ಪದವೀಧರ ನಿರುದ್ಯೋಗಿಗಳು ಸಹಕಾರ ಸಂಘದಿಂದ ಸಾಲ ಪಡೆದು ಬದುಕು ರೂಪಿಸಿಕೊಳ್ಳಲು ಈ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘ ಸಹಕಾರಿಯಾಗಿದೆ
ಚಿಕ್ಕಮಗಳೂರು ಪದವೀಧರ ನಿರುದ್ಯೋಗಿಗಳು ಸಹಕಾರ ಸಂಘದಿಂದ ಸಾಲ ಪಡೆದು ಬದುಕು ರೂಪಿಸಿಕೊಳ್ಳಲು ಈ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘ ಸಹಕಾರಿಯಾಗಿದೆ’ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಶನಿವಾರ ನಗರದ ಬ್ರಹ್ಮಸಮುದ್ರ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ ಜಿಲ್ಲಾ ಪದವೀಧರ ಸಹಕಾರ ಪತ್ತಿನ ಸಂಘದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಹಕಾರಿ ಧ್ವಜರೋಹಣ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ಸಹಕಾರ ಸಂಸ್ಥೆಯನ್ನು ಕಟ್ಟುವುದು ಅಷ್ಟು ಸುಲಭವಲ್ಲ. ಚಿಕ್ಕಮಗಳೂರಿನಲ್ಲಿರುವ ಕೆಲವೇ ಕೆಲವು ಲಾಭದಾಯಕ ಸಹಕಾರಿ ಸಂಘಗಳಲ್ಲಿ ಈ ಪದವೀಧರ ಸಹಕಾರ ಸಂಘ ಒಂದಾಗಿದೆ. ಅಂದು ಲೋಕಪ್ಪಗೌಡ ಹಾಗೂ ಅವರ ಸಹಕಾರಿಗಳು ಆಲೋಚನೆ ಮಾಡಿ ಪದವೀಧರಿಗಾಗಿ ಒಂದು ಸಹಕಾರಿ ಸಂಘ ತೆರೆದು ಅವರಿಗೆ ಬದಕಲು, ಉದ್ಯೋಗ ಮಾಡಲು ಅನುಕೂಲವಾಗುವ ರೀತಿಯಲ್ಲಿ ಸಂಘವನ್ನು ಆರಂಭಮಾಡಿದ್ದಾರೆ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಪದವಿ ಪಡೆದವರು ಸಾಕಷ್ಟು ಜನ ಇದ್ದಾರೆ. ಅವನ್ನು ಗುರುತಿಸಿ ಸಂಘದಲ್ಲೊಂದು ಶೇರುದಾರರನ್ನಾಗಿ ಮಾಡಿ. ಅವರಿಗೆ ಬದುಕು ಕಟ್ಟಿಕೊಳ್ಳಲು ಸಂಘದಿಂದ ಸಾಲಕೊಡುವ ವ್ಯವಸ್ಥೆ ಮಾಡಿರುವುದು ಅನುಕೂಲವಾಗಿದೆ ಎಂದು ಹೇಳಿದರು.
ಯಾವುದೇ ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಸಾಲಕೊಡಲು ಉದ್ಯೋಗ, ಆಸ್ತಿ ಸೇರಿದಂತೆ ಅನೇಕ ದಾಖಲಾತಿಗಳನ್ನ ಕೇಳುತ್ತಾರೆ. ಆದರೇ ಪದವೀಧರರೇ ತೆರೆದಿರುವ ಸಹಕಾರ ಸಂಘದಲ್ಲಿ ನೋಂದಾಯಿತ ಶೇರುದಾರರು ಆದರೇ ಅವರಿಗೆ ಸುಲಭವಾಗಿ ಸಾಲ ಸಿಗುತ್ತದೆ. ಸಾಲ ಪಡೆದವರು ದುಡಿಮೆ ಮಾಡಿ ವಾಪಾಸ್ ಸಂಘಕ್ಕೆ ಮರುಪಾವತಿ ಮಾಡಬೇಕು. ಆಗ ಸಂಘ ಲಾಭದಾಯಕವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ಸಂಘಕ್ಕೆ 25 ವರ್ಷ ಆಗಿದೆ ಎಂದರೇ ಕೇವಲ ವಯಸ್ಸು ಆಗಿರೋದು ಅಲ್ಲ. ವಿಶ್ವಾಸಾರ್ಹತೆಯನ್ನು ಉಳಿಕೊಂಡು ಬೆಳ್ಳಿಹಬ್ಬ ಆಚರಣೆ ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ಪ್ರಕೃತಿಯಲ್ಲೇ ಸಹಕಾರ ತತ್ವ ಇದೆ. ನೀರು ಆವಿಯಾಗುತ್ತೆ. ಮೋಡ ಕಟ್ಟಿ ಮತ್ತೆ ಮಳೆ ಬರುತ್ತೆ ಈ ಸಹಕಾರ ಪ್ರಕೃತಿಯಲ್ಲಿ ಇಲ್ಲದೇ ಇದ್ದರೇ ಭೂಮಿಯಲ್ಲಿ ನೀರೇ ಇರುತ್ತಿತ್ತು. ನಾವೆಲ್ಲರೂ ಒಟ್ಟಾದರೆ ಈ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಹಕಾರ ಚಳುವಳಿ ಒಟ್ಟಾಗಿ ಸೇರಿ ಸ್ವಾವಲಂಬಿ ಸಮಾಜ ನಿರ್ಮಾಣ ಮಾಡಲು ಸಹಕಾರ ಚಳುವಳಿ ಸ್ಥಾಪನೆ ಮಾಡಿದ್ದಾರೆ. ಇದಕ್ಕೆ ಶತಮಾನದ ಇತಿಹಾಸ ಇದೆ. ಈ ಹಿಂದಿನ ಕಾಲದಲ್ಲಿ ದಿನಸಿ, ಭತ್ತ, ಧಾನ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದೇವು ಅದು ಸಹಕಾರ ತತ್ವ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಮಾತನಾಡಿ, ನಮ್ಮ ನಮ್ಮ ದೈನಂದಿನ ಜೀವನವೇ ಸಹಕಾರಿ ಕ್ಷೇತ್ರವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು. ಸಹಕಾರಿ ಕ್ಷೇತ್ರದಲ್ಲಿ ನಮ್ಮಪಾತ್ರ ಏನೆಂದು ಅರ್ಥಮಾಡಿಕೊಳ್ಳಬೇಕು. ಸಹಕಾರ ಕ್ಷೇತ್ರದಲ್ಲಿ ನಾವು ಒಳ್ಳೆಯ ಕೆಲಸಗಳನ್ನು ಮಾಡುವ ದಿಕ್ಕಿನಲ್ಲಿ ಇದರ ಬೇಕು ಎಂದರು.
ಲೋಕಪ್ಪಗೌಡರು ಹಾಗೂ ಅವರ ಸಂಗಡಿಗರು ಸಹಕಾರ ಸಂಘ ಕಟ್ಟುವ ಮೂಲಕ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರ ಮುಂದಾಲೋಚನೆಯಿಂದ ಪದವೀಧರರಿಗೆ ಸಹಕಾರಿಯಾಗಿದೆ. ಸಹಕಾರ ತತ್ವದಲ್ಲಿ ನಂಬಿಕೆ, ಸಹಬಾಳ್ವೆ, ಸಹಕಾರ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಧ್ಯಕ್ಷ ಬಿ.ಸಿ ಲೋಕಪ್ಪಗೌಡ, 25 ವರ್ಷಗಳ ಹಿಂದೆ ಸಮಾನ ಮನಸ್ಕರು ಆಲೋಚಿಸಿ ಹಿರಿಯರ ಸಹಕಾರಿಗಳ ಸಹಕಾರದಿಂದ ಈ ಸಂಘ ಕಟ್ಟಲಾಗಿದೆ. ಪ್ರಾರಂಭದಲ್ಲಿ ಸಂಘಕ್ಕೆ ಸರ್ಕಾರದ ಸಹಕಾರ ಇಲ್ಲ, ಅನುದಾನ ಇಲ್ಲ ಎಂದು ನಗೆಪಾಟಲೆ ಮಾಡುತ್ತಿದ್ದರು ಅದರ ನಡುವೆ 25 ವರ್ಷ ಪೂರೈಸಿದೆ ಎಂದು ಹೇಳಿದರು.
ಈ ವರೆಗೂ ಯಾವುದೇ ಆರೋಪ, ಗೊಂದಲಗಳಿಲ್ಲದೆ ಸಂಘ ಉತ್ತವಾಗಿ ಆಡಿಟ್‍ನಲ್ಲಿ `ಎ’ ಶ್ರೇಣಿಯಲ್ಲಿದೆ ಎಂದರು. ಮುಂದಿನ ದಿನಗಳಲ್ಲಿ ಸ್ಥಿರಾಸ್ಥಿ ಆಧಾರದ ಮೇಲೆ 5 ಕೋಟಿವರೆಗೆ ಸಾಲಕೊಡಲು ತೀರ್ಮಾನಿಸಲಾಗುವುದು. ವಿಧ್ಯಾಭ್ಯಾಸ, ಗೃಹ ನಿರ್ಮಾಣ, ನಿವೇಶ ಖರೀದಿ ಸಾಲವನ್ನು ನೀಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪದವೀಧರ ಸಹಕಾರ ಪತ್ತಿನ ಸಂಘದ ಉಪಾಧ್ಯಕ್ಷ ಮರುಳಪ್ಪ, ನಿರ್ದೇಶಕರುಗಳಾದ ಎ. ಎನ್. ಮಹೇಶ್, ವಿಜಯ್ ಕುಮಾರ್, ಎಂ.ಎಸ್ ದಯಾನಂದ್, ಶಿವಂದಸ್ವಾಮಿ, ಯು.ಟಿ ನಾಗರಾಜ್, ಪ್ರೆಮ್ ಕುಮಾರ್, ವಸಂತಮ್ಮ, ವರಸಿದ್ಧಿವೇಣುಗೋಪಾಲ್, ಎಂ.ಎಸ್.ಅನಂತು ಉಪಸ್ಥಿತರಿದ್ದರು.


