ದೇಶದ ಮೊದಲ ರಾಷ್ಟ್ರೀಯ ಗೀತೆಯಾದ `ವಂದೇ ಮಾತರಂ’ಗೆ ಅವಮಾನ ಮಾಡಿ, ದೇಶದ್ರೋಹದ ಮನೋಭಾವ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ಮಂಡಲದ ನೇತೃತ್ವದಲ್ಲಿ ಮೂಡಿಗೆರೆ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷ ತಾರೇಶ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅಭಿಷೇಕ್ ಜಾವಳಿ, ಪ್ರಸಾದ್ ಹುಲ್ಲೇಮನೆ, ಜಿಲ್ಲಾ ಉಪಾಧ್ಯಕ್ಷರಾದ ಅವಿನಾಶ್ ಜನ್ನಾಪುರ, ಜಿಲ್ಲಾ ಕಾರ್ಯದರ್ಶಿಗಳಾದ ಬಾಲು ಶೆಟ್ಟಿ, ಮನೋಜ್, ಚಿರಾಗ್ ಕೊಟ್ರಕೆರೆ, ಮಿಥುನ್ ಬೆಳ್ಳಿ, ನಗರ ಅಧ್ಯಕ್ಷರಾದ ರಂಗನಾಥ್, ಸಾಗರ್ ಹುಲ್ಲೇಮನೆ, ರೋಹಿತ್, ಅವಿನಾಶ್ ಛತ್ರಮೈದಾನ, ಮಂಜುನಾಥ್, ಲೋಕೇಶ್, ಸಚಿನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.


