August 21, 2026
;
suddi-1 (1)

 

 

ಸುದ್ದಿ ವರದಿಗೆ ಛಾಯಾಚಿತ್ರ ಹೆಚ್ಚಿನ ಮೌಲ್ಯ ನೀಡಲಿದ್ದು, ಪತ್ರಿಕೋದ್ಯಮದಲ್ಲಿ ವರದಿಗಾರರು ಮತ್ತು ಛಾಯಾಗ್ರಾಹಕರು ಸಂಸ್ಥೆಯ ಎರಡು ಕಣ್ಣುಗಳಂತೆ ಕಾರ್ಯನಿರ್ವಹಿಸುತ್ತಾರೆ ಎಂದು ಚಿಕ್ಕಮಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಸಿ.ಡಿ.ಚಂದ್ರೇಗೌಡ ಹೇಳಿದರು.

ಚಿಕ್ಕಮಗಳೂರು ಪ್ರೆಸ್‍ಕ್ಲಬ್‍ನಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಆಧುನಿಕ ಕ್ಯಾಮೆರಾಗಳ ಬಳಕೆಯಿಂದ ಛಾಯಾಗ್ರಹಣ ಕ್ಷೇತ್ರ ನಿರಂತರವಾಗಿ ಬೆಳೆಯುತ್ತಿದೆ. ಮುದ್ರಣ ಮಾಧ್ಯಮದಲ್ಲಿ ಸುದ್ದಿಗೆ ಸೂಕ್ತವಾದ ಛಾಯಾಚಿತ್ರ ದೊರೆತಾಗ ಆ ಸುದ್ದಿಗೆ ಹೆಚ್ಚಿನ ಮೌಲ್ಯ ಬರುತ್ತದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಛಾಯಾಗ್ರಾಹಕರು ಕ್ಷೇತ್ರಕ್ಕೆ ಬರಬೇಕು ಎಂದು ಆಶಿಸಿದರು.

ಚಿಕ್ಕಮಗಳೂರು ಪ್ರೆಸ್‍ಕ್ಲಬ್ ಪ್ರಧಾನ ಕಾರ್ಯದರ್ಶಿ ಎನ್.ಕೆ. ಗೋಪಿ ಮಾತನಾಡಿ, ‘ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ’ ಎಂಬ ಮಾತಿನಂತೆ, ಸಾವಿರ ಪದಗಳಲ್ಲಿ ಹೇಳಲಾಗದ ಅರ್ಥವನ್ನು ಒಂದು ಛಾಯಾಚಿತ್ರ ತನ್ನೊಳಗೆ ಹೊಂದಿರುತ್ತದೆ ಎಂದರು.

ಚಿಕ್ಕಮಗಳೂರಿನ ಹಿರಿಯ ಛಾಯಾಗ್ರಾಹಕರ ಸೇವೆಯನ್ನು ಸ್ಮರಿಸಿದ ಅವರು, ಪ್ರಸನ್ನ, ಮೂರ್ತಿ ಸೇರಿದಂತೆ ಹಲವು ಹಿರಿಯ ಛಾಯಾಗ್ರಾಹಕರು ದಶಕಗಳಿಂದ ಜಿಲ್ಲೆಯ ಪತ್ರಿಕಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಸರ್ಕಾರಿ ಕಚೇರಿಗಳು, ಹಿರಿಯ ರಾಜಕಾರಣಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರ ಛಾಯಾಚಿತ್ರಗಳು ದಾಖಲಾಗಿವೆ ಎಂದು ಹೇಳಿದರು.

ಪತ್ರಿಕಾ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್‍ಗಳ ಚಿತ್ರಗಳು ಹಲವು ಸಂದರ್ಭಗಳಲ್ಲಿ ಉಪಯುಕ್ತ ದಾಖಲೆಗಳಾಗುತ್ತಿವೆ. ಇತ್ತೀಚಿನ ದಿನಗಳಲ್ಲಿಯೂ ಪೆÇಲೀಸ್ ಪ್ರಕರಣಗಳ ಸಂದರ್ಭದಲ್ಲಿ ಛಾಯಾಚಿತ್ರ ಹಾಗೂ ವಿಡಿಯೋ ದಾಖಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿಯ ಜವಾಬ್ದಾರಿ ಹಾಗೂ ಮಹತ್ವ ಹೆಚ್ಚಾಗಿದೆ ಎಂದರು.

ಹಿರಿಯ ಪತ್ರಿಕಾ ಛಾಯಾಗ್ರಾಹಕ ಎನ್. ಮೂರ್ತಿ ಮಾತನಾಡಿ, ನಿರಂತರವಾಗಿ ದಾಖಲೆಗಳನ್ನು ಉಳಿಸುವ ಕ್ಷೇತ್ರ ಛಾಯಾಗ್ರಹಣ. ಇದು ಕೇವಲ ಕಲೆಯಲ್ಲ, ಕಲಾವಿದನ ಕೈಚಳಕದಿಂದ ಕ್ಷಣಗಳನ್ನು ದಾಖಲಿಸುವ ಮಾಧ್ಯಮವಾಗಿದೆ ಎಂದರು.

ಹಳೆಯ ಕಾಲದ ಫೀಲ್ಡ್ ಕ್ಯಾಮೆರಾಗಳಿಂದ ಆರಂಭಗೊಂಡ ಛಾಯಾಗ್ರಹಣ ಕ್ಷೇತ್ರ ಕಪ್ಪು-ಬಿಳುಪು ಛಾಯಾಚಿತ್ರಗಳಿಂದ ಬಣ್ಣದ ಛಾಯಾಚಿತ್ರಗಳವರೆಗೆ, ಅಲ್ಲಿಂದ ಡಿಜಿಟಲ್ ಕ್ಯಾಮೆರಾಗಳವರೆಗೆ ಅಭಿವೃದ್ಧಿಯಾಗಿದೆ. ಹಿಂದೆ ಛಾಯಾಚಿತ್ರ ತೆಗೆದ ಬಳಿಕ ಅದನ್ನು ಬ್ಲಾಕ್ ಮಾಡಿಸಿ ಪತ್ರಿಕಾ ಕಚೇರಿಗೆ ತಂದು ಮುದ್ರಣಕ್ಕೆ ಬಳಸಲಾಗುತ್ತಿತ್ತು. ಇದರಿಂದ ಸುದ್ದಿಯ ಮುದ್ರಣಕ್ಕೆ ಹೆಚ್ಚಿನ ಸಮಯ ಬೇಕಾಗುತ್ತಿತ್ತು ಎಂದರು.

ಇಂದು ಡಿಜಿಟಲ್ ಕ್ಯಾಮೆರಾಗಳ ಮೂಲಕ ಛಾಯಾಚಿತ್ರಗಳನ್ನು ನೇರವಾಗಿ ಮುದ್ರಣ ಮಾಧ್ಯಮಕ್ಕೆ ಕಳುಹಿಸಲು ಸಾಧ್ಯವಾಗಿದೆ. ಬೆಳಗ್ಗೆ ತೆಗೆದ ಛಾಯಾಚಿತ್ರ ಸಂಜೆ ಅಥವಾ ರಾತ್ರಿ ಮುದ್ರಣಗೊಂಡು ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗುವಷ್ಟು ತಂತ್ರಜ್ಞಾನ ಮುಂದುವರಿದಿದೆ ಎಂದು ಹೇಳಿದರು.

ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳ ಛಾಯಾಗ್ರಾಹಕರು ವಿವಿಧ ಕಷ್ಟಕರ ಪರಿಸ್ಥಿತಿಗಳಲ್ಲಿಯೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರರು ಮತ್ತು ಛಾಯಾಗ್ರಾಹಕರ ಪರಸ್ಪರ ಸಹಕಾರದಿಂದ ಚಿಕ್ಕಮಗಳೂರಿನಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಪ್ರೆಸ್ ಕ್ಲಬ್ ಖಜಾಂಚಿ ಪುನೀತ್ ಸ್ವಾಗತಿಸಿದರು. ಛಾಯಾಗ್ರಾಹಕ ಸಿ. ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಛಾಯಾಗ್ರಾಹಕ ತಾರಾನಾಥ್ ಕಾಮತ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಿಶೋರ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;