ಲಯನ್ಸ್ ಕ್ಲಬ್ ಗೋಣಿಬೀಡು ಮಾತೃಶ್ರೀ ವತಿಯಿಂದ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯನ್ನು ಜನ್ನಾಪುರದ ಎಲ್.ಎಂ. ಕಾಫಿ ವರ್ಕ್ಸ್‍ನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಲಯನ್ಸ್ ಕ್ಲಬ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ಹಾಗೂ ಕಾಫಿ ಪುಡಿಯನ್ನು ವಿತರಿಸಲಾಯಿತು. ಕಾಫಿ ಬೆಳೆಗಾರರು, ಸಾರ್ವಜನಿಕರು ಹಾಗೂ ಕಾಫಿ ಕ್ಷೇತ್ರದೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವವರಿಗೆ ಕಾಫಿಯ ಮಹತ್ವ ಹಾಗೂ ಕಾಫಿ ಬೆಳೆಗಾರರ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ದಿನಾಚರಣೆ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಲಯನ್ಸ್ ಕ್ಲಬ್ ಗೋಣಿಬೀಡು ಮಾತೃಶ್ರೀ ಅಧ್ಯಕ್ಷರಾದ ಲಯನ್ ನಾಗರಾಜ್ ಎಚ್.ಎಸ್., ಮಲೆನಾಡಿನ ಆರ್ಥಿಕತೆಯಲ್ಲಿ ಕಾಫಿ ಬೆಳೆಗೆ ಮಹತ್ವದ ಸ್ಥಾನವಿದೆ. ಕಾಫಿ ಬೆಳೆಗಾರರ ಪರಿಶ್ರಮದಿಂದಲೇ ನಮ್ಮ ಕಾಫಿಗೆ ದೇಶ-ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ. ಕಾಫಿ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕಾಫಿ ಬೆಳೆಗಾರರ ಶ್ರಮವನ್ನು ಗೌರವಿಸುವ ಹಾಗೂ ಸಾರ್ವಜನಿಕರೊಂದಿಗೆ ಸಂತಸ ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಲಯನ್ಸ್ ಕ್ಲಬ್ ವತಿಯಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ವಿಶ್ವಾಸ್, ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ ಲಯನ್ ನವೀನ್ ಕುಮಾರ್ ಎಂ.ಸಿ., ಲಯನ್ಸ್ ಜಿಲ್ಲಾ ಮೈಕ್ರೋ ಕ್ಯಾಬಿನೆಟ್ ಸದಸ್ಯರಾದ ಲಯನ್ ರಾಮ್ ಪ್ರಸಾದ್ ಯು.ಎಂ., ಒಎಈ, ಲಯನ್ಸ್ ಮಾತೃಶ್ರೀ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ : ಸಿ ಎಲ್ ಪೂರ್ಣೇಶ್ ಚಕ್ಕುಡಿಗೆ


