ಆಗಸ್ಟ್ 22 ಮತ್ತು 23ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗದ ಸಿಟಿ ಕರಾಟೆ ಅಸೊಸಿಯೇಷನ್ ಸಂಸ್ಥೆಯ ಶಿಕ್ಷಕರು ಹಾಗು ಅಯೋಜಕರಾದ ಶಿಹಾನ್ ವಿನೋದ್ ರವರು ಆಯೋಜಿಸಿದ್ದ 7ನೇ ಅಂತರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಅಮೇರಿಕಾ, ಶ್ರೀಲಂಕ, ಗಬಾನ್, ನೇಪಾಳ, ಹಾಗು ಭಾರತದ 21 ರಾಜ್ಯಗಳಿಂದ ಸುಮಾರು 1500 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.
ಈ ಪಂದ್ಯಾವಳಿಗೆ ಮೂಡಿಗೆರೆಯ SKJF ಕರಾಟೆ ಸಂಸ್ಥೆಯ 77 ಕರಾಟೆ ಪಟುಗಳು ವೈಯಕ್ತಿಕ ಕಟಾ ವಿಭಾಗ ಹಾಗು ವೈಯಕ್ತಿಕ ವೆಪನ್ ಕಟಾ ವಿಭಾಗದ ಎರಡು ಪಂದ್ಯಾವಳಿಗೆ ಭಾಗವಹಿಸಿದ್ದು ಇವರಲ್ಲಿ 61 ಚಿನ್ನದ ಪದಕ, 56 ಬೆಳ್ಳಿ ಪದಕ ಹಾಗು19 ಕಂಚಿನ ಪದಕ ಗಳೊಂದಿಗೆ ರೂ. 25000/- ಸಾವಿರ ನಗದು ಬಹುಮಾನ ಹಾಗು ದ್ವಿತೀಯ ಚಾಂಪಿಯನ್ ಟ್ರೋಪಿ ಯನ್ನು ತಮ್ಮದಾಗಿಸಿಕೊಂಡಿರುತ್ತಾರೆ.

ಮುಖ್ಯ ಶಿಕ್ಷಕರಾದ ಸೆನ್ಸಾಯ್ ರಾಜೇಂದ್ರನ್, ಸೆನ್ಸಾಯ್ ಬೇಬಿ ಲತಾ, ಸೆನ್ಸಾಯ್ ಪೂಜಿತ್, ಎನ್ ರಾಜೇಂದ್ರನ್, ಹಾಗು ಸೆನ್ಸಾಯ್ ಅಶ್ವಿನಿ ಚಂದ್ರ ಇವರಲ್ಲಿ ತರಬೇತಿ ಪಡೆದ ಮೂಡಿಗೆರೆಯ ಎಮ್. ಇ .ಎಸ್ ಶಾಲೆ, ಮುತ್ತಿಗೆ ಪುರ ಸರ್ಕಾರಿ ಶಾಲೆ ,, ಬಿ .ಜಿ .ಎಸ್ ಕಾಲೇಜ್ ಹಾಗು ಶಾಲೆ ಹಾಗು ಜೆ ಎಸ್ ಎಸ್ ಪಬ್ಲಿಕ್ ಶಾಲೆ ಬಾಗೆ ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಕರಾಟೆ ಶಿಕ್ಷಕ ರಾಜೇಂದ್ರನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಗಳ ಆಡಳಿತ ಮಂಡಳಿ ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.



