ಕರ್ನಾಟಕ ಧ್ವನಿ ಸಂಘದ ಮೂಡಿಗೆರೆ ತಾಲ್ಲೂಕು ಅಧ್ಯಕ್ಷರಾಗಿ ಹಳಸೆ ಗ್ರಾಮದ ಜಯಕುಮಾರ್ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಮಾತನಾಡಿದ ಜಯಕುಮಾರ್ ಹಳಸೆ, 2013ರಲ್ಲಿ ಕೆಸವಳಲು ರಾಘವೇಂದ್ರ ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಕರ್ನಾಟಕ ಧ್ವನಿ ಸಂಘವು ಹಲವು ಜನಪರ ಹೋರಾಟ ಹಾಗೂ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಸರ್ಕಾರದ ಗಮನಕ್ಕೆ ಸಾರ್ವಜನಿಕ ಸಮಸ್ಯೆಗಳನ್ನು ತಂದು ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸಂಘವು ಕಾರ್ಯನಿರ್ವಹಿಸಿದೆ ಎಂದು ತಿಳಿಸಿದರು. ಹಿಂದಿನ ತಂಡದ ಕಾರ್ಯಗಳನ್ನು ಮುಂದುವರಿಸಿಕೊಂಡು ನೂತನ ತಂಡವೂ ಜನಪರವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಉಪಾಧ್ಯಕ್ಷರಾಗಿ ನೂತನ್ ಬೆಟ್ಟಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಕಡಿದಾಳ್, ಖಜಾಂಚಿಯಾಗಿ ಸಾರ್ಥಕ್ ಮುತ್ತಿಗೆಪುರ, ಪಟ್ಟಣ ಅಧ್ಯಕ್ಷರಾಗಿ ಮನೋಜ್ ಹಾಗೂ ಕಾರ್ಯದರ್ಶಿಯಾಗಿ ಪುನೀತ್ ಕುಮಾರ್ ಆಯ್ಕೆಯಾಗಿದ್ದಾರೆ. ಗೋಣಿಬೀಡು ಹೋಬಳಿ ಅಧ್ಯಕ್ಷರಾಗಿ ಹಡ್ಲಗದ್ದೆಯ ಅಭಿ ಹಾಗೂ ಬಣಕಲ್ ಹೋಬಳಿ ಅಧ್ಯಕ್ಷರಾಗಿ ನವೀನ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಂಘದ ನಿರ್ದೇಶಕರಾದ ಸುಂದರೇಶ್ ಕೆಸವಳಲು, ಪಟದೂರು ಅಕ್ಷತ್, ಸಂಜಯ್ ಕೊಟ್ಟಿಗೆಹಾರ, ಹೊರಟಿ ಸಂದೇಶ್, ಲಿಂಗೇಶ್, ಬಕ್ಕಿ ಪ್ರಸಾದ್, ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


