September 11, 2026
;
tailor

 

 

ಮೂಡಿಗೆರೆ ಟೈಲರ್ ಸಂಘದ ವತಿಯಿಂದ ರಜತ ಮಹೋತ್ಸವ ಹಾಗೂ  ಸ್ಮರಣ ಸಂಚಿಕೆ `ಬಿಡುಗಡೆ ಸಮಾರಂಭವು ಎಚ್‌.ಎಂ. ಶಿವೇಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊರನಾಡು ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿ ಮಾತನಾಡಿ, * ದರ್ಜಿಗಳ ಬದುಕು ಹಿಂದಿಗಿಂತಲೂ ಶೋಚನೀಯ ಸ್ಥಿತಿಯಲ್ಲಿದ್ದು, ಬದಲಾ ಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಆಧುನಿಕತೆಗೆ ಒಗ್ಗಿಕೊಂಡು ಬದುಕು ಕಟ್ಟಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾಜಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಮಾಜಿ ಸಚಿವ ಬಿ.ಬಿ. ನಿಂಗಯ್ಯ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ,  ಕೆ.ಎಸ್.ಟಿ.ಎ ರಾಜ್ಯಾಧ್ಯಕ್ಷ ಸುರೇಶ್ ಬಿ.ಸಿ. ರೋಡ್, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂ ಹಾಗೂ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಉಪಸ್ಥಿತರಿದ್ದು, ಕಾರ್ಯ ಚಟುವಟಿಕೆಗಳು ಹಾಗೂ ದರ್ಜಿಗಳ ಸಮಸ್ಯೆಗಳ ಕುರಿತು ಮಾತನಾಡಿದರು.

ಟೈಲರ್‌ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶ್ರೀನಿವಾಸ (ಆರೋಗ್ಯ ಇಲಾಖೆ), ಕೆಂಪಮ್ಮ (ಮಗನಿಗೆ ಅಂಗಾಂಗ ದಾನ), ಪ್ರತಿಮಾ (ಪಶು ಇಲಾಖೆ), ಪೂರ್ಣೇಶ್ (ಸೇನೆ), ಮಂಜುನಾಥ್ (ಟೈರ್ಲ), ಮೋಹನ್ (ಆರೋಗ್ಯ ಇಲಾಖೆ), ಟ್ರಸಿಲ್ಲಾ (ಶಿಕ್ಷಣ) ಹಾಗೂ ಯೂಸುಫ್ (ಟೈಲ‌ರ್)ಅವರನ್ನುಸನ್ಮಾನಿಸಲಾಯಿತು.

ಕೆ.ಎಸ್.ಟಿ.ಎ. ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ಮೂಡಿಗೆರೆ ಕ್ಷೇತ್ರ ಸಮಿತಿ, ಜನ್ನಾಪುರ, ಬಿಳುಗುಳ, ಬಣಕಲ್, ಆಲ್ಲೂರು, ಕಳಸ ಹಾಗೂ ಮೂಡಿಗೆರೆ ನಗರದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

ರಜತ ಮಹೋತ್ಸವ ಆಚರಣಾ ಸಮಿತಿಯ ಷಣ್ಮುಖಾನಂದ, ಗಿರೀಶ್, ಸತೀಶ್, ಉಮಾ, ಮಂಜುಳಾ, ಪೂಜಾ, ಶೃತಿ, ಸುಜಾತಾ, ಸುರೇಶ್, ಗಣೇಶ್, ಮೋಹನ್, ಪ್ರಕಾಶ್, ತೀರ್ಥ ಪ್ರದೀಪ್ ಹಾಗೂ ವೆಂಕಟೇಶ್ ಇದ್ದರು.

ಇದೇ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕಣ್ಣಿನ ತಪಾಸಣೆ, ಕ್ಷಯರೋಗ ಪತ್ತೆ, ಬಿಪಿ ಹಾಗೂ ಶುಗರ್‌ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಸೂಜಿಯ ತುದಿಯಲಿ ಬದುಕು ಟೈಲರ್ ಸ್ಮರಣ ಸಂಚಿಕೆ ಸಂಪಾದಕರಾದ ನರಸಿಂಹ ಟೈಲರ್ ರವರನ್ನು ಸನ್ಮಾನಿಸಲಾಯಿತು

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;