suddi-1 (3)

 

 

ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಹಮ್ಮಿ ಕೊಂಡು ಬಂದಿದ್ದು ಉತ್ತಮ ಬೆಳೆಯನ್ನು ಬೆಳೆಯುವ ಸಲುವಾಗಿ ತೋಟಗಾರಿಕೆ ಇಲಾಖೆಯಡಿಯಲ್ಲಿ ಪುನಶ್ಛೇತನ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ ರೈತರು ಈ ಅವಕಾಶವನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕಿ ನಯನಾ ಮೋಟಮ್ಮ ಕರೆ ನೀಡಿದರು.

ಮೂಡಿಗೆರೆ ಪಟ್ಟಣದ ತೋಟಗಾರಿಕಾ ಇಲಾಖೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 2026-27 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಡಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಮಿಷನ್ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಕಾಳು ಮೆಣಸು ಬೆಳೆಗಾರರಿಗೆ ಕಾಳುಮೆಣಸು ಪುನಶ್ಛೇತನ ಕಾರ್ಯಕ್ರಮಕ್ಕೆ ರೈತರಿಗೆ ಮೆಣಸಿನ ಬಳ್ಳಿಗಳ  ವಿತರಣೆ ಮಾಡುವುದರ ಮೂಲಕ ಚಾಲನೇ ನೀಡಿ ಮಾತನಾಡಿದ ಅವರು.

ಈ ಕಾರ್ಯಕ್ರಮದಡಿಯಲ್ಲಿ ಮೂಡಿಗೆರೆ ತಾಲ್ಲುಕಿನ 130 ಹಾಗೂ ಕಳಸ ತಾಲ್ಲುಕಿನ 50 ಜನ ಫಲಾನುಭವಿಗಳಿಗೆ ಕಾಳುಮೆಣಸಿನ ಗಿಡಗಳನ್ನು 2 ಕೆ ಜಿ ಪೆಪ್ಪರ್ ಸ್ಪಷಲ್, ಮತ್ತು 2 ಲೀಟರ್ ಎಎಂಸಿ ಯನ್ಮ್ನ ವಿತರಣೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದರು.

ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಶ್ರೀಮತಿ ದಿವ್ಯ ಎನ್ ಅವರು ಮಾತನಾಡುತ್ತಾ. ಸಮಗ್ರ ರೋಗ ನಿಯಂತ್ರಣಾ ಯೋಜನೆಯಡಿಯಲ್ಲಿ 100 ಜನ ರೈತರಿಗೆ 9 ಲೀಟರ್ 1 ಹೆಕ್ಟರ್‍ಗೆ ಎ ಎಂಸಿ ಜೈವಿಕ ಗೊಬ್ಬರನ್ನ್ಮು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಣಜೂರು ಸುಬ್ರಾಯಗೌಡ, ದೀಕ್ಷಿತ್ ಕಣಚೂರು,ಸುದೀರ್ ಚಕ್ರಮಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.’

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ