ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸರ್ವೋದಯ ನಗರದ ಬಳಿ ಇರುವ ಮೂಡಿಗೆರೆ ತೋಟಗಾರಿಕಾ ಕಾಲೇಜು ಸ.ನಂ.223 ರಲ್ಲಿರುವ ಕಾಲೇಜು-ಹಾಸ್ಟೆಲ್ ಸುತ್ತ ಹಾಕಿದ್ದ 130 ಮೀಟರ್ ನಷ್ಟು ಬೇಲಿಯನ್ನು ಸೆಪ್ಟಂಬರ್ 13 ರ ಶನಿವಾರ ಮಧ್ಯರಾತ್ರಿ ಜೇಸಿಬಿ ಮೂಲಕ ಕಿತ್ತು ಯಾರೋ ಸ್ಥಳಾಂತರಿಸಿದ್ದರು.
ಸೆ.14 ರ ಭಾನುವಾರ ಬೆಳಿಗ್ಗೆ ಅಧಿಕಾರಿಗಳು ಹಾಗೂ ವಿಧ್ಯಾರ್ಥಿಗಳು ನೋಡಿದಾಗ ಬೇಲಿ ಸ್ಥಳಾಂತರ ಗೊಂಡಿದ್ದು ತಕ್ಷಣವೇ ಮೂಡಿಗೆರೆ ಪೊಲೀಸರಿಗೆ ಬೇಲಿ ಸ್ಥಳಾಂತರಿಸಿರುವವರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದರು. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಮಂಗಳವಾರ ಬೆಳಿಗ್ಗೆ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು ಸ್ಥಳಾಂತರಿಸಿದ ಬೇಲಿಯನ್ನು ಪುನರ್ ಪ್ರತಿಷ್ಠಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ


