suddi-13

 

 

ಜೀವನ ಪದ್ಧತಿಯಂತೆ ನಮ್ಮೊಳಗೆ ಹಾಸುಹೊಕ್ಕಾಗಿರುವ ಜಾನ ಪದ ಸಂಸ್ಕøತಿ, ಕಲೆ, ಸಾಹಿತ್ಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಅಗತ್ಯ ಜಿಲ್ಲಾ ಕರ್ನಾ ಟಕ ಜಾನಪದ ಪರಿಷತ್ ಗೌರವಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಹೇಳಿದರು.

ಚಿಕ್ಕಮಗಳೂರು ನಗರದ ಜಿಲ್ಲಾ ಕಾರಾಗೃಹದಲ್ಲಿ ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಆಯೋಜಿಸಿ ದ್ಧ ‘ಜಾನಪದ ಅಳಿವು-ಉಳಿವು’ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಉದ್ಘಾಟಿಸಿ ಮಾತನಾಡಿದರು.

ಜಾನಪದ ಕಲೆ, ಸಾಹಿತ್ಯ ದಿನದಿಂದ ದಿನಕ್ಕೆ ಮರೆಯಾಗುತ್ತಿದೆ. ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಾ ಗಿದೆ ಎಂದ ಅವರು, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ಭಾರತವಾಗಿದ್ದು, ಎಲ್ಲಾ ಮಾದರಿಯ ಜಾನಪದ ಕಲೆಗಳನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ ಆಗಬೇಕು ಎಂದರು.

ಜಾನಪದ ಜೀವನ ಪದ್ದತಿ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಜಾನಪದ ಅಗಾಧವಾಗಿದೆ. ಗ್ರಂಥಗಳಲ್ಲಿ ಅದು ಉಳಿದುಕೊಂಡಿಲ್ಲ. ಬಾಯಿಂದ ಬಾಯಿಗೆ ವರ್ಗವಾಗಿರುವ ಸಾಹಿತ್ಯವನ್ನು ಉಳಿಸಿ ಬೆಳೆಸಬೇಕಿದೆ. ಅ ಲ್ಲದೇ ಕಾರಾಬಂಧಿಗಳು ಕೂಡಾ ತಮ್ಮಲ್ಲಿ ಅಡಗಿರುವ ಜಾನಪದ ಸಂಸ್ಕøತಿಯನ್ನು ಅನಾವರಣಗೊಳಿಸಬೇಕು ಎಂದು ತಿಳಿಸಿದರು.

ಕ.ಜಾ.ಪ ತಾಲ್ಲೂಕು ಅಧ್ಯಕ್ಷ ಸಚಿನ್‍ಸಿಂಗ್ ಮಾತನಾಡಿ ಜನಪದೀಯರಲ್ಲಿ ಯಾ ವುದೇ ಬೇಧ ಭಾವ ವಿಲ್ಲ. ಸಹಜ ಪ್ರೀತಿಯಿಂದ ಬೆಳೆದು ಬಂದವರು. ಈ ನಿಟ್ಟಿನಲ್ಲಿ ಜಾನಪದೀಯ ಮನ ಸ್ಸುಗಳನ್ನು ಜೋಡಿ ಸುವ ಕೆಲಸವನ್ನು ಪರಿಷತ್ ಮಾಡುವ ಮೂಲಕ ಉತ್ತಮ ಹಾಗೂ ನೆಮ್ಮದಿಯ ಸಮಾ ಜ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.

ಯುವಜನಾಂಗ ತಾಂತ್ರಿಕ ಬದುಕಿನಲ್ಲಿ ಕಳೆದುಹೋಗದೇ, ಆರಂಭದಿಂದಲೇ ಜಾನಪದ ಸೊಗಡನ್ನು ಮೈಗೂಡಿಸಿಕೊಳ್ಳಬೇಕು ಎಂದ ಅವರು ಕೂಡಿ ಬಾಳುವ ಸಂತೋಷವನ್ನು ಉಳಿಸಿಕೊಂಡು ಬಂದವರೇ ಜನಪದರು. ಜನಪದರು ಎಂದಿಗೂ ಪ್ರಚಾರ ಮತ್ತು ಪ್ರಸಿದ್ಧಿಗೆ ಒಳಪಟ್ಟವರಲ್ಲ. ಹೀಗಾಗಿ ವಿದ್ಯಾರ್ಥಿಗಳು ಜಾನಪದದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಹೆಚ್.ಜಿ.ಮಂಜುನಾಥ್ ಮಾತನಾಡಿ ಜಾನಪದ ಮೂಲಬೇರನ್ನು ಇಂದಿ ನ ಯುವಸಮಾಜ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ವಿಶೇಷವಾಗಿ ಕಾರಾಬಂಧಿಗಳು ಬಿಡುಗಡೆ ಬಳಿಕ ಸಾ ತ್ವಿಕ ಜೀವನ ನಡೆಸುವುದರಿಂದ ಜಾನಪದವನ್ನು ಅವಿಭಾಜ್ಯ ಅಂಗವಾಗಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜಾಪ ಮಹಿಳಾ ಪ್ರ.ಕಾರ್ಯದರ್ಶಿ ಶೈಲಾ ಬಸವರಾಜ್ ವಹಿಸಿದ್ದ ರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರ.ಕಾರ್ಯದರ್ಶಿ ಸವಿತಾ ಸತ್ಯನಾರಾಯಣ್, ಸಾಂಸ್ಕøತಿಕ ಚಿಂತಕಿ ಗೀತಾ ಎಂ.ಎಲ್.ಮೂರ್ತಿ, ಆಶ್ರಯ ಫೌಂಡೇಷನ್ ಅಧ್ಯಕ್ಷೆ ಡಾ|| ವರ್ಷ, ಮುಖಂಡರುಗಳಾದ ದಯಾನಂ ದ್, ನೇತ್ರಾ ಅಣ್ಣಪ್ಪ, ಸುಮ ಪ್ರಸಾದ್, ಚಂದನ್‍ಕುಮಾರ್, ಅನ್ನಪೂರ್ಣ ಮುಂತಾದವರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ