November 1, 2026
;
WhatsApp Image 2026-08-04 at 6.00.29 AM

 

 

ಗೋಣಿಬೀಡು ಹೊಸಳ್ಳಿಯಲ್ಲಿ ನೆಸ್ಲೆ ಕಂಪನಿ ವತಿಯಿಂದ ಕಾಫಿ ಬೆಳಗಾರರ ವಿಚಾರ ಸಂಕಿರಣ ಹಾಗೂ ಪುನರುಜ್ಜೀವನ ಕೃಷಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನೆಸ್ಲೆ ಕಾಫಿಯ ಚಿಕ್ಕಮಗಳೂರು ಜಿಲ್ಲೆಯ ಮುಖ್ಯಸ್ಥರಾದ ಶಿವಕುಮಾರ್ ಅವರು ಮಾತನಾಡಿ ;  ಜೇನು ಸಾಕಾಣಿಕೆ ಮತ್ತು ಸಾವಯವ ಗೊಬ್ಬರ ಮತ್ತು ಜೀವಾಮೃತ ಕೃಷಿ ಬೆಳೆಗಳಿಗೆ ಯಥೇಚ್ಛವಾಗಿ ಬಳಸುವುದರಿಂದ ಆರೋಗ್ಯ ಸುಧಾರಿಸುತ್ತದೆ ಹಾಗೂ ಜೇನು ಸಾಕಾಣಿಕೆಯಿಂದ ಕಾಫಿ ಹೂವು ಬಿಡುವ ಕಾಲದಲ್ಲಿ ಹೆಚ್ಚು ಪರಾಗ ಸ್ಪರ್ಶ ಉಂಟಾಗಿ ಕಾಪಿ ತುಂಬಾ ಸೆಟ್ಟಿಂಗ್ ಆಗುತ್ತದೆ 2 ವರ್ಷಗಳಿಂದ ಜೇನು ಸಾಕಾಣಿಕೆ ಮಾಡುವುದರಿಂದ ಈ ವರ್ಷ ಮತ್ತು ಕಳೆದ ಸಾರಿ ರೈತರ ಜಮೀನಿನಲ್ಲಿ ಕಾಫಿ ಫಸಲು ತುಂಬಾ ಬಂದಿರುತ್ತದೆ ಅಡಿಕೆ ಮೆಣಸು ಇವುಗಳಿಗೆ ಜೇನು ಅತ್ಯಗತ್ಯ ಮತ್ತು ಕೀಟನಾಶಕ ಕಳೆನಾಶಕ ರಸಗೊಬ್ಬರ ಬಳಕೆ ಹಾಗೂ ಯೂರಿಯವನ್ನ ಯಥೇಚ್ಛವಾಗಿ ಬಳಸುವುದರಿಂದ ಮಣ್ಣು ಆರೋಗ್ಯವನ್ನು ಕಳೆದುಕೊಂಡಿದೆ ಅದಕ್ಕಾಗಿ ರೈತರು ತಮ್ಮ ಜಮೀನುಗಳಲ್ಲಿ ಮಾಡಿಕೊಂಡು ರೈತರ ಆದಾಯವ ಮತ್ತು ಆರೋಗ್ಯವನ್ನ ಕಾಪಾಡಿಕೊಳ್ಳಬಹುದು ಕಾಫಿ ಮಂಡಳಿಯವರು ಭಾರತ ದೇಶ ಯುರೋಪ್ ದೇಶಕ್ಕೂ ಕಾಫಿಯನ್ನು ರಫ್ತುಮಾಡುತಿದೆ ಅದಕ್ಕಾಗಿ   ಬೆಳಗಾರರು ಕಾಫಿ ಮಂಡಳಿಯವರೊಂದಿಗೆ ನೋಂದಾವಣೆ ಮಾಡಿಸಬೇಕಾಗಿ ಕೇಳಿಕೊಂಡರು

ಕಾರ್ಯಕ್ರಮದಲ್ಲಿ ತೋಟಗಾರಿಕಾ ಹಿರಿಯ ಅಧಿಕಾರಿಗಳಾದ ದಿವ್ಯ ಅವರು ತೋಟಗಾರಿಕಾ ಇಲಾಖೆಯಲ್ಲಿ ಸಿಗುವ ಸೌಲತ್ತುಗಳ ಬಗ್ಗೆ ತುಂಬಾ ಸವಿಸ್ತಾರವಾಗಿ ತಿಳಿಸಿದರು .

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎ ಟಿ ಕೃಷ್ಣಮೂರ್ತಿ ಮಾತನಾಡಿ  ಕೃಷಿ ವಿಜ್ಞಾನ ಕೇಂದ್ರದಲ್ಲಿ ತಿಂಗಳಿಗೆ ನಾಲ್ಕೈದು ಸಾರಿ ಕೋಳಿ ಸಾಕಾ ಕಾಣಿಕೆ ಮೀನು ಸಾಕಾಣಿಕೆ ಹಸು ಸಾಕಾಣಿಕೆ ಜೇನು ಸಾಕಾಣಿಕೆ ಅಣಬೆ ಬೇಸಾಯ ವಿವಿದ ಸ್ತ್ರೀ ಶಕ್ತಿ ಸ್ವಸಾಯ ಸಂಘದವರಿಗೆ ನಿರಂತರವಾಗಿ ತರಬೇತಿಯನ್ನು ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದರು

ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಎಚ್ ಕೆ ಪೂರ್ಣೇಶ್ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ನಿರ್ದೇಶಕರು ಎಟಿ ಕೃಷ್ಣಮೂರ್ತಿ ಮತ್ತು ತೋಟಗಾರಿಕೆ ಹಿರಿಯ ಅಧಿಕಾರಿ ದಿವ್ಯ  ಹಾಗೂ ಕಾಫಿ ಬೋರ್ಡಿನ ವಿಶ್ವನಾಥ್ ಅವರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾಕ್ಟರ್ ಪ್ರಶಾಂತ್  ಹಾಗೂ ರೈತರ ಉತ್ಪಾದಕರ ಉಪಾಧ್ಯಕ್ಷರು ಶಂಕರ್ ಅವರು ಯೋಗೇಶ್ ಜೀ ಹೊಸಹಳ್ಳಿ ಹಾಗೆಯೇ ಕಾರ್ಯಕ್ರಮದಲ್ಲಿ ZAHRS, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಎಲ್ಲ ವಿಜ್ಞಾನಿಗಳು ಭಾಗವಹಿಸಿದ್ದರು

ಗೋಣಿಬೀಡು ಹೊಸಳ್ಳಿ, ಹಿರೇಸೀಗರ, ಚಿಮಟೆಗೆರೆ ರೈತರ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಂಡರು

 

 

Leave a Reply

Your email address will not be published. Required fields are marked *