October 7, 2026
;
poustika 2

 

 

ಮಕ್ಕಳಿಗೆ ತಾಯಿಯ ಎದೆಹಾಲು ಉಣಿಸುವಿಕೆ ಅತ್ಯಂತ ಪ್ರಮುಖವಾಗಿದ್ದು, ಗರ್ಭಿಣಿ ಮಹಿಳೆಯರು ಹಳ್ಳಿಗಳಲ್ಲಿ ಸಿಗುವಂತಹ ಪೌಷ್ಠಿಕ ಆಹಾರವನ್ನು ಬಳಸಿಕೊಳ್ಳಿ ಎಂದು ಶಾಸಕಿ ನಯನ ಮೋಟಮ್ಮ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಶಿಶು ಅಭಿವೃದ್ಧಿ ಯೋಜನೆ ಮೂಡಿಗೆರೆ ಬಾಲಭವನ ಕಟ್ಟಡದ್ದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಲ್ಲಿ ಪೌಷ್ಠಿಕಾಂಶ ಹಾಗೂ ಆರೋಗ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ ಎಂದರು.

ತಾಯಂದಿರು ಮಕ್ಕಳಿಗೆ ನಿರಾಂತರವಾಗಿ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಷೇಶವಾಗಿ ಅಂಗನವಾಡಿ ಫಲಾನುಭವಿಗಳಿಗೆ ಅನ್ನಪ್ರಸನ್ನ, ಅಕ್ಷರ ಅಭ್ಯಾಸ, ಸೀಮಂತ

ಮತ್ತು ಸಾಂಕೇತಿಕವಾಗಿ ಭಾಗ್ಯಲಕ್ಷ್ಮಿ ಪಾಸ್‌ಪುಸ್ತಕಗಳನ್ನು ಶಾಸಕಿ ನಯನ ಮೋಟಮ್ಮ ವಿತರಿಸಿದರು.

ಮುಖ್ಯ ಅಥಿತಿಗಳಾಗಿ ತಾಲೂಕು ವೈದ್ಯಾಧಿಕಾರಿ ಅಶ್ವತ್ ಬಾಬು,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಡಾ.ಜಗದೀಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಂಪ ಎಂ.ಎಸ್, ಹಿರಿಯ ಮೇಲ್ವಿಚಾರಕಿ ಶೋಭ,  ಮೇಲ್ವಿಚಾರಕಿ ಪವಿತ್ರ, ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *