ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಕರ್ನಾಟಕ ಬೆಳೆಗಾರರ ಸಂಘ, ಕಾಫಿ ಕಮಿಟಿ- ಯುನೈಟೆಡ್ ಪ್ಲಾಂಟರ್ಸ್ ಅಸೋಷಿಯೇಷನ್ ಆಫ್ ಸಧರನ್ ಇಂಡಿಯಾ (ಉಪಾಸಿ) ಇವರುಗಳ ವತಿಯಿಂದ ಸೈಕಲ್ ಜಾಥ ನಡೆಯಿತು.
ಸಕ್ರೀಯ ಚಟುವಟಿಕೆಯ ಜೀವನಕಾಗಿ ಕಾಫಿ ಮತ್ತು ಸೈಕಲ್ ಧ್ಯೇಯವಾದ್ಯದೊಂದಿಗೆ ನಡೆದ ಈ ಜಾಥದಲ್ಲಿ ಸುಮಾರು 21 ಸೈಕಲ್ ಸವಾರರು ಪಾಲ್ಗೊಂಡಿದ್ದರು.
ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಉಪಾಸಿ- ಕಾಫಿ ಕಮಿಟಿ ಅಧ್ಯಕ್ಷರಾದ ಸಹದೇವ್ ಬಾಲಕೃಷ್ಣ ಅವರು ಈಡೀ ಪ್ರಪಂಚದಲ್ಲಿ ಇಂದು ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ದೇಶದ ಕಾಫಿಯ ರುಚಿಯನ್ನು ಹಲವಾರು ರಾಷ್ಟ್ರಗಳು ಮೆಚ್ಚಿಕೊಂಡಿವೆ. ಭಾರತದಲ್ಲಿ ಅರೇಬಿಕ ಹಾಗು ರೊಬಸ್ಟ ಎರಡು ಪ್ರಮುಖ ಕಾಫಿ ತಳಿಗಳಿದ್ದು ಭಾರತದ ರೋಬಸ್ಟ ಕಾಫಿಯು ಪ್ರಪಂಚದಲ್ಲಿಯೆ ಅತ್ಯಂತ ಉತ್ತಮ ಕಾಫಿ ಎಂಬ ಅಭಿಪ್ರಾಯವಿದೆ. ಭಾರತ ಬೆಳೆಯುವ ಶೇಖಡ 70% ಕಾಫಿಯನ್ನು ವಿದೇಶಗಳೀಗೆ ರಪ್ಟು ಮಾಡುತ್ತಿದೆ. ನಾವು ಮುಂದಿನ ದಿನಗಳಲ್ಲಿ ಈ ಹವಮಾನದಲ್ಲಿ ಮತ್ತಷ್ಟು ಗುಣಮಟ್ಟದ ಕಾಫಿ ಬೆಳೆಯುವುದು. ಇಳುವರಿ ಹೆಚ್ಚಿಸುವುದು ಈ ಬಗ್ಗೆ ಗಮನಾರ್ಹ ಕೆಲಸಗಳನ್ನು ಮಾಡಬೇಕಿದೆ ಎಂದರು.
ಕರ್ನಾಟಕ ಬೆಳಗಾರರ ಸಂಘ ಕೆ.ಪಿ.ಎ ಅಧ್ಯಕ್ಷರಾದ ಸಲ್ಮಾನ್ ಬಸೀರ್ ಮಾತನಾಡಿ ಕಾಫಿ ದಿನಾಚರಣೆ ಅಂಗವಾಗಿ ಇಂದು ಸೈಕಲಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಫಿ ಬಗ್ಗೆ ಕಾಫಿ ಉತ್ಪನ್ನಗಳ ಕುರಿತು ಜನರೀಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾಫಿ ಸೇವನೆಯು ಉತ್ತಮ ಆರೋಗ್ಯದ ಜೊತೆಗೆ ಲವಲವಿಕೆಯಿಂದ ಇರುವಂತೆ ಮಾಡುತ್ತದೆ ಇತ್ತಿಚ್ಚಿಗೆ ಯುವ ಜನಾಂಗ ಎನರ್ಜಿ ಪಾನಿಯಗಳನ್ನು ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಇದು ತಪ್ಪು. ಪ್ರಕೃತಿಯಲ್ಲಿ ಬೆಳೆಯುವ ಕಾಫಿ ಯಂತಹ ಅರೋಗ್ಯಕ್ಕೆ ಉಪಯುಕ್ತವಾದ ಪಾನಿಯಗಳನ್ನು ನಿಯಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದವರು ಸಲಹೆ ನೀಡಿದ್ದರು.
ಕಾರ್ಯಕ್ರಮದಲ್ಲಿ ಕೆ.ಪಿ.ಎ ಸಂಚಾಲಕರಾದ ರಾಜರಾಮ್, ಕಾರ್ಯದರ್ಶಿ ಭವಿಷ್ ನಾಚಪ್ಪ, ಕುಶಾಲಪ್ಪ ಮುಂತಾದವರಿದ್ದರು.


