September 30, 2026
;
suddi-7

 

 

ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರು ಜನಸಾಮಾನ್ಯರಲ್ಲಿ ಅತೀವ್ರ ಪ್ರಭಾವ ಬೀರಿದ ಅಪರೂಪದ ವ್ಯಕ್ತಿ. ಇವರ ಶೌರ್ಯ, ಪರಾಕ್ರಮದ ಇತಿಹಾಸವು ಬಹಳಷ್ಟು ಗಟ್ಟಿತನ ಹೊಂದಿದೆ ಸಾಹಿತಿ ಸಿದ್ದನಗೌಡ ಪಾಟೀಲ್ ಹೇಳಿದರು.

ಚಿಕ್ಕಮಗಳೂರು ಮತ್ತಾವರ ಸಮೀಪದ ಅರಣ್ಯ ಸಂರಕ್ಷಣಾ ಕೇಂದ್ರದಲ್ಲಿ ಸೋಮವಾರ ಕ್ರಾಂತಿಕಾರಿ ಹೋ ರಾಟಗಾರ ಭಗತ್‍ಸಿಂಗ್ ಜನ್ಮದಿನ ಪ್ರಯುಕ್ತ ಸಿಪಿಐ ಆಯೋಜಿಸಿದ್ಧ ಸೈದ್ದಾಂತಿಕ ಅಧ್ಯಯನ ಶಿಬಿರ ಕಾರ್ಯ ಕ್ರಮವನ್ನು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಭಗತ್ ಸಿಂಗ್ ಯುವ ಜನತೆಗೆ ಇಂದಿಗೂ ಕೂಡ ಪ್ರೇರಣೆಯಾಗಿದ್ದಾರೆ. ಇವರ ಧೈರ್ಯ ಇಂದಿಗೂ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ. ಯುವಜನತೆ ಮನಸ್ಸಿನಲ್ಲಿ ಇಂದಿಗೂ ಅವರೊಬ್ಬ ಧೀಮಂತ ನಾಯಕರಾಗಿ ನೆಲೆಸಿದ್ದಾರೆ ಎಂದು ತಿಳಿಸಿದರು.

ಇಂತಹ ಭಗತ್ ಸಿಂಗ್ ಅವರನ್ನು 1931ರ ಮಾರ್ಚ್ 23ರಂದು ತನ್ನಿಬ್ಬರು ಸಂಗಾತಿಗಳಾದ ರಾಜ ಗುರು ಮತ್ತು ಸುಖದೇವ್ ರವರ ಜೊತೆ ಗಲ್ಲಿಗೇರಿಸಲಾಯ್ತು. ಈ ಧೀಮಂತ ನಾಯಕನಿಗೆ ಆಗ ಕೇವಲ 23 ವರ್ಷ. ಸಾವಿನ ಕೊನೆಗಳಿಗೆಯಲ್ಲೂ ಹೋರಾಟಗಾರ ಲೆನಿನ್ ಪುಸ್ತಕ ಅಧ್ಯಯನ ನಡೆಸುವ ಮೂಲಕ ಜೀವನಕ್ಕೆ ಅಂತಿಮ ವಿದಾಯ ಸಲ್ಲಿಸಿದರು.

ದೆಹಲಿಯ ಲೋಕಸಭೆಯಲ್ಲಿ ಬಾಂಬ್ ಎಸೆದ ಭಗತ್‍ಸಿಂಗ್ ಅವರು ಬ್ರಿಟೀಷ್ ಪೊಲೀಸರಿಗೆ ಶರಣಾ ದರು. ಆದರೆ ಬಾಂಬ್ ಎಸೆತದಿಂದ ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ. ಆದರೆ ಬ್ರಿಟಿಷರ ಕಿವಿ ಕೇಳಿಸುವ ಸಲುವಾಗಿ ಹಾಗೂ ಸತ್ಯ ಹುಡುಕುವುದೇ ಭಗತ್ ಮತ್ತು ಅವರ ಗೆಳೆಯರ ಉದ್ದೇಶ ಎಂದರು.

ಸಾಮಾಜಿಕ ಹೋರಾಟಗಾರ ಬಿ.ಅಮ್ಜದ್ ಮಾತನಾಡಿ ಭಗತ್‍ಸಿಂಗ್ ಅವರು ಸಮಾಜವಾದ ಮತ್ತು ಕ್ರಾಂತಿಯ ಬಗೆಗಿನ ಸಾಹಿತ್ಯವನ್ನು ಅವರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಓದಲಾರಂಭಿಸಿದ್ದರು. ಅವರಲ್ಲಿದ್ದ ಓದಿನ ಪ್ರೀತಿ ಬದುಕಿನ ಕೊನೆ ಕ್ಷಣದವರೆಗೂ ಉಳಿದಿತ್ತು ಎಂದು ತಿಳಿಸಿದರು.

ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ಮಾತನಾಡಿ ಎರಡು ದಿನಗಳ ಸೈದ್ದಾಂತಿಕ ಅಧ್ಯ ಯನ ಶಿಬಿರವನ್ನು ಭಗತ್‍ಸಿಂಗ್ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದು ಯುವಜನರ ಸಾಮಾಜಿಕ, ಪರಿಸರ ಪ್ರಜ್ಞೆ ಮೂಡಿಸುವುದು, ಭಾರತ ಆರ್ಥಿಕ, ರಾಜಕೀಯ ವ್ಯವಸ್ಥೆ ತಿಳಿಸುವುದಾಗಿತ್ತು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಮಂಡಳಿ ಸದಸ್ಯರಾದ ರೇಣುರಾಧ್ಯ, ರಾಧಾಸುಂದ್ರೇಶ್, ಸಿ.ವಸಂತ್ ಕುಮಾರ್, ಕಾರ್ಯದರ್ಶಿ ಜಿ.ರಘು, ತಾಲ್ಲೂಕು ಸಹ ಕಾರ್ಯದರ್ಶಿ ಮಂಜೇಗೌಡ, ಪ್ಲಾಂಟೇಷನ್‍ನ ಪ್ರ ಧಾನ ಕಾರ್ಯದರ್ಶಿ ಧರ್ಮರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷ ಜಯಾನಂದ್, ನಗರಾಧ್ಯಕ್ಷ ರಮೇಶ್ ಇದ್ದರು

 

 

Leave a Reply

Your email address will not be published. Required fields are marked *