿಲ್ಲಿಸಿ ಅಧಿಕಾರಿಗಳಿಗೆ ದಿಕ್ಕಾರವನ್ಮ್ನ ಕೂಗಿ ಇದು ಸಾಂಕೇತಿಕ ಚಳುವಳಿ ಬಸ್ ನಿಲ್ಲಿಸದೆ ಇದೇ ಚಾಳಿ ಮುಂದುವರೆದರೆ ಉಗ್ರ ರೀತಿಯ ಹೋರಾಟವನ್ಮ್ನ ನಡೆಸಲಾಗುವುದು ಎಂದು ಎಚ್ಚರಿಕೆಯನ್ಮ್ನ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಾದ ಉಮೇಶ್, ಪ್ರದೀಪ್, ಕುಸುಮಾ ಮಂಜಯ್ಯ, ಭಾರತಿ, ಕಲ್ಪನಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.


