August 22, 2026
;
jjm

 

 

ಮೂಡಿಗೆರೆ ಜೆ.ಎಂ. ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ರಸ್ತೆಯ ಮದ್ಯದಲ್ಲಿ ಅಲ್ಲಲ್ಲಿ ಅಡ್ಡಡ್ಡವಾಗಿ ರಸ್ತೆಯನ್ನು ತುಂಡರಿಸಿ ಪೈಪ್ ಲೈನ್ ಅಳವಡಿಸಲಾಗಿದೆ. ಆದರೆ ರಸ್ತೆ ಮಧ್ಯೆ ಕಾಂಕ್ರೀಟ್ ಅಗೆದ ಪರಿಣಾಮ ಉಂಟಾಗಿರುವ ಗುಂಡಿಗಳನ್ನು ವರ್ಷಕಳೆದರೂ ಮುಚ್ಚದೇ ಹಾಗೆ ಬಿಡಲಾಗಿದೆ.  ಮಳೆನೀರಿನಿಂದ ರಸ್ತೆ ಮೇಲೆ ನೀರು ನಿಂತು ಕೆಸರುಮಯವಾಗಿದೆ. ಶಾಲೆಗೆ ಹೋಗುವ ಮಕ್ಕಳು ಯೂನಿಫಾರ್ಮ್ ಧರಿಸಿ ಬಸ್‌ಗಾಗಿ ಕಾಯುವಾಗ ವಾಹನಗಳು ನೀರು ಚಿಮ್ಮುವುದರಿಂದ ಅವರ ಬಟ್ಟೆಗಳು ಕೊಚ್ಚೆಯಾಗುತ್ತಿವೆ. ಇದರಿಂದ ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದೆ.

ಹಾಗೆಯೇ ವಾಹನಗಳನ್ನು ಓಡಿಸುವಾಗ ಪದೇ ಪದೇ ಗುಂಡಿಗೆ ಬಿದ್ದು ತೊಂದರೆಯುಂಟಾಗುತ್ತಿದೆ. ಇದು ಕೇವಲ ಜೆ.ಎಂ.ರಸ್ತೆ ಒಂದರ ಸಮಸ್ಯೆಯಲ್ಲ. ಪಟ್ಟಣದ ತುಂಬೆಲ್ಲಾ ಹೀಗೆ ರಸ್ತೆಯನ್ನು ಅಗೆದು ಅದನ್ನು ಮುಚ್ಚದೇ ಹಾಗೆ ಬಿಡಲಾಗಿದೆ.

ಆದ್ದರಿಂದ ಸಂಬಂಧಪಟ್ಟವರು  ಈ ಸಮಸ್ಯೆಯನ್ನು ತಕ್ಷಣ ಗಮನಿಸಿ, ಅಗೆದಿರುವ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ, ನಿಂತಿರುವ ನೀರನ್ನು ತೆರವುಗೊಳಿಸಿ, ಮಕ್ಕಳಿಗೆ ತೊಂದರೆಯಾಗದಂತೆ ರಸ್ತೆ ಸರಿಪಡಿಸಿಕೊಡಬೇಕಾಗಿ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;