ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗ್ರಂಥಪಾಲಕರ ದಿನಾಚರಣೆ ಮತ್ತು ನಿವೃತ್ತರಾದ ಗ್ರಂಥಪಾಲಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಪಿಡಿಒ ಸುಮಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ವಿಜಯಕುಮಾರ್, ತಾಲೂಕಿನಾದ್ಯಂತ ಅರಿವು ಕೇಂದ್ರಗಳಲ್ಲಿ ಬೇಸಿಗೆ ಶಿಬಿರವನ್ನು ಅಚ್ಚುಕಟ್ಟಾಗಿ ಗುಣಮಟ್ಟದಲ್ಲಿ ನಡೆಸಿ ಕೊಟ್ಟಿದ್ದು, ಶಿಬಿರವು ಯಶಸ್ವಿಯಾಗಿದೆ. ಮಕ್ಕಳು ಮೊಬೈಲ್ ನಲ್ಲಿ ಓದುವುದಕ್ಕಿಂತ ಪುಸ್ತಕದ ಪಾರಂಗತ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ನಿರ್ದೇಶಕರಾದ ಪರಮೇಶ್, ಅಶೋಕ್, ಪಿಡಿಒ ಸಂಘದ ಕಾರ್ಯದರ್ಶಿ ರಾಜಕುಮಾರ್, ಗ್ರಂಥಪಾಲಕರ ಸಂಘದ ಜಿಲ್ಲಾಧ್ಯಕ್ಷ ಪರಮೇಶ್, ಗ್ರಂಥಪಾಲಕರ ಸಂಘದ ತಾಲೂಕು ಅಧ್ಯಕ್ಷ,ಅರುಣ್ ಕುಮಾರ್, ಗೌರವಾಧ್ಯಕ್ಷ ಮಂಜಯ್ಯ, ಗ್ರಂಥ ಪಾಲಕರಾದ ಸವಿತಾ, ಪ್ರಕಾಶ್ ಬೆಳವಾಡಿ, ರಾಧಾ ಅಜ್ಜಯ್ಯ, ಮತ್ತಿತರು ಇದ್ದರು.


