ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಆಶಾ ಕಿರಣ ಅಂಧ ಮಕ್ಕಳ ಪಾಠ ಶಾಲೆಯಲ್ಲಿ ಗುರುವಾರ ಕರ್ನಾಟಕ ಬೆಳೆಗಾರರ ಸಂಘ ಹಾಗು ಕಾಫಿ ಕಮಿಟಿ – ಉಪಾಸಿ ವತಿಯಿಂದ ಅಂತರಾಷ್ಟ್ರೀಯ ಕಾಫಿ ದಿನಾಚರಣೆ ಆಚರಿಸಲಾಯಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಜೆ.ಪಿ. ಕೃಷ್ಣೇಗೌಡ ಅವರು ಇಂದು ಅಂತರಾಷ್ಟ್ರೀಯ ಕಾಫಿ ದಿನಾಚರಣೆ. ಈ ಕಾರ್ಯಕ್ರಮ ಆಚರಿಸಲು ಚಿಕ್ಕಮಗಳೂರು ಜಿಲ್ಲೆಯವರಾದ ನಮ್ಮಗೆ ಹೆಮ್ಮೆ ಆಗುತ್ತಿದೆ. ಕಾರಣ ಭಾರತ ದೇಶದಲ್ಲಿ ಕಾಫಿ ಬೆಳೆಗೆ, ಕಾಫಿ ಉದ್ಯಮಕ್ಕೆ ಚಿಕ್ಕಮಗಳೂರು ಜಿಲ್ಲೆಯು ಹೆಚ್ಚಿನ ಕೊಡುಗೆ ನೀಡುತ್ತಿದೆ. ನಮ್ಮ ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳಲ್ಲಿ ರೈತರು ಉತ್ತಮವಾದ ಗುಣ ಮಟ್ಟದ ಕಾಫಿಯನ್ನು ಬೆಳೆಯುವ ಮೂಲಕ ಕಾಫಿ ಸೇವನೆಗೆ ಹಾಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಕ್ಷೇತ್ರಕ್ಕೆ ಆನೇಕರು ಕೊಡುಗೆಗಳನ್ನು ನೀಡಿದ್ದಾರೆ. ಹಾಗೆ ದಿವಂಗತ ಸಿದ್ದಾರ್ಥ ಹೆಗ್ಗೆಡೆ ಅವರು ನಮ್ಮ ಜಿಲ್ಲೆಯವರೆ ಆಗಿದ್ದು ಕಾಫಿ ಉದ್ದಿಮೆಯಲ್ಲಿ ದೇಶ ವಿದೇಶಗಳು ಗುರುತಿಸುವ ಗಮನಾರ್ಹ ಕೆಲಸ ಮಾಡಿದ್ದಾರೆ. ಭಾರತ ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಕಾಫಿ ಡೇ ಎಂಬ ಕಾಫಿ ಶಾಪ್‍ಗಳನ್ನು ತೆರೆದು ಚಿಕ್ಕಮಗಳೂರಿನ ಕಾಫಿಯನ್ನು ಹಲವು ರಾಷ್ಟ್ರಗಳೀಗೆ ಪರಿಚಯಿಸಿದ ಕೀರ್ತಿ ಅವರೀಗೆ ಸಲ್ಲುತ್ತದೆ. ಚಿಕ್ಕಮಗಳೂರಿನ ಕಾಫಿ ತೋಟಗಳು ಕಾಫಿ ಕೃಷಿ ಜೊತೆಗೆ ಉತ್ತಮ ಪರಿಸರ ಗಾಳಿಯನ್ನು ಕಾಪಾಡಿಕೊಂಡು ಬಂದಿದೆ. ಮುಂದಿನ ಪೀಳಿಗೆ ಕೂಡ ನಮ್ಮ ಪಶ್ಚಿಮಘಟ್ಟ ಪ್ರದೇಶ, ಪರಿಸರ ಹಾಗೆ ಕಾಫಿ ಕೃಷಿಯನ್ನು ಕಾಪಾಡಿಕೊಂಡು ಹೋಗಬೇಕು. ನಮ್ಮ ಈ ಶಾಲೆಗೆ ಕಾಫಿ ಬೆಳೆಗಾರರು, ಬೆಳೆಗಾರರ ಸಂಘಟನೆಗಳು ಹಲವು ವರ್ಷಗಳಿಂದ ಧಾನ ನೀಡುತ್ತ ಮಕಳ ಶಿಕ್ಷಣಕ್ಕೆ ಕೊಡುಗೆಗಳನ್ನು ನೀಡುತ್ತ ಬಂದಿದ್ದು ಇವೆಲ್ಲವು ಪುಣ್ಯದ ಕೆಲಸವಾಗಿದೆ ಎಂದು ನುಡಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಹುಣಸೆಮಕ್ಕಿ ಮಹೇಶ್ ಮಾತನಾಡಿ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಕಾಫಿ ದಿನಾಚರಣೆ ಮಾಡಲಾಗುತ್ತಿದೆ ಇದು ಸಂತಸ ತಂದಿದೆ ನಮ್ಮ ಶಾಲೆಗೆ ಆನೇಕ ಕಾಫಿ ಬೆಳೆಗಾರರು ಹಲವು ರೀತಿ ಸಹಾಯಗಳನ್ನು ನೀಡಿದ್ದಾರೆ ಹಾಗೆಯೆ ಶಾಲೆಯನ್ನು ಗುರಿತಿಸಿ ಇಂದು ಕಾಫಿ ದಿನ ಆಚರಣೆ ಮಾಡಲಾಗುತ್ತಿರುವುದು ಸಂತೋಷವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಪಿ.ಎ ಸೈನ್ಟಿಫಿಕ್ ಕಮಿಟಿ ಸಂಚಾಲಕರಾದ ರಾಜರಾಮ್ ಅವರು ತಾವು ಶಾಲೆಯ ದಿನಗಳಿಂದ ಆಶಾಕಿರಣ ಪಾಠ ಶಾಲೆ ಹಾಗು ಜೆ.ಪಿ ಕೃಷ್ಣೇಗೌಡ ಅವರ ವೈಧ್ಯಕೀಯ ವೃತ್ತಿ, ಸಮಾಜ ಸೇವೆ ನೋಡುತ್ತ ಬೆಳೆದವರು. ಕಾಫಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ಸಮಾಜಕ್ಕೆ ಇಂತಹ ಶಾಲೆಯ ಮಕ್ಕಳೀಗೆ ಸಾಧ್ಯವಾದ ಕೊಡುಗೆಗಳನ್ನು ನೀಡಲು ಪ್ರಯತ್ನಿಸುತ್ತೇವೆ ಹಾಗು ಕಾಫಿ ಬೆಳೆ ಉದ್ಯಮದಲ್ಲಿ ಮತ್ತಷ್ಟು ಮುಂದುವರೆಯುವ ಗುರಿ ಇಟ್ಟುಕೊಳ್ಳಲಾಗಿದೆ ಇದಕ್ಕೆ ಸಂಘಟನೆಯ ಸದಸ್ಯೆರೆಲ್ಲರ ಬೆಂಬಲ ಸಹಕಾರ ಇರುತ್ತದೆ ಎಂದು ಹೇಳಿದ್ದರು. ಕಾರ್ಯಕ್ರಮಕ್ಕು ಮುನ್ನ ದಿವಾಂಗತ ಸಿದ್ದಾರ್ಥ ಹೆಗ್ಗಡೆ ಅವರ ಬಾವ ಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ಕೆ.ಪಿ.ಎ ಅಧ್ಯಕ್ಷರಾದ ಸಲ್ಮಾನ್ ಬಸೀರ್, ಉಪಾಸಿ ಅಧ್ಯಕ್ಷರಾದ ಶ್ರೀ ಸಹದೇವ್ ಬಾಲಕೃಷ್ಣ, ಕೆ.ಪಿ.ಎ ಕಾರ್ಯದರ್ಶಿ ಭವಿಷ್ ನಾಚಪ್ಪ, ಶಾಲೆಯ ಶಿಕ್ಷಕರು, ಸಿಬ್ಬಂದಿಗಳು, ವಿಧ್ಯಾರ್ಥಿಗಳು ಹಾಜರಿದ್ದರು.


