August 21, 2026
;
WhatsApp Image 2026-08-17 at 6.41.35 AM

 

 

ದೇಶಿ ಗೋ ತಳಿಗಳ ಸಂರಕ್ಷಣೆ ಮತ್ತು ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ “ಸಾವಯವ ಕೃಷಿ ವಿಚಾರ ಸಂಕಿರಣ ಮತ್ತು ದೇಶಿ ಗೋವು ತಳಿಗಳ ಸಂರಕ್ಷಣಾ ಅಭಿಯಾನ”ದ ಅಂಗವಾಗಿ ಎಚ್.ಟಿ.ಎಂ.ಜಿ.ಜೆ.ಎಸ್ ಟ್ರಸ್ಟ್ ನ ಮೂಲಕವಾಗಿ ಬೆಂಗಳೂರಿನ ಕೆಂಗೇರಿಯಲ್ಲಿರುವ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ 20 ಮಲೆನಾಡು ಗಿಡ್ಡಗಳನ್ನು ದಾನ ಮಾಡಾಲಾಯಿತು ಎಂದು ಎಚ್.ಟಿ.ಎಂ.ಜಿ.ಜೆ.ಎಸ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಚ ಎದ್.ಎಂ.ಶಿವಪ್ರಕಾಶ್ ತಿಳಿಸಿದರು.

ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠವು ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಜೊತೆಗೆ ನಾಡಿನಲ್ಲಿ ದೇಶಿ ಗೋ ತಳಿಗಳ ಸಂರಕ್ಷಣೆ ಮತ್ತು ನೈಸರ್ಗಿಕ ಕೃಷಿಗೆ ನಿರಂತರವಾಗಿ ಉತ್ತೇಜನ ನೀಡುತ್ತಾ ಬಂದಿದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಸ್ಥಾನವಿದ್ದು, ರೈತರಿಗೆ ಹೈನುಗಾರಿಕೆ ಮತ್ತು ಸುಸ್ಥಿರ ಬೇಸಾಯದ ಮಹತ್ವವನ್ನು ಮಠವು ಬೋಧಿಸುತ್ತಿದೆ.ದೇಶಿ ಹಸುಗಳ ಸಾಕಾಣಿಕೆ ಮತ್ತು ಪ್ರಮುಖ ತಳಿಗಳ ಸಂರಕ್ಷಣೆ.ರಾಸಾಯನಿಕಮುಕ್ತ ಸಾವಯವ ಕೃಷಿ ಪದ್ಧತಿಗಳ ಕುರಿತು ಜಾಗೃತಿ.ರೈತರಿಗೆ ದೇಸಿ ಹಸುಗಳ ಆಧಾರಿತ ಕೃಷಿ ಕುರಿತು ಮಾರ್ಗದರ್ಶನ.ಮಠದ ವತಿಯಿಂದ ಧರ್ಮ, ಕೃಷಿ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡುತ್ತಿದ್ದು, ಮಲೆನಾಡು ಗಿಡ್ಡಗಳ ಗೋವುಗಳನ್ನುಸಾಕಲು ಆಹಾರದ ಕೊರತೆಯಿದ್ದು ಮತ್ತು ಅವುಗಳ ಆರೈಕೆ ನೋಡಿಕೊಳ್ಳಲು ಕಾರ್ಮೀಕರ ಕೊರತೆಯನ್ಮ್ನ ಎದುರಿಸುತ್ತಿರುವವರು ತಮ್ಮನ್ನು ಸಂಪರ್ಕಿಸಿದಲ್ಲಿ ಆ ಗೋವನ್ನು ದಾನವಾಗಿ ತೆಗದುಕೊಂಡು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ ಕ್ಕೆ ತಲುಪಿಸಿ ನಿಶ್ಚಲನಂದನಾಥ ಸ್ವಾಮೀಜಿಯ ಅನುಗ್ರÀಹದಂತೆ ಮಠದ ವತಿಯಿಂದ ಈ ಹಸುಗಳನ್ನು ನೈಸರ್ಗಿಕ ಮತ್ತು ಸಾವಯವ ಕೃಷಿಕರಿಗೆ ವಿತರಿಸಲಾಗುವುದು. ಅವುಗಳಿಗೆ ಪುನರ್ ಜೀವನ ನೀಡುವುದರೊಂದಿಗೆ ಗೋತಳಿ ರಕ್ಷಣೆ ಮಾಡುವುದೆ ತಮ್ಮ ಉದ್ದೇಶವಾಗಿದೆ ಎಂದರು.

ಚಿಕ್ಕಮಗಳೂರು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಎಲ್. ಸಂದೀಪ್, ಬಿಳಗಲಿ ಗ್ರಾಮ, ಮೂಡಿಗೆರೆ ತಾಲ್ಲೂಕು ಇವರು 20 ಮಲೆನಾಡು ಗಿಡ್ಡ ದೇಶಿ ಹಸುಗಳನ್ನು ಎಚ್.ಟಿ.ಎಂ.ಜಿ.ಜೆ.ಎಸ್ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಎಚ್.ಎಂ. ಶಿವಪ್ರಕಾಶ್ ರವರ ಮೂಲಕ ದಾನ ಮಾಡಿದರು. ಕನ್ನೇರಿ ಸಿದ್ದಗಿರಿ ಮಠದ ಪರಮಪೂಜ್ಯ ಜಗದ್ಗುರು ಆದೃಶ್ಯ ಶ್ರೀ ಕಾಡ ಸಿದ್ದೇಶ್ವರ ಸ್ವಾಮಿಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಡಾ.ನಿಶ್ಚಲನಂದನಾಥ ಸ್ವಾಮ್ಭಿಜಿ ರೈತರಿಗೆ ಗೋವುಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆಯ ಜಿ.ಹೆಚ್. ದಶರಥ್, ಮಹೇಶ್ ಚಿನ್ಮಯಿ, ವಿಶ್ವಾಸ್, ಸಹನಾ ಮತ್ತು ಸುಗುಣ, ಚಿಕ್ಕಮಗಳೂರಿನ ಡಾ.ವರ್ಷಾ ಕೃಷ್ಣೇಗೌಡ, ಮದ್ದೂರಿನ ಶಿವಲಿಂಗೇ ಗೌಡ್ರು, ಬಿದರಹಳ್ಳಿ ಪುನಿತ್ ಏರ್ ಪೋರ್ಸ್ ಇಂಜನಿಯರ್, ಮದ್ದೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;