ವರ್ಷಕ್ಕೆ ಒಂದು ಬಾರಿಯಾದರೂ ಸಮುದಾಯು ಒಟ್ಟಾಗಲು ಸಹಕಾರಿಯಾಗುವುದಲ್ಲದೆ. ತಮ್ಮ ಮಕ್ಕಳ ಪ್ರತಿಭೆಗೆ ಒಂದು ವೇದಿಕೆಯನ್ನು ನೀಡಿದಂತಾಗುತ್ತದೆ. ಪ್ರಕೃತಿಯೊಂದಿಗೆ ಆರೋಗ್ಯಕ್ಕೆ ಸಹಕಾರಿಯಾದ ಆಹಾರ ಪದ್ದತಿ ಜೀವನ ಶೈಲಿಯನ್ನು ಆಟಿ ತಿಂಗಳು ಕಲಿಸಿಕೊಡುತ್ತದೆ ಎಂದು ಕಳಸ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಎಂ.ಎ.ಶೇಷಗಿರಿ ತಿಳಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘ ಕಳಸ ಇವರಿಂದ ಆಟಿಡೊಂಜಿ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂತಹ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ .ಬದಲಾದ ಕಾಲ ಘಟ್ಟದಲ್ಲಿ ತುಳುನಾಡಿನ ಮೂಲ ಆಚರಣೆಗಳು ಮರೆಯಾಗುತ್ತಿದೆ.ನಮ್ಮ ಹಿರಿಯರು ಅನುಸರಿಸಿದ ಶ್ರೇಷ್ಠ ಪರಂಪರೆಯ ತಿರುಳನ್ನು ಅರಿತು ಆಚರಣೆ ಸಂಸ್ಕøತಿಯನ್ನು ಮಕ್ಕಳಿಗೆ ಪರಿಚಯಿಸಲು ಇಂತಹ ಕೂಟಗಳು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ರವಿ ಸುವರ್ಣ ಮಾತನಾಡಿ ತಾಲ್ಲೂಕಿನಲ್ಲಿ ಇರುವ ಕೆಲವೇ ಬಿಲ್ಲವ ಕುಟುಂಬಗಳು ಒಗ್ಗಟ್ಟಾಗಿ ನಮ್ಮ ಒಗ್ಗಟ್ಟನ್ನು ಸಮಾಜಕ್ಕೆ ತೋರಿಸಬೇಕಾಗಿದೆ.ನಮ್ಮ ಸಂಘಟನೆಗಳಿಗೆ ಬಲ ತುಂಬಲು ಇಂತಹ ಕಾರ್ಯಕ್ರಮಗಳು ಅವಶ್ಯಕವಾಗಿದೆ. ಸಮುದಾಯದ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ನೀಡಿ ಸಂಸ್ಕಾರ ಸಂಸ್ಕøತಿಯನ್ನು ಕಲಿಸಿ ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಯವಂತೆ ಮಾಡಬೇಕು. ಈ ವರೆಗೆ ನಮ್ಮ ಸಮುದಾಯದವರು ಯಾರೆ ಸಮಸ್ಯೆಗೆ ಸಿಲುಕಿದರೂ ಕೂಡ ಅಂತವರಿಗೆ ನಾವು ನೆರವಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಅಲ್ಲದೆ ಕಳೆದ 21 ವರ್ಷಗಳಿಂದ ಕಳಸ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತಿ ಪಡೆದ ಮುಕುಂದ ಕಿಶೋರ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ಶ್ರೀನಿವಾಸ್, ರಾಮಚಂದ್ರ, ಚಂದ್ರಶೇಖರ, ಪೂರ್ಣಿಮಾ ಕಿಶೋರ್, ಹೇಮಾ ರವಿ ಸುವರ್ಣ ಇತರರು ಇದ್ದರು.


