Screenshot_20221128_181704

 

 

ಒಂದೇ ಓವರ್ ನಲ್ಲಿ 7 ಸಿಕ್ಸರ್ ಸಿಡಿಸುವ ಮೂಲಕ ಮಹಾರಾಷ್ಟ್ರ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್ ಕ್ರಿಕೆಟ್ ಇತಿಹಾಸದಲ್ಲಿ ವಿನೂತನ ದಾಖಲೆ ನಿರ್ಮಿಸಿದ್ದಾರೆ.

ಇಂದು ಅಹಮದಾಬಾದ್ ನಲ್ಲಿ ಉತ್ತರಪ್ರದೇಶದ ವಿರುದ್ಧ ನಡೆದ ವಿಜಯಹಜಾರೆ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.

ಉತ್ತರಪ್ರದೇಶದ ಬೌಲರ್ ಶಿವಸಿಂಗ್ ಎಸೆದ 49ನೇ ಓವರ್ ನಲ್ಲಿ ಒಂದು ನೋಬಾಲ್ ಫ್ರೀಹಿಟ್ ಸೇರಿ ಏಳು ಎಸೆತಗಳನ್ನು ಬೌಂಡರಿಯಾಚೆ ಅಟ್ಟಿದ್ದಾರೆ. ಆ ಓವರ್ ನಲ್ಲಿ ನೋಬಾಲ್ ಸಹಿತ ಒಟ್ಟು 43 ರನ್ ಬಾರಿಸಿದ್ದಾರೆ.

ಮಹಾರಾಷ್ಟ್ರ ನಿಗದಿತ 50 ಓವರ್ ಗಳಲ್ಲಿ 330 ರನ್ ಕಲೆಹಾಕಿದ್ದು. ಅದರಲ್ಲಿ ಗಾಯಕ್ವಾಡ್ ಒಬ್ಬರೆ  159 ಎಸೆತಗಳಲ್ಲಿ 16 ಸಿಕ್ಸರ್ 10 ಬೌಂಡರಿ ಸಹಿತ 220 ರನ್ ಗಳಿಸಿದ್ದಾರೆ.

ಈ ಮೂಲಕ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಓವರ್ ನಲ್ಲಿ 7 ಸಿಕ್ಸರ್ ಗಳಿಸಿದ ವಿಶ್ವದ ಪ್ರಥಮ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಋತುರಾಜ್ ಗಾಯಕ್ವಾಡ್ ಭಾರತ ತಂಡದಲ್ಲಿಯೂ ಆಡಿದ್ದು. ಐಪಿಎಲ್ ನಲ್ಲಿ ಚೆನೈ ಸೂಪರ್ ಕಿಂಗ್ಸ್ ಪರ ಆಡುತ್ತಾರೆ. 2021ರ ಐಪಿಎಲ್ ಸೀಸನ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

 

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ