September 11, 2026
;
suddi-5

 

 

ಪಕ್ಷ ಸಂಘಟನೆ ಜೊತೆಗೆ ಮುಂಬರುವ ಚುನಾವಣೆಗಳಲ್ಲಿ ಮಹಿಳಾ ಮೋ ರ್ಚಾ ಇಂದಿನಿಂದಲೇ ಸನ್ನದ್ದರಾಗಬೇಕು. ಪ್ರತಿ ವಾರ್ಡ್ ಮತ್ತು ಬೂತ್‍ಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗ ಳನ್ನು ಚರ್ಚಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ ಹೇಳಿದರು.

ನಗರದ ಪಾಂಚಜನ್ಯ ಕಚೇರಿಯಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಆಯೋಜಿಸಿದ್ಧ ಕಾರ್ಯಕಾರಿಣಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಕ್ಷೇತ್ರವಾರು ಮಹಿಳಾ ಮೋರ್ಚಾದ ಮುಖಂಡರುಗಳು ಕ್ಷೇತ್ರ ವ್ಯಾಪ್ತಿ ಪ್ರವಾಸ ಕೈಗೊಂಡು ಜನತೆ ಯಲ್ಲಿ ಕೇಂದ್ರ ಸರ್ಕಾರದ ಯೋಜನೆ, ಅಭಿವೃದ್ದಿ ಕೆಲಸಗಳು, ಸ್ವಾವಲಂಬಿ ಬದುಕಿರುವ ಅನುಷ್ಟಾನಗೊಳಿಸಿ ರುವ ಯೋಜನೆಗಳನ್ನು ತಿಳಿಸುವ ಮೂಲಕ ಬೂತ್‍ಮಟ್ಟದಿಂದ ಸಂಘಟಿಸಬೇಕು ಎಂದರು.

ನಾರಿಯರ ಶಕ್ತಿ ರಾಷ್ಟ್ರದಲ್ಲಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಆ ನಿಟ್ಟಿನಲ್ಲಿ ಪ್ರಧಾನಿಗಳು ಮಹಿಳೆಯರಿಗೆ ಶೇ.33ರಷ್ಟು ಮಿಸಲಾತಿ ಹೋರಾಡಿದ್ದರು. ಈ ಸಂಕಲ್ಪದಡಿ ಮಹಿಳೆಯರು ಸಂಘಟನಾತ್ಮಕ ದೃಷ್ಟಿಯಿಂದ ವಾರ್ಡ್ ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಭಾರತ ವಿಶ್ವಗುರುವಾಗುವತ್ತ ಬೃಹತ್ ಹೆಜ್ಜೆಯಿಡುತ್ತಿದೆ. ಈ ಸಫಲತೆಗೆ ಪ್ರತಿ ಯೋರ್ವ ಭಾರತೀಯರು ಕೈಜೋಡಿಸಬೇಕು. ಅಲ್ಲದೇ ಜಿ.ಪಂ., ತಾ.ಪಂ., ಗ್ರಾ.ಪಂ ಸೇರಿದಂತೆ ವಿಧಾನಸ ಭಾ ಚುನಾವಣೆ ಎದುರಾಗುವ ಹಿನ್ನೆಲೆಯಲ್ಲಿ ತಮ್ಮ ವಾರ್ಡಿನಲ್ಲಿ ಬೂತ್‍ಗಳನ್ನು ಆಯ್ಕೆ ಮಾಡಿಕೊಂಡು ಸಂಘಟಿಸಬೇಕು ಎಂದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‍ಕುಮಾರ್ ಮಾತನಾಡಿ ಕೇಂದ್ರ ಸರ್ಕಾ ರದ ಸಾಧನೆ ಜೊತೆಗೆ ರಾಜ್ಯಸರ್ಕಾರ ಮಹಿಳಾ ವಿರೋಧಿ ನೀತಿಗಳನ್ನು ಜನರಿಗೆ ಪರಿಚಯಿಸಬೇಕು. ವಿಶೇಷ ವಾಗಿ ಹೋಬಳಿ ಹಾಗೂ ಗ್ರಾಮೀಣ ಮಟ್ಟದಲ್ಲಿ ಮಹಿಳಾ ಮೋರ್ಚಾ ಹೆಚ್ಚು ಗಮನಹರಿಸುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.

ಪಕ್ಷ ಸಂಘಟನೆ ಗ್ರಾ.ಪಂ.ನಿಂದ ಆರಂಭಗೊಂಡು ವಿಧಾನಸಭಾ ಚುನಾವಣೆವರೆಗೂ ಶಕ್ತಿಶಾಲಿ ಹೊಂ ದಬೇಕು. ಜಿಲ್ಲಾವ್ಯಾಪ್ತಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವ ಮೂಲಕ ಜನಸಾಮಾನ್ಯರ, ನೊಂದ ವರ ಹಾಗೂ ಶೋಷಿತರ ಬದುಕನ್ನು ಹಸನಗೊಳಿಸಲು ಪಣತೊಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ಮಹಿಳಾ ಮೋಚಾ ್ ಜಿಲ್ಲಾ ಉಪಾಧ್ಯಕ್ಷೆ ವೀಣಾಶೆಟ್ಟಿ, ಸವಿತಾ ರಮೇಶ್, ಕಾರ್ಯದರ್ಶಿ ಕವಿತಾ ಶೇಖರ್, ಚಂಪಾ ಜಗದೀ ಶ್, ಪ್ರಧಾನ ಕಾರ್ಯದರ್ಶಿ ಶೃತಿ ರೋಹಿತ್, ರಾಜೇಶ್ವರಿ ರಾಜಶೇಖರ್, ಮಹಿಳಾ ಮೋರ್ಚಾ ಪ್ರಭಾರಿ ನಾರಾಯಣಗೌಡ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;