ಕಾಫಿ ನಾಡಿನ ನೂರಾರು ಹಳ್ಳಿಗಳನ್ನು ಪಶ್ಚಿಮ ಘಟ್ಟದ ಸೂಕ್ಷ್ಮ ವಲ ಯದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಮಲೆನಾಡಿನ ಗ್ರಾಮಸ್ಥರು ಬುಧವಾರ ಅಪರ ಜಿಲ್ಲಾಧಿಕಾರಿ ನಂ ಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದರು.
ಮಲೆನಾಡು ಭಾಗದ ಜನರ ಮನವಿ ಪರಿಗಣಿಸಿದ ಕೇಂದ್ರ ಸರ್ಕಾರದ ಪರಿಸರ ಅರಣ್ಯ ಮತ್ತು ಹ ವಮಾನ ಬದಲಾವಣೆ ಸಚಿವಾಲಯ ಜಿಲ್ಲೆಯ 137 ಹಳ್ಳಿ ಸೇರಿದಂತೆ ಪಶ್ಚಿಮ ಘಟ್ಟದ ವ್ಯಾಪ್ತಿಗೆ ಸೇರಿರುವ ಸಾವಿರಾರು ಜನವಸತಿ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಹೊಸ ಕರಡು ಅಧಿಸೂ ಚನೆ ಪ್ರಕಟಿಸಿದೆ ಎಂದರು.
ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ರಾಜ್ಯದ ಪಶ್ಚಿಮಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 20668 ಚ. ಕಿ.ಮೀ. ವಿಸ್ತೀರ್ಣವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿ ಆಕ್ಷೇಪಣೆ ಸಲ್ಲಿಸಿ 60 ದಿನಗಳ ಕಾಲ ಕಾಲಾವಧಿ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪಶ್ಚಿಮಘಟ್ಟ ಪ್ರದೇಶದ ಸಾರ್ವಜನಿಕರ ಅಭಿಪ್ರಾಯ ಸಂ ಗ್ರಹಿಸಿ ಮೇಲ್ಮಟ್ಟಕ್ಕೆ ವರದಿ ನೀಡಬೇಕು ಎಂದು ಮನವಿ ಮಾಡಿದರು.
ಸಮೀಕ್ಷೆಯಿಂದ ಸಂಕಷ್ಟವನ್ನು ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಬಗ್ಗೆ ಅರಿವಿಲ್ಲ. ಹಿಂದಿನ ಕರಡು ಅಧಿಸೂಚನೆಗಳಿಗೆ ರಾಜ್ಯದ ನೂರಾರು ಗ್ರಾ.ಪಂ.ಗಳು ಸಾವಿರಾರು ನಾಗರೀಕರು, ಜನಪ್ರತಿ ನಿಧಿಗಳು ಸರ್ಕಾರ ಆಕ್ಷೇಪಣೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದರೂ ಅಧಿಸೂಚನೆಯಲ್ಲಿ ಕಡಿಮೆ ಮಾಡದಿರು ವುದು ಆತಂಕ ಮೂಡಿಸಿದೆ ಎಂದರು.
ಕಸ್ತೂರಿ ರಂಗನ್ ವರದಿಯು ಅವೈಜ್ಞಾನಿಕವಾಗಿರುವುದರಿಂದ ಇದಕ್ಕೆ ಪೂರಕವಾಗಿ 10 ಜಿಲ್ಲೆಗಳ 20 688 ವಿಸ್ತೀರ್ಣವನ್ನು ಭೌತಿಕವಾಗಿ ಸಮೀಕ್ಷೆ ನಡೆಸಿ, ಈ ಸ್ಥಳಗಳಲ್ಲಿ ನೂರಾರು ವರ್ಷಗಳಿಂದ ಬದುಕು ಕಟ್ಟಿ ಕೊಂಡಿರುವ ಜನರ ಹಾಗೂ ಸಾವಿರಾರು ವರ್ಷಗಳ ಇತಿಹಾಸವುಳ್ಳ ದೇವಸ್ಥಾನ, ಪೂರ್ವಜರ ಕುರುಹುಗ ಳು ವಲಯದಿಂದ ಕೈಬಿಟ್ಟು ಸ್ಥಳೀಯರಿಗೆ ಯಥಾಸ್ಥಿತಿ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈಶ್ವರಹಳ್ಳಿ ಮಹೇಶ್, ಸೀತರಾಮಭರಣ್ಯ, ವಿನೋದ್ ಬೊಗಸೆ, ದೇವರಾಜ್, ಚಾಮಿನ್, ಪ್ರಜ್ವಲ್, ಎಸ್‍ಡಿಎಂ ಮಂಜುನಾಥ್, ದಿನೇಶ್, ಸಂತೋಷ್ ಹಾಜರಿದ್ದರು.


