September 30, 2026
;
suddi-5

 

 

ರೈತಾಪಿ ವರ್ಗದ ಕೃಷಿಯಾಧಾರಿತ ಬೆಳೆಗಳಿಗೆ ಸಮರ್ಪಕ ವಿದ್ಯುತ್ ಪೂರೈ ಸದಿದ್ದಲ್ಲಿ ತಾಲ್ಲೂಕಿನಾದ್ಯಂತ ರೈತ ಮುಖಂಡರುಗಳು ಶೀಘ್ರದಲ್ಲೇ ಮೆಸ್ಕಾ ಚಲೋ ಪ್ರತಿಭಟನೆ ನಡೆಸುತ್ತೇನೆ ಎಂದು ರೈತ ಸಂಘ-ಹಸಿರು ಸೇನೆ ಸದಸ್ಯ ವೈ.ಸಿ.ಸುನೀಲ್ ಕುಮಾರ್ ಎಚ್ಚರಿಸಿದರು.

ಚಿಕ್ಕಮಗಳೂರು  ನಗರದ ಎಪಿಎಂಸಿ ಆವರಣದ ರೈತ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ- ಹಸಿರುಸೇನೆ ತಾಲ್ಲೂಕು ಘಟಕದಿಂದ ಆಯೋಜಿಸಿದ್ಧ ವಿದ್ಯುತ್ ಸಮಸ್ಯೆ ಬಗ್ಗೆ ಸಮಗ್ರ ಪರಿಹಾರ ಕುರಿತ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಪಾಲ್ಗೊಂಡು ಅವರು ಮಾತನಾಡಿದರು.

ಬೀಕರ ಬರಗಾಲದ ಛಾಯೆ ಆವರಿಸಿಕೊಂಡಿರುವ ಜಿಲ್ಲೆಯ ರೈತರಿಗೆ ಸರ್ಕಾರ, ಸ್ಥಳೀಯ ಶಾಸಕರು, ಮೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ರೈತರ ಸಂಪೂರ್ಣ ಬೆಳೆಗಳು ನೀರಿಲ್ಲದೇ ಬತ್ತು ಹೋಗುತ್ತಿವೆ. ಇನ್ನೊಂದೆಡೆ ರೈತರ ಸಾಲ ಬೆನ್ನತ್ತಿರುವ ಪರಿಣಾಮ ಜೀವನದ ಸ್ಥಿತಿ ದುಸ್ತರವಾಗಿದೆ ಎಂದು ತಿಳಿಸಿದರು.

ಸರ್ಕಾರಗಳು ರೈತರ ಜಮೀನಿಗೆ ನಿಗಧಿಪಡಿಸಿರುವ ವಿದ್ಯುತ್ ಪೂರೈಸುತ್ತಿಲ್ಲ. ಬೆಳೆಗಳು ನೆಲಕಚ್ಚುತ್ತಿವೆ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಇತ್ತ ರೈತರು ಮಳೆ ಯು ಇಲ್ಲದೇ, ಸರ್ಕಾರ ನಿಗಧಿತಪಡಿಸಿದ ವಿದ್ಯುತ್ ಪೂರೈಕೆಯು ಇಲ್ಲದೇ ಕಂಗಾಲಾಗಿದ್ದಾನೆ ಎಂದರು.

ಮಳೆಯ ಕೊರತೆಯಿಂದ ಬಹುತೇಕ ಭಿತ್ತಿರುವ ಬೆಳೆ ನಾಶವಾಗಿದೆ. ಅಲ್ಪಸ್ವಲ್ಪ ಬೆಳೆಗಳನ್ನು ಬೋರ್‍ವೆ ಲ್ ನೀರಿನಲ್ಲಿ ಉಳಿಸಲು ರೈತರು ಪ್ರಯತ್ನಿಸಿದರೂ, ಮೆಸ್ಕಾಂ ವಿದ್ಯುತ್ ನೀಡುತ್ತಿಲ್ಲ. ಸರ್ಕಾರದ ಆದೇಶದಂ ತೆ 7 ಗಂಟೆ ವಿದ್ಯುತ್ ಪೂರೈಸಬೇಕು. ಆದರೆ ಕನಿಷ್ಟ 6 ಗಂಟೆಯು ವಿದ್ಯುತ್ ನೀಡುತ್ತಿಲ್ಲ ಎಂದು ಆರೋ ಪಿಸಿದರು.

ರಾಜ್ಯಸರ್ಕಾರ ತರ್ಮಲ್, ಸೌರ ಹಾಗೂ ಜಲವಿದ್ಯುತ್ ಕ್ರೂಢೀಕರಿಸಿದರೂ ರೈತರ ಜಮೀನಿಗೆ ವಿದ್ಯು ತ್ ಭರಿಸುತ್ತಿಲ್ಲ. ಮೆಸ್ಕಾಂ ಇಲಾಖೆ ಮನಬಂದಂತೆ ವಿದ್ಯುತ್ ನೀಡುತ್ತಿದೆ. ಬೋರ್‍ವೇಲ್‍ನಲ್ಲಿ ನೀರಿದ್ದರೂ ಕೂಡಾ ವಿದ್ಯುತ್ ಸಮಸ್ಯೆಯಿಂದ ಉಳಿದ ಬೆಳೆಗಳನ್ನು ರಕ್ಷಿಸಿಕೊಳ್ಳಲಾಗದ ಸ್ಥಿತಿ ರೈತರಿಗೆ ಬಂದಿದ್ದು ಏಳು ದಿವಸದೊಳಗೆ ಮೆಸ್ಕಾಂ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಚಳುವಳಿ ನಡೆಸಲಾಗುವುದು ಎಂದರು.

ರೈತ ಸಂಘ-ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷೀಯ ಸದಸ್ಯ ಡಿ.ರಾಮೇಗೌಡ ಮಾತನಾಡಿ ಗ್ರಾಮ, ಪೀಡರ್‍ವಾರು ವಿದ್ಯುತ್ ಮಾಹಿತಿ ಹಾಗೂ ಲೋಡ್‍ಶೆಡ್ಡಿಂಗ್ ಅಥವಾ ವಿದ್ಯುತ್ ವಿತರಣೆಯ ಹೊ ರತುಪಡಿಸಿ ಉಳಿದ ಸಮಯದಲ್ಲಿ ಲೋಡ್‍ಶೆಡ್ಡಿಂಗ್ ಸಂಪೂರ್ಣ ಮಾಹಿತಿ ರೈತ ಸಮುದಾಯಕ್ಕೆ ಪ್ರಕಟಿಸ ಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೈತ ಸಂಘ-ಹಸಿರು ಸೇನೆಯ ಮುಖಂಡರುಗಳಾದ ನಜ್ಮಾಆಲಿ, ಗಣೇಶ್‍ಗೌಡ, ಎ.ಎನ್.ರಮೇಶ್, ಎಂ.ಡಿ.ಶಂಕರ್, ಪರ್ವತೇಗೌಡ, ಮಾಲುಂಡಪ್ಪ, ಹೆಚ್.ಎಸ್.ಲೋಕೇಶ್, ವಸಂತ್‍ಕು ಮಾರ್, ಹುಲಿಯಪ್ಪಗೌಡ, ಗೋಫಿಕೃಷ್ಣ, ಬಾಲಕೃಷ್ಣ, ಸೋಮಣ್ಣ, ಮುಳ್ಳೇಶ್ ಮುಂತಾದವರಿದ್ದರು.

 

 

Leave a Reply

Your email address will not be published. Required fields are marked *