September 17, 2026
;
jci 1

 

 

ಮೂಡಿಗೆರೆ ಜೇಸಿಐ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಬಿಂಬ ಜೇಸಿ ಸಪ್ತಾಹದ ಕೊನೆ ದಿನ ಭಾನುವಾರ ಸಂಜೆ ಸಪ್ತಾಹದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಉಪಸಭಾಪತಿ ಎಂ. ಕೆ ಪ್ರಾಣೇಶ್ ಅವರು ಮೂಡಿಗೆರೆ ಜೇಸಿಐ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಪ್ರಸ್ತುತ ಸಾಲಿನ ಅಧ್ಯಕ್ಷ ಸುನಿಲ್ ಅವರ ನಾಯಕತ್ವ ಗುಣದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜೇಸಿಐ ವಲಯಾಧ್ಯಕ್ಷ ಪ್ರಜ್ವಲ್ ಜೈನ್ , ಬಿ.ಜೆ.ಪಿ. ಮುಖಂಡ ಕೆ ಸಿ ರತನ್‍, ವಲಯ ಉಪಾಧ್ಯಕ್ಷ ಜಗತ್ , ನಿವೃತ್ತ ಶಿಕ್ಷಕಿ  ನಾಗರತ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ತಾಲೂಕಿನ ಯುವ ಪ್ರತಿಭೆಗಳಾದ ಆತ್ಮೀಯ ಈವೆಂಟ್ ನ ಕುಮಾರಿ ಆತ್ಮೀಯ ಹಾಗೂ ಮೀನುಗಾರಿಕಾ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿರುವ ಕುಮಾರಿ ಖುಷಿ ಅವರನ್ನು ಗೌರವಿಸಲಾಯಿತು.

ಮಹಿಳಾ ಸ್ವ ಉದ್ಯೋಗ ಸೃಷ್ಟಿಸಲು ಟೈಲರಿಂಗ್ ಮಿಷನ್ ವಿತರಣೆ ಕಮಲಪತ್ರ ಪ್ರಧಾನ ಎಲ್ಲಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಮೂಡಿಗೆರೆ ಜೇಸಿಐ ಕಾರ್ಯದರ್ಶಿ ಸುದೀಪ್ ತ್ರಿಪುರ ಅವರ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ ಕಮಲಪತ್ರ ಪ್ರಶಸ್ತಿನೀಡಿ ಗೌರವಿಸಲಾಯಿತು.

ಅಧ್ಯಕ್ಷ ಸುನಿಲ್ ಮಾತನಾಡಿ ಸಪ್ತಾಹದ ಅಂಗವಾಗಿ ಏಳು ದಿನಗಳ ಕಾಲ ವೈವಿದ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರನ್ನು, ವಿದ್ಯಾರ್ಥಿಗಳನ್ನು ತಲುಪುವ ಪ್ರಯತ್ನ ನಡೆಸಿದ್ದೇವೆ. ಜೇಸಿಐ ಮೂಡಿಗೆರೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದರು, ಸಪ್ತಾಹದ ಯಶಸ್ಸಿಗೆ ಸಹಕಾರ ನೀಡಿದ ಸರ್ವರನ್ನು ಅಭಿನಂದಿಸಿದರು.

ವೇದಿಕೆಯಲ್ಲಿ ನಿಕಟದ ಪೂರ್ವ ಅಧ್ಯಕ್ಷ ಪ್ರದೀಪ್ ಕುನ್ನಹಳ್ಳಿ, ಕಾರ್ಯದರ್ಶಿ ಸುದೀಪ್ ತ್ರಿಪುರ, ಲೇಡಿ ಜೇಸಿ ಅಧ್ಯಕ್ಷ ಸಂದ್ಯಾಸುದೀಪ್, ಕಾರ್ಯದರ್ಶಿ ನಿಶ್ಚಿತಾ ಯತೀಶ್, ಸಪ್ತಾಹದ ಮಹಾನಿರ್ದೇಶಕ ಅಕ್ಷತ್ ಪಟ್ಟದೂರು, ರಾಘವಿ ಧರ್ಮೇಂದ್ರ, ಜೂನಿಯರ್ ಜೇಸಿ ಅಧ‍್ಯಕ್ಷ ಮೋದಿ ಗೌಡ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;