October 12, 2026
;
suddi-4 (3)

 

 

ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿರುವ ಸರಕಾರಿ ಗೋಮಾಳ, ಆಟದ ಮೈದಾನ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಕೂಡಲೇ ತೆರವುಗೊಳಿಸಬೇಕೆಂದು ಒತ್ತಾಯಿಸಿ ತ್ರಿಪುರ ಗ್ರಾಮಸ್ಥರು ಗುರುವಾರ ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಸ್.ಅಶ್ವಿನಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತ್ರಿಪುರ ಗ್ರಾಮಸ್ಥರು, ಬಣಕಲ್ ಹೋಬಳಿ ತ್ರಿಪುರ ಗ್ರಾಮದ ಸರ್ವೆ ನಂ.53ರಲ್ಲಿ ಸುಮಾರು 4 ಎಕರೆ ಸರಕಾರಿ ಗೋಮಾಳ ಜಮೀನನ್ನು ಸಾರ್ವಜನಿಕ ಉದ್ದೇಶ ಹಾಗೂ ಶಾಲಾ ಆಟದ ಮೈದಾನಕ್ಕಾಗಿ ಉಳಿಸಿಕೊಳ್ಳಲಾಗಿತ್ತು. ಅದನ್ನು ಜೆಸಿಬಿ ಬಳಸಿ ಅಗಲವಾದ ಟ್ರಂಚ್ ತೆಗೆದು ಕಾಫಿ ಗಿಡಗಳನ್ನು ನೆಡಲು ಕೆಲವರು ಮುಂದಾಗಿದ್ದಾರೆಂದು ದೂರಿದರು.

ಅಕ್ರಮ ಒತ್ತುವರಿ ಹಾಗೂ ಟ್ರಂಚ್ ನಿರ್ಮಿಸಿದ್ದರಿಂದ ಮಳೆಯಿಂದ ಭೂ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಗ್ರಾಮಸ್ಥರ ಜೀವನೋಪಾಯಕ್ಕೂ ತೊಂದರೆಯಾಗಲಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಸರಕಾರಿ ಜಮೀನಿನ ಗಡಿ ಗುರುತಿಸಿ, ಒತ್ತುವರಿ ತೆರವುಗೊಳಿಸಬೇಕು. ಅದನ್ನು ಶಾಲೆ ಆಟದ ಮೈಧಾನ ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮೀಡಲಿರಿಸಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಚನ್ನಕೇಶವಗೌಡ, ಸಾಧನ್, ಕೌಶಿಕ್, ಲೋಕೇಶ್, ನಾಗೇಶ್, ಅರುಣ್, ಆಶಾ, ಪ್ರೇಮಾ, ಪಾರ್ವತಿ, ಕುಸುಮ, ಕಮಲ, ಮಂಜುಳ ಮತ್ತಿತರರಿದ್ದರು.

 

 

Leave a Reply

Your email address will not be published. Required fields are marked *