August 16, 2026
leed suddi

 

 

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ಸಿನ ಹಿರಿಯ ನಾಯಕರ ಪೈಕಿ ಕೆಲವರು ಮೂಡಿಗೆರೆ ಕ್ಷೇತ್ರದಲ್ಲಿ ಈಗಿನ ಶಾಸಕಿಯವರಿಗೆ ಟಿಕೆಟ್ ನೀಡದಂತೆ ಪಟ್ಟು ಹಿಡಿದಿದ್ದರು. ಅವರ ಮಾತನ್ನು ಧಿಕ್ಕರಿಸಿ ನಾವು ಟಿಕೆಟ್ ಕೊಡಿಸಿ ಗೆಲ್ಲಿಸಿ ತಪ್ಪು ಮಾಡಿದ್ದೇವೆ. ಮುಂದೆ ಜಿಪಂ, ತಾಪಂ, ಗ್ರಾಪಂ ಚುನಾವಣೆ ಎದುರಿಸಲು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಹೇಳಿದ್ದಾರೆ.

ಗೋಣಿಬೀಡಿನಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು. . ಕಾಂಗ್ರೆಸ್ ಪಕ್ಷ ತತ್ವ ಸಿದ್ದಾಂತದಲ್ಲಿ ರಾಜಿ ಮಾಡಿಕೊಂಡಿಲ್ಲ. ಕೋಮುವಾದಿ ಶಕ್ತಿಯೊಂದಿಗೆ ನಿರಂತರವಾಗಿ ಹೋರಾಟ ನಡೆಸಿ ಅಧಿಕಾರಕ್ಕೇರಿದೆ. ಹೊಸದಾಗಿ ಗೆಲುವು ಪಡೆದ ಶಾಸಕಿ ಕೋಮುವಾದಿಗಳೊಂದಿಗೆ ಕೈಜೋಡಿಸಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಕಡೆಗಣಿಸುತ್ತಿದ್ದಾರೆ ಶಾಸಕಿಯ ಕೋಮುವಾದಿ ಧೋರಣೆಗೆ ಕಾರ್ಯಕರ್ತರು ಬೇಸತ್ತಿದ್ದಾರೆ. ಅವರೆಲ್ಲರನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.

ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಮ್ ಮಾತನಾಡಿ, ಎಸ್‍ಐಆರ್ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರು ಇದುವರೆಗೂ ಒಂದು ಸಭೆಯನ್ನು ಮಾಡಿಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮಾತ್ರ ಅಲ್ಲಲ್ಲಿ ಸಭೆ ನಡೆಸುತ್ತಿದ್ದಾರೆ. ಕಾರ್ಯಕರ್ತರನ್ನು ಬಿಟ್ಟು ಶಾಸಕರು ಪಕ್ಷ ಕಟ್ಟಲು ಹೊರಟಿದ್ದಾರೆ. ಅದು ಅಸಾಧ್ಯ. ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ, ಮೋಟಮ್ಮ ಅವರು ಶಾಸಕರಾಗಿದ್ದಾಗ ಎಲ್ಲರನ್ನೂ ಒಗ್ಗೂಡಿಸಿ ಸಭೆ ನಡೆಸುತ್ತಿದ್ದರು. ಮೋಟಮ್ಮ ಅವರು ಉತ್ತಮ ಆಡಳಿತ ನೀಡಿದ್ದಾರೆ. ಈಗಿನ ಶಾಸಕರು ಎಲ್ಲರನ್ನೂ ದೂರವಿಟ್ಟು ತಮಗೆ ತೋಚಿದಂತೆ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಇಂದಿನ ಕಾಂಗ್ರೆಸ್ ಸಮಾವೇಶ ಯಾರ ಪರ ಅಥವ ವಿರುದ್ಧವಲ್ಲ. ಸೆಪ್ಟೆಂಬರ್ ನಂತರ ಗ್ರಾಪಂಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆಗೆ ಸಜ್ಜಾಗಬೇಕು. ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹುದ್ದೆಯನ್ನು ಹಿರಿಯ ಕಾಂಗ್ರೆಸ್ ಮುಖಂಡ ಬಿ.ಎಸ್.ಜಯರಾಮ್ ಅವರಿಂದ ಕಿತ್ತುಕೊಳ್ಳಲಾಗಿದೆ. ಹುದ್ದೆ ತೆರವುಗೊಳಿಸುವಂತೆ ಹೇಳಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಹಿರಿಯ ಮುಖಂಡರಿಗೆ ಅವಮಾನ ಮಾಡಲಾಗಿದೆ. ಇದರಿಂದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ ಎಂದು ತಿಳಿಸಿದರು.

ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ.ಮನು ಮಾತನಾಡಿ, ಶಾಸಕರು ತಮ್ಮ ಜೊತೆ ಮೀರ್ ಸಾಧಿಕ್ ಗಳನ್ನು ಇಟ್ಟುಕೊಂಡು ಪಕ್ಷವನ್ನು ತುಳಿಯುತ್ತಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕರನ್ನು ಪಾಳೆಗಾರರು, ಸೆಟ್ ದೋಸೆ, ಕಿಚನ್ ಕ್ಯಾಬಿನೆಟ್ ಎಂದೆಲ್ಲಾ ವ್ಯಂಗ್ಯವಾಡುತ್ತಾರೆ. 20 ವರ್ಷ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದಾಗ ನಮ್ಮ ಜೇಬಿನಿಂದ ಹಣ ಹಾಕಿ ಪಕ್ಷವನ್ನು ಸಂಘಟಿಸಿದ್ದೇವೆ. ಈಗ ನಮ್ಮಿಂದ ಅಧಿಕಾರ ಪಡೆದಿರುವ ಶಾಸಕರು ಪಕ್ಷವನ್ನು ಮಾತ್ರವಲ್ಲ ನಮ್ಮನ್ನು ತುಳಿಯುತ್ತಿದ್ದಾರೆ. 20 ವರ್ಷದಲ್ಲಿ ಕಾಂಗ್ರೆಸ್ ಸತ್ತಿತ್ತು ಎಂದು ಶಾಸಕರು ಹೇಳುತ್ತಾರೆ. ಪಕ್ಷ ಸತ್ತಿದ್ದರೆ, ಈ ಬಾರಿ ಅವರು ಗೆಲ್ಲಲು ಶಾಸಕಿಗೆ ಸಾಧ್ಯವಾಗುತ್ತಿತ್ತಾ? ನಮ್ಮ ಮನೆಯನ್ನು ಹಾಳು ಮಾಡಿಕೊಂಡು ಪಕ್ಷವನ್ನು ಕಟ್ಟಿದ್ದೇವೆ. ಇಂತಹ ಶಾಸಕಿಯಿಂದ ದೂರವಿರುವುದೆ ಒಳ್ಳೆಯದೆಂದು ಅವರಿಂದ ಅಂತರ ಕಾಯ್ದುಕೊಂಡು ಪಕ್ಷವನ್ನು ಮತ್ತೆ ಸಂಘಟಿಸುತ್ತಿದ್ದೇವೆ ಎಂದು ನುಡಿದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೆ ಪಕ್ಷದ ಸಭೆಯನ್ನು ಕರೆಯಬೇಕು. ಜನಪ್ರತಿನಿಧಿಗಳು ಸಭೆ ಕರೆದರೆ ಅಂತಹ ಸಭೆಗೆ ನಾವು ಮುತ್ತಿಗೆ ಹಾಕುತ್ತೇವೆ. ಮುಂದೆ ಆಗುವ ಅನಾಹುತಕ್ಕೆ ಜನಪ್ರತಿನಿಧಿ ಕಾರಣವಾಗಬೇಕಾಗುತ್ತದೆ. ಜನಪ್ರತಿನಿಧಿಗಳು ಪಕ್ಷದ ಸಭೆ ಕರೆಯುವಂತಿಲ್ಲ. ಜನಪ್ರತಿನಿಧಿಯಾದವರು ಪಕ್ಷದ ಕಚೇರಿಗೆ ಭೇಟಿ ನೀಡಬೇಕು. ಸಭೆ ಸಮಾರಂಭದಲ್ಲಿ ಭಾಗವಹಿಸಬೇಕು. ಪ್ರತ್ಯೇಕವಾಗಿ ಅವರ ಮನೆಯಲ್ಲಿ ಸಭೆ ನಡೆಸಲು ಅವಕಾಶವಿಲ್ಲ. ಎಸ್‍ಐಆರ್ ಬಳಿಕ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಕಾರ್ಯಕರ್ತರು ಇದಕ್ಕೆ ಅವಕಾಶ ನೀಡಬಾರದು. ಮತದಾರರ ಪಟ್ಟಿಯಿಂದ ಯಾರೊಬ್ಬರೂ ಹೊರಗುಳಿಯಬಾರದು. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ರೀತಿಯಲ್ಲಿ ಪಕ್ಷವನ್ನು ಸಂಘಟಿಸಬೇಕು ಎಂದು ತಿಳಿಸಿದರು.

ಆಲ್ದೂರಿನ ಕಾಂಗ್ರೆಸ್ ಕಾರ್ಯಕರ್ತ ದೀಪಕ್ ಮಾತನಾಡಿ, ಬಿಜೆಪಿಯವರಿಗೆ ಕಾಮಗಾರಿಯ ಗುತ್ತಿಗೆ ನೀಡಿ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಶಾಸಕರ ಗೃಹ ಕಚೇರಿ ಕಾರ್ಪೋರೇಟ್ ಕಛೇರಿ ಮಾದರಿಯಲ್ಲಿದೆ ಎಂದು ಹೇಳಿಕೊಳ್ಳುತ್ತಾ ದುರಾಡಳಿತ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿ ಪ್ರಮೋದ್ ಮುತಾಲಿಕ್ ಅವರಿದ್ದ ವೇದಿಕೆಯಲ್ಲಿ ಬಿಜೆಪಿ ಅಥವ ಬಿಎಸ್ಪಿ ಪಕ್ಷಕ್ಕೆ ಹೋಗುತ್ತೇನಾ ಎಂದು ಅವರನ್ನು ಅವರೇ ಪ್ರಶ್ನಿಸಿಕೊಂಡಿದ್ದಾರೆ. ಪಕ್ಷ ಬಿಟ್ಟು ಹೋಗುವುದಾದರೆ ಅಭ್ಯಂತರವಿಲ್ಲ ಹೋಗಲಿ. ಮುಂದಿನ ಚುನಾವಣೆಯಲ್ಲಿ ಈಗಿನ ಶಾಸಕಿಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು. ಮತ್ತೊಮ್ಮೆ ಟಿಕೆಟ್ ನೀಡಿದರೆ ನಾವು ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಎಚ್ಚರಿಸಿದರು.

ಚಿಕ್ಕಮಗಳೂರಿನ ಉಪ್ಪಳ್ಳಿ ಕೆ.ಭರತ್ ಮತನಾಡಿ. ಮತದಾರರ ಪರಿಸ್ಕರಣೆ 17 ಕಡೆ ದಿನಾಂಕವಾಗಿದ್ದು ಒಂದೊಂದು ಓಟಿಗೆ ಮಹತ್ವವಿದೆ ಒಂದುಓಟು ಇಡಿ ಜಗತ್ತನ್ನೆ ಬದಲಾಯಿಸಬಹುದು ಆದ್ದರಿಂದ ಪ್ರತಿಯೊಬ್ಬರು ಎಸ್ ಐ ಆರ್ ಮತದಾರರ ಪರಿಷ್ಕರಣೆ ಮಾಡಿಸುವಂತೆ ಮನವಿಗೊಂಡರು. ಮೂಡಿಗೆರೆ ಕ್ಷೇತ್ರದಿಂದ ಪರಿಶಿಷ್ಟ ಜಾತಿಯಿಂದಲೇ ಸ್ಪದಿಸಬೇಕು. 1961 ನೇ ಇಸವಿಯಿಂದಲೂ ಈಕ್ಷೇತ್ರ ಪರಿಶಿಷ್ಠ ಜಾತಿ ಮೀಸಲುಕ್ಷೇತ್ರವಾಗಿದೆ. ಕ್ಷೇತ್ರದಲ್ಲಿ ಪಕ್ಷದ ಅಭ್ಯಥಿಯಾಗಿ ನಿಂತು ಗೆದ್ದು ದ್ವಿಮುಖ ರಾಜಕಾರಣ ಮಾಡುವುದು ಸರಿಯಲ್ಲಾ.ಅಧಿಕಾರಕ್ಕೆ ಬಂದು ಮೂರು ವರುಷ ಕಳೆದರೂ ರಸ್ತೆ ಗುಂಡಿಗಳನ್ನು ಮುಚ್ಚಲಿಕ್ಕೆ ಆಗಲಿಲ್ಲಾ ಎಂದರೆ ತಾತ್ಕಲಿಕ ಗುಂಡಿ ಮುಚ್ಚಲು ಸಾಧ್ಯವಾಗಿಲ್ಲಾ ಎಂದರೇ ನಾಚಿಕೆಯಾಗಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ವಕ್ತಾರ ಮರಗುಂದ ಪ್ರಸನ್ನ ಮಾತನಾಡಿ, ಆರ್ ಎಸ್ ಎಸ್ ಹಿನ್ನೆಲೆ ಹೊಂದಿರುವವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕುವಂತೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಕೇಸರಿ ಶಾಲು ಧರಿಸಿದವರು, ಕೋಮುವಾದಿಗಳೊಂದಿಗೆ ಕೈಜೋಡಿಸಿದವರು, ಪ್ರಮೋದ್ ಮತಾಲಿಕ್ ಜೊತೆ ವೇದಿಕೆ ಹಂಚಿಕೊಂಡವರು, ಬಿಜೆಪಿ ಕಾರ್ಯಕರ್ತರಿಗೆ ಕಾಮಗಾರಿಯ ಗುತ್ತಿಗೆ ನೀಡುವ ಕೋಮುವಾದಿ ಜನಪ್ರತಿನಿಧಿಗಳು ಮತ್ತವರ ಬೆಂಬಲಿಗರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಕೆ.ಆರ್.ಮಹೇಶ್, ಕೆ.ಟಿ.ಜಗದೀಶ್, ಸಿ.ಕೆ.ಇಬ್ರಾಹಿಂ ಹಾಜಿ, ಯು.ಎಚ್.ಹೇಮಶೇಖರ್, ಮರಗುಂದ ಪ್ರಸನ್ನ, ಡಿ.ಎಲ್.ಅಶೋಕ್ ಕುಮಾರ್, ಸಿ.ಎಚ್. ಅಹಮದ್ ಬಾವ , ಉಮ್ಮರಬ್ಬ, ಅಕ್ರಂ ಹಾಜಿ, ವರದೇಗೌಡ, ರೆಬೆಲ್ಲೊ, ಜುಬೇದ, ವಿನಯ್ ಕುಮಾರ್ ಕೆಂಜಿಗೆ, ಎ.ಸಿ.ಅಯೂಬ್ ಹಾಜಿ, ಬಿ.ಎಚ್.ಮಹಮ್ಮದ್, ಎಂ.ಎಸ್.ಆನಂತ್, ಸುಂದರ್ ಕುಮಾರ್, ಸಂಪತ್ ಮುಗ್ರಳ್ಳಿ, ಜೋಹರ್ ಅಲಿ, ಜಿ. ಎಚ್ .ಹಾಲಪ್ಪಗೌಡ, ಮೊಯ್ದೀನ್ ಸೇಟ್, ಬಿ.ಎ.ಉಮರ್, ನಿಖಿಲ್ ಚಕ್ರವರ್ತಿ, ಮಜಿದ್, ಅಶ್ರಫ್ ಆಲ್ದೂರು ಇತರರಿದ್ದರು.

ಸಮಾವೇಶದಲ್ಲಿ ಗೋಣಿಬೀಡು ಹೋಬಳಿ ಕಾಂಗ್ರೇಸ್ ಅಧ್ಯಕ್ಷ ಎ.ಜಿ. ಸುಬ್ರಾಯಗೌಡ ಅವರು ಸೇರಿದಂತೆ ಶಾಸಕಿ ನಯನಾ ಮೋಟಮ್ಮ ಅವರ ಬೆಂಬಲಿಗ ಮುಖಂಡರು ಮತ್ತು ಕಾರ್ಯರ್ತರು ಗೈರಾಗಿದ್ದು ಎದ್ದು ಕಾಣುತ್ತಿತ್ತು.

 

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ